
ವರದಿ : ಪ್ರಕಾಶ್ಚಂದ್ರ ಎಂ. ಆರ್ (7021931365)
ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 100% ಫಲಿತಾಂಶ
ವಡಾಲ : 2023- 24ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ವಡಲಾದ ರಾಷ್ಟ್ರೀಯ ಕನ್ನಡ ಸಂಸ್ಥೆಯ ಪ್ರೌಢಶಾಲೆಗೆ ಶೇಕಡ 100% ಫಲಿತಾಂಶ ದೊರಕಿದೆ.
ಪರೀಕ್ಷೆಗೆ ಹಾಜರಾದ 144 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದು ಅದರಲ್ಲಿ ನಾಲ್ಕು ವಿದ್ಯಾರ್ಥಿಗಳು ಅತೀ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 36 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಯಾಗುವುದರಿಂದ ಶಾಲೆಗೆ ಶೇಕಡ 100 ಫಲಿತಾಂಶ ದೊರೆಯಲು ಕಾರಣರಾದರು.
ಕಾರ್ತಿಕ್ ಜೈ ರಾಜ್ ಕುಮಾರ್ ಶೆಟ್ಟಿ ಇವರು ಶೇಕಡ 93.6 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದರೆ ಪ್ರಿಯಾಂಶು ಗುಪ್ತಾರವರು 93.4% ಹಾಗೂ ಶ್ವೇತ ವಿಶ್ವಕರ್ಮರವರು ಶೇ 92.6 ಅಂಕಗಳೊಂದಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಅದ್ವಿತೀಯ ಸಾಧನೆಗೆ ಶಾಲಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪಾರ್ಥಸಾರಥಿ ನಾಯ್ಕ, ಉಪಾಧ್ಯಕ್ಷರುಗಳಾದ ಕೆ ಕಮಲ ಹಾಗೂ ಗಣಪತಿ ಶಂಕರಲಿಂಗ, ಶಾಲಾ ವಿಶ್ವಸ್ಥರಾದ ಡಾ.ಬಿ.ಆರ್. ಮಂಜುನಾಥ್, ಮಂಜುನಾಥಯ್ಯ, ಹಾಗೂ ಅನಂತ ಬನವಾಸಿ, ಶಾಲಾ ಗೌರವ ಕಾರ್ಯದರ್ಶಿಗಳಾದ ಶಶಿಕಾಂತ ಜೋಶಿ, ಪದ್ಮಜಾ ಬನವಾಸಿ, ಖಜಾಂಜಿಗಳಾದ ಭವಾನಿ ಭಾರ್ಗವ, ಶಾಲಾ ಕಾರ್ಯತಂತ್ರದ ಸಲಹೆಗಾರ್ತಿ ಸರೋಜ ರಾವ್, ಶಾಲಾ ಮುಕ್ಯೋಪಾಧ್ಯಾಯಿನಿ ಉಮಾಮಹೇಶ್ವರಿ
ಹಾಗೂ ಶಾಲಾ ಪರಿವೀಕ್ಷಕ ಪ್ರಕಾಶ್ಚಂದ್ರ ಎಂ. ಆರ್. ಬಂಗೇರರವರು ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾ ಫಲಿತಾಂಶವು ಉತ್ತಮವಾಗಿ ಬರಲು ಕಾರಣರಾದ ಭೋದಕ ಹಾಗೂ ಭೋದಕೇತರ ವರ್ಗ ಹಾಗೂ ಪಾಲಕರನ್ನು ಮನದುಂಬಿ ಅಭಿನಂದಿಸಿದ್ದಾರೆ.