
ಮುಂಬಯಿ ಮೇ 21. ಮಲಾಡ್ ಪೂರ್ವ ದ ಪ್ರಸಿದ್ಧ ಪುರೋಹಿತರಾಗಿರುವ ವೇದಮೂರ್ತಿ ಸತೀಶ್ ಎಮ್ ಭಟ್ ಅವರುಮಾರ್ಗದರ್ಶನದಲ್ಲಿಸ್ಥಾಪನೆಗೊಂಡಿರುವ ತಥಾಸ್ತು ಪೌಂಡೇಷನ್ ಆಶ್ರಯದಲ್ಲಿ ಮೇ 24ರಂದು ಮತ್ತು 25ರಂದು ಎರಡು ದಿನಗಳು ಧಾರ್ಮಿಕ ಪೂಜಾ ಕಾರ್ಯಗಳು ಮತ್ತು ಕೊರಗಜ್ಜನ ನೇಮೋತ್ಸವ ನಡೆಯಲಿದೆ .
ಮೇ 24ನೇ ಶುಕ್ರವಾರ ಮಧ್ಯಾಹ್ನ 3.00 ಶ್ರೀ ಸತ್ಯನಾರಾಯಣ ಮಹಾಪೂಜೆ, ಸಂಜೆ ಸಂಜೆ 5.30 ನೃತ್ಯ ಗೀತೆ, ಸಂಜೆ 7.00 ಗಂಟೆಗೆ ಮಾತಾ ಕಿ ಚೌಕಿ ಜರಗಲಿದೆ.

ರಾತ್ರಿ 8.00ಕ್ಕೆ ಮಹಾಪ್ರಸಾದ ಮಲಾಡ್ ಪೂರ್ವದ ರೆಹೇಜಾ ಟೌನ್‌ಶಿಪ್ ಸಾಯಿ ನಗರ ದಲ್ಲಿರುವ ಶ್ರೀ ರುದ್ರ ಭದ್ರಕಾಳಿ ದೇವಸ್ಥಾನದಲ್ಲಿ ನಡೆಯಲಿದೆ.
ಮೇ25,ಶನಿವಾರದಂದು ಮಧ್ಯಾಹ್ನ 3ರಿಂದ ರಥೋತ್ಸವ-
ಮಲಾಡ್ ಪೂರ್ವ ರೆಹಜಾ ಟವ್ನ್ ಶಿಪ್ ನ ಶ್ರೀ ರುದ್ರ ಭದ್ರಾಕಾಳಿ ದೇವಸ್ಥಾನದಿಂದ, ಮಲಾಡ್ ಪೂರ್ವದ ದಫ್ತಾರಿ ರಸ್ತೆಯ ಹೀರಾ ಬಜಾರ್ ಬಳಿ ಇರುವ ರಾಮಲೀಲಾ ಮೈದಾನ ಕ್ಕೆ ರಥ ಸಾಗಿಬರಲಿದೆ.
ಸಂಜೆ 4ರಿಂದ ವೇದಮೂರ್ತಿ ಸತೀಶ್ ಭಟ್ ಮತ್ತು ವಿಪ್ರಬಂಧದವರ ಸಹಕಾರದಲ್ಲಿ ರುದ್ರ ಮಹಾಯಜ್ಞ,
ಬಳಿಕ ಭಜನಾ ಕಾರ್ಯಕ್ರಮ, ಸಂಜೆ 7.00ರಿಂದ ಕೊರಗಜ್ಜನ ನೇಮೋತ್ಸವ ಆರಂಭ.
ರಾತ್ರಿ 8.00 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಎರಡೂ ದಿನಗಳ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಾದಿಗಳೆಲ್ಲರೂ ಸಹಕುಟುಂಬ- ಪರಿವಾರದವರೊಂದಿಗೆ ಪಾಲ್ಗೊಂಡು, ಉತ್ಸವದ ಸೊಬಗನ್ನು ಹೆಚ್ಚಿಸಿ, ಕೊರಗಜ್ಜನ ನೇಮೋತ್ಸವದ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ
ತಥಾಸ್ತು ಫೌಂಡೇಶನ್ ಸಂಸ್ಥಾಪಕರುದ
ವೇದಮೂರ್ತಿ ಸತೀಶ್ ಎಂ. ಭಟ್. ಟ್ರಸ್ಟಿಗಳು ಪದಾಧಿಕಾರಿಗಳು ಮಹಿಳಾ ಸದಸ್ಯರು ವಿನಂತಿಸಿಕೊಂಡು ದ್ದಾರೆ.