
ಡಬ್ಲ್ಯೂ ಐಎಫ್ಎ (WIFA) ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಅವರು ಮುಂಬಯಿ ಜಿಲ್ಲೆಯಿಂದ ಆಯ್ಕೆಯಾಗಿದ್ದು ಮೇ 22 ರಂದು ಆರಂಭಗೊಂಡು ಮೇ 29 ರ ವರೆಗೆ ಶಿರ್ಪುರ್, ಧುಲೆ, ಇಲ್ಲಿ ನಡೆದ ಡಬ್ಲ್ಯೂ ಐಎಫ್ಎ ಅಂತರ ಜಿಲ್ಲಾ ಸಬ್ ಜೂನಿಯರ್ ಬಾಲಕರ ಪಂದ್ಯಾವಳಿ (Inter-District Sub Junior Boys Tournament ) ಅಂಡರ್13 ಸ್ಪರ್ಧೆಯಲ್ಲಿ ಮುಂಬಯಿ ತಂಡವನ್ನು ಸಮರ್ಥ್ ಸಿ. ರೈ ಪ್ರತಿನಿಧಿಸಿದ್ದಾರೆ.
ಮಹಾರಾಷ್ಟ್ರ ದ 32 ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮುಂಬೈ ಒಂದಾಗಿದೆ

ಅಂತರ ಜಿಲ್ಲಾ ಸಬ್ ಜೂನಿಯರ್ಸ್ ಬಾಲಕರ ಟೂರ್ನಮೆಂಟ್ ನಲ್ಲಿ ಆಯ್ಕೆಯಾಗಿರುವ ಸಮರ್ಥ್ ರೈ ಜಿಲ್ಲಾ ಮಟ್ಟದ ಫುಟ್ಬಾಲ್ ಟೂರ್ನಮೆಂಟ್ ಆಟವಾಡಿ ಥಾಣೆ ಜಿಲ್ಲೆ ಯನ್ನು 3-0 ಅಂತರದಿಂದ ಸೋಲಿಸಿ ಜಯಭೇರಿ ಸಾಧಿಸಿದ್ದಾರೆ. ಇದರಲ್ಲಿ ಸಮರ್ಥ್ ರೈ ಯವರು ಕೊನೆಯ 20 ನಿಮಿಷ ದಲ್ಲಿ ಎಂಟ್ರಿ ಮಾಡಿ ಒಂದು ಗೋಲ್ ಮತ್ತು ಒಂದು ಅಸಿಸ್ಟ ನಿಂದ 3-0 ಗೋಲನಲ್ಲಿ ಮುಂಬಯಿ ಯನ್ನು ಗೆಲ್ಲಿಸಲು ಸಹಾಯವಾದರು.

ಸಮರ್ಥ್ ರೈ ಕನಕಿಯಾ ಇಂಟರ್‌ನ್ಯಾಶನಲ್ ಮೀರಾ ಭಾಯಂದರ್‌ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ. ಸಿಎಫ್ಸಿಐ ಕ್ಲಬ್ಬಿನಲ್ಲಿ ಫುಟ್ಬಾಲ್ ನ ತರಬೇತಿ ಪಡೆಯುತ್ತಿದ್ದಾರೆ
2011 ಜೂನ್ 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು ಮಿಾಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ .