April 1, 2025
ಕ್ರೀಡೆ

ಡಬ್ಲ್ಯೂ ಐಎಫ್ ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಆಯ್ಕೆ


ಮುಂಬಯಿ. ಮೇ.22. ಮೇ 22 ರಂದು ಆರಂಭಗೊಂಡು ಮೇ 29 ರ ವರೆಗೆ ಶಿರ್ಪುರ್, ಧುಲೆ, ಎಮ್ಎಚ್ ಇಲ್ಲಿ ನಡೆಯಲಿರುವ ಡಬ್ಲ್ಯೂ ಐಎಫ್ಎ ಅಂತರ ಜಿಲ್ಲಾ ಸಬ್ ಜೂನಿಯರ್ ಬಾಲಕರ ಪಂದ್ಯಾವಳಿ (Inter-District Sub Junior Boys Tournament ) ಅಂಡರ್13 ಸ್ಪರ್ಧೆಯಲ್ಲಿ ಮುಂಬಯಿ ತಂಡವನ್ನು ಸಮರ್ಥ್ ಸಿ. ರೈ ಪ್ರತಿನಿಧಿಸುತ್ತಿದ್ದಾರೆ.

ಈತ ಕನಕಿಯಾ ಇಂಟರ್‌ನ್ಯಾಶನಲ್ ಮೀರಾ ಭಾಯಂದರ್‌ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ.ಅಂತರ ಜಿಲ್ಲಾ ಸಬ್ ಜೂನಿಯರ್ಸ್ ಬಾಲಕರ ಟೂರ್ನಮೆಂಟ್ ನಲ್ಲಿ ಆಯ್ಕೆಯಾಗಿರುವ ಸಮರ್ಥ್ ರೈ ಜಿಲ್ಲಾ ಮಟ್ಟದ ಫುಟ್ಬಾಲ್ ಟೂರ್ನಮೆಂಟ್ ಆಟವಾಡಲಿದ್ದಾರೆ‌.

ಸಿಎಫ್ಸಿಐ ಕ್ಲಬ್ಬಿನಲ್ಲಿ ಫುಟ್ಬಾಲ್ ನ ತರಬೇತಿ ಪಡೆಯುತ್ತಿರುವ ಸಮರ್ಥ್ ರೈ 290 ಫುಟ್ಬಾಲ್ ಕ್ರೀಡಾಪಟುಗಳಲ್ಲಿ 18 ರ ಆಯ್ಕೆಯಲ್ಲಿ ಒಬ್ಬರಾಗಿದ್ದಾರೆ. 2011 ಜೂನ್ 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು ಮಿಾಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ .

Related posts

ಉಷಾ ಶ್ರೀಧರ ಶೆಟ್ಟಿ ಇವರ ನಾಯಕತ್ವ ತಂಡಕ್ಕೆ  ಟ್ರೋಪಿ ಯೊಂದಿಗೆ 50,000 ನಗದ ಬಹುಮಾನ

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ : ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ – ಲವ ಕರ್ಕೇರ.

Mumbai News Desk

ಡಬ್ಲ್ಯೂ ಐ ಎಫ್ ಎ ಅಂತರ್ ಜಿಲ್ಲಾ ಸಬ್ ಜ್ಯೂನಿಯರ್ ಫುಟ್ಬಾಲ್ ಪಂದ್ಯಾಟ, ಸಮರ್ಥ್ ರೈ ಅವರ ಅದ್ಬುತ ಆಟದಿಂದ ಮುಂಬಯಿ ತಂಡಕ್ಕೆ ಜಯ.

Mumbai News Desk

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

Mumbai News Desk

ತುಳು ಸಂಘ ಬೊರಿವಲಿ, ಯುವ ವಿಭಾಗದಿಂದ ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವೀ ಮ್ಯಾರಥಾನ್

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

Mumbai News Desk