
ಬಲಿಷ್ಟ ಸರಕಾರ ರಚನೆಗೆ ಮುಂಬಯಿ ತುಳು ಕನ್ನಡಿಗರ ಸಹಕಾರ ಅಗತ್ಯ…. ರಮಾನಾಥ್ ರೈ.
ಚಿತ್ರ ವರದಿ… ಉಮೇಶ್ ಕೆ.ಅಂಚನ್
ಕರ್ನಾಟಕ ರಾಜ್ಯದಲ್ಲಿ ಸರಕಾರವು ಪ್ರಣಾಳಿಕೆಯಲ್ಲಿ ನುಡಿದಂತೆ ನಡೆದು ಯಶಸ್ವಿಯಾಗಿ ಮರು ಅಧಿಕಾರ ಪಡೆದು ಕೊಂಡಿದೆ. ಬಡ ಜನರ ಹಿತಕ್ಕಾಗಿ ಕೇಂದ್ರದಲ್ಲೂ ಐಎನ್ ಡಿಐ ಸರಕಾರದ ಅಗತ್ಯವಿದೆ. ಪ್ರಸ್ತುತ ಸರಕಾರವು ರೈತರ ಬೇಡಿಕೆ ಈಡೇರಿಸುವಲ್ಲಿ , ಉದ್ಯೋಗ ಸೃಷ್ಟಿಸುವುದರಲ್ಲಿ ವಿಫಲವಾಗಿದೆ. ಸಾಲ ಮನ್ನಾ ಮಾಡುವುದರಲ್ಲಿ ಬಡವರು ವಂಚಿತರಾಗಿದ್ದಾರೆ. ಡೀಸೆಲ್, ಪೆಟ್ರೋಲ್ ಹಾಗೂ ಅನಿಲಗಳು ಬೆಲೆ ಏರಿ ಸಾಮಾನ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಮ್ಮ ನಾಡಿನಲ್ಲಿ ಹುಟ್ಟಿ ಅಭಿವೃದ್ಧಿಯನ್ನು ಹೊಂದಿ ಖ್ಯಾತಿಯನ್ನು ಪಡೆದ ಬ್ಯಾಂಕನ್ನು ಇತರ ದಿವಾಳಿ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿದ್ದಾರೆ..ಪಕ್ಷಾಂತರ ಮಸೂದೆಯನ್ನು ರದ್ದುಪಡಿಸಿ ಪಕ್ಷ ಒಡೆಯುವ ಕೆಲಸ ನಡೆಯುತ್ತಿದೆ. ತಾನೇ ಬ್ರಷ್ಟಾಚಾರಿ ಎಂದು ಹೆಸರಿಟ್ಟ ಪ್ರಭಾವಿ ವ್ಯಕ್ತಿಗಳನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.ಕೇಂದ್ರದಲ್ಲಿ ಮುಂದಿನ ಬಲಿಷ್ಟ ಸರಕಾರದ ರಚನೆಗೆ ತುಳು ಕನ್ನಡಿಗರು ಇಂಡಿ ಅಭ್ಯರ್ಥಿಗಳನ್ನು ಮತ ನೀಡಿ ಚುನಾಯಿಸಬೇಕೆಂದು ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ್ ರೈ ಹೇಳಿದರು.
ಅವರು ಮೇ.15ರಂದು ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ನೆಲೆಸಿರುವ ತುಳು ಕನ್ನಡಿಗರ ಸಹಕಾರ ಆಶಿಸುವ ಉದ್ದೇಶದಿಂದ ಐಎನ್ ಡಿಐ ಯ ಹಿರಿಯ ರಾಜಕೀಯ ಮುಖಂಡರು ಅಂಧೇರಿ ಪೂರ್ವದ ಚಕಲಾ ಸಾಯಿಪ್ಯಾಲೇಸ್ ಹೋಟೇಲಿನ ಸಭಾಗೃಹದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಇನ್ನೋರ್ವ ಕರ್ನಾಟಕ ಸರಕಾರದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಹಿಂದಿನ 80% ಇದ್ದ ಭಾರತದ ಬಡತನ ರೇಖೆಯು 1914ರಲ್ಲಿ 14% ಕ್ಕೆ ಇಳಿದು ಇದೀಗ 40%ಕ್ಕೆ ಏರಿದೆ. ಎಪ್ಪತ್ತು ವರ್ಷಗಳಲ್ಲಿ ಇದ್ದ ಭಾರತದ ಸಾಲದ ಹೊರೆಯು 55 ಲಕ್ಷ ಕೋಟಿಯಿಂದ ಇದೀಗ 130 ಲಕ್ಷ ಕೋಟಿಗೇರಿದೆ. ಚೈನಾ ಮಾಡಿದ ಅತಿಕ್ರಮಣವನ್ನು ಬದಿಗಿಟ್ಟು ಕೇವಲ ಪಾಕಿಸ್ತಾನ ಮಾಡಿದ ಅತಿಕ್ರಮಣಕ್ಕೆ ಬೊಬ್ಬೆ ಹಾಕುತ್ತಿದ್ದೇವೆ. ಸರಕಾರವು ಕೇವಲ ವಿರೋದ ಪಾರ್ಟಿಯ ಜನರಿಗೆ ಐಟಿ, ಸಿಬಿಐ,ಇಡಿಯಿಂದ ತೊಂದರೆ ನೀಡುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪಾರ್ಲಿಮೆಂಟಿನಲ್ಲಿ ಮಾತಾಡುವ ಅವಕಾಶ ಇಲ್ಲ. ಇಂದು ಅವರು 3600 ಕಿ.ಮೀ ಪಾದಯಾತ್ರೆಯಲ್ಲಿ ಹಲವಾರು ರಾಜ್ಯಗಳಲ್ಲಿ ಸುತ್ತಾಡಿ ಸಾಮಾನ್ಯ ಜನರ ಪರಿಸ್ಥಿತಿಯನ್ನು ಅರ್ಥೈಸಿಕೊಂಡಿದ್ದಾರೆ. ಅವರ ಈ ಕಾರ್ಯಕ್ಕೂ ಚೇಷ್ಟೆ ಮಾಡಿ ಅನೇಕ ವ್ಯಂಗ ಹೆಸರಿಟ್ಟಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಸಭಾ ಚುನಾವಣಾ ಸಮಯದಲ್ಲಿ ಹೊರಡಿಸಿದ ಪ್ರಣಾಳಿಕೆಗಳು ಎಲ್ಲಾ ಕಾರ್ಯಗತವಾಗಿವೆ . ಕೇಂದ್ರದಲ್ಲೂ ಇಂತಹ ಬದಲಾವಣೆ ಆಗಲು ತುಳು ಕನ್ನಡಿಗರು ಸಹಕರಿಸಬೇಕೆಂದರು.
ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಐವನ್ ಡಿಸೋಜ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರವು ಜನರಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ನೀಡಿದೆ. ಸರಕಾರವು ಬಡವರ, ರೈತರ, ಕಾರ್ಮಿಕ ವರ್ಗದವರ ಚಿಂತನೆ ಮಾಡುತ್ತಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ರೂ.2000 ಸಹಾಯಧನ, ಉಚಿತ ವಿದ್ಯುತ್, ಸದಸ್ಯರಿಗೆ 5 ಕಿಲೋ ಅಕ್ಕಿ ಹಾಗೂ 5 ಕಿಲೋ ಅಕ್ಕಿಯ ಹಣ, ಮಹಿಳೆಯರಿಗೆ ಕರ್ನಾಟಕದಾದ್ಯಂತ ಬಸ್ಸಿನ ಉಚಿತ ಪ್ರಯಾಣ, ಡಿಗ್ರಿ ಡಿಪ್ಲೊಮಾ ಮಾಡಿ ನಿರುದ್ಯೋಗಿ ಯಾಗಿದ್ದು ವರಿಗೆ ತಿಂಗಳಿಗೆ 3 ಸಾವಿರದ ಅನುದಾನ ನೀಡಲು ಆರಂಭಿಸಿದೆ. ಸರ್ಕಾರವು ಯಾವುದೇ ಸುಳ್ಳು ಆಶ್ವಾಸನೆಯನ್ನು ನೀಡಲಿಲ್ಲ.ಸವಲತ್ತಿನಲ್ಲಿ ಜಾತಿ ಮತ ಬೇಧವಿಲ್ಲದೆ ಭಾರತೀಯರೆಲ್ಲರೂ ಒಂದೇ ಎಂದು ಎಲ್ಲರಿಗೂ ಸಮಾನವಾಗಿ ನೀಡಿದೆ.ಇದರಿಂದಾಗಿ ಜನರಲ್ಲಿ ಕೇಂದ್ರದಲ್ಲಿ ಬದಲಾವಣೆ ತರುವ ಯೋಚನೆ ಬಂದಿದೆ.ಆದ್ದರಿಂದ ಈ ಬಾರಿ ಕಾಂಗ್ರೆಸ್ ಮೈತ್ರಿ ಕೂಟ ಅಧಿಕಾರಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತವೆ.ರಾಷ್ಟ್ರದ ಜನರಿಗೆ ಭರವಸೆಯ ಬದುಕು ಮರಳಲಿದೆ.ದೇಶದ ಸಂವಿಧಾನದ ನಾಶವಾಗುತ್ತಿರುವುದನ್ನು ನಿಲ್ಲಿಸಬೇಕು. ಕೇಂದ್ರದಲ್ಲಿ ಐಎನ್ ಡಿಐ ಸರಕಾರದ ಬಂದಲ್ಲಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿಯ ಅನುದಾನ, ಕುಟುಂಬಕ್ಕೆ 25 ಲಕ್ಷದ ವೈದ್ಯಕೀಯ ವಿಮೆ, ಬಡ ರೈತರ ಸಾಲ ವಜಾ ಹಾಗೂ ಕಾರ್ಮಿಕರ ವೇತನದಲ್ಲಿ ವೃದ್ದಿ ಆಗಲಿದೆ. ಕರ್ನಾಟಕದಂತೆ ಕೇಂದ್ರ ಸರ್ಕಾರದ ಯೋಜನೆಗಳು ಇಂಡಿಯಾ ಮೈತ್ರಿ ಕೂಟಕ್ಕೆ ವರದಾನವಾಗಲಿದೆ.ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಸರಕಾರ ಬದಲಾಗಲು ತುಳು ಕನ್ನಡಿಗರು ಐಎನ್ ಡಿಐ ಉಮೇದುವಾರಿಗೆ ಮತ ಚಲಾಯಿಸಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಡಾ.ಸುರೇಶ್ ಶೆಟ್ಟಿ, ಮುಂಬೈ ಕಾಂಗ್ರೆಸ್ ಐ ಪಕ್ಷದ ಹಾಲಿ ಉಪಾಧ್ಯಕ್ಷೆ ಜಾನೆಟ್ ಎಲ್. ಡಿಸೋಜಾ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೀಯುಶ್ ರೋಡ್ರಿಗಸ್ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹಾಗೂ ಅಖಿಲ ಭಾರತೀಯ ಕಿಸಾನ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಮಿಟಿಯ ರಾಷ್ಟ್ರೀಯ ಜಂಟಿ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ ಉಪಸ್ಥಿತರಿದ್ದರು