July 23, 2026
Mumbai News Kannada
ಕ್ರೀಡೆ

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

  

ಮುಂಬಯಿ : ಏಷ್ಯನ್ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಕಮಿಟಿ (AMW) ಗೆ ಮುಂಬಯಿಯ ಉದಯ ಶೆಟ್ಟಿ ಅವರನ್ನು AMW ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. 

ಉದಯ ಶೆಟ್ಟಿ ಯವರು ವೈಟ್ ಲಿಫ್ಟಿಂಗ್ ನಲ್ಲಿ ಉನ್ನತ ಮಟ್ಟದ ಅನುಭವವನ್ನು ಹೊಂದಿದ್ದು, ಒರ್ವ ಯಶಸ್ವೀ ವೈಟ್ ಲಿಫ್ಟರ್ ಆಗಿ ಎಲ್ಲೆಡೆ ಮಿಂಚಿದ್ದಾರೆ. 

ಇವರು  ಹಲವಾರು ವರ್ಷಗಳಿಂದ  ಭಾರತೀಯ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ, ಇವರು ಭಾರತದಲ್ಲಿ ವೇಟ್‌ಲಿಫ್ಟಿಂಗ್ ಕ್ರೀಡೆಯನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು ದೇಶದಲ್ಲಿ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ಸಮುದಾಯದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.

ಪೋಲೆಂಡ್‌ನ ಕ್ರಾಕೋವ್ ನಲ್ಲಿ ನಡೆದ ಮಾಸ್ಟರ್ಸ್ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉದಯ ಎಸ್ ಶೆಟ್ಟಿ ಯವರು ತನ್ನ ತಂಡದ 7 ಮಂದಿ ವೈಟ್ ಲಿಪ್ಟರ್ಸ್ ನೊಂದಿಗೆ ಭಾರತವನ್ನು ಪ್ರತಿನಿಧಿಕರಿಸಿದ್ದಾರೆ. 1994 ರಿಂದ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ನ ಅತ್ಯುತ್ತಮ ರೆಫ್ರಿಗಳಲ್ಲಿ ಒಬ್ಬರು. ಹಲವು ದಶಕದಿಂದಲೂ ಉತ್ತಮ ಸಂಘಟಕ ಹಾಗೂ ತಂಡದ ಉತ್ತಮ ಟೀಮ್ ಲೀಡರ್ ಆಗಿ ಇವರು ಗುರುತಿಸಲ್ಪಟ್ಟಿದ್ದಾರೆ. ರಾಷ್ಟ್ರೀಯ ದಾಖಲೆಯೊಂದಿಗೆ ಹಲವು ವರ್ಷಗಳ ರಾಷ್ಟ್ರೀಯ ಚಾಂಪಿಯನ್ ಆಗಿದ್ದು ಮಹಾರಾಷ್ಟ್ರ ಸರಕಾರವು ಇವರಿಗೆ ಛತ್ರಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸದ್ಯದಲ್ಲೇ  ಲಾಸ್ ವೇಗಾಸ್  ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ತಂಡವನ್ನು ಪ್ರತಿನಿಧೀಕರಿಸಲಿದ್ದಾರೆ. ಕಳೆದ ಬಾರಿಯ ಪ್ಯಾರೀಸ್ ನಲ್ಲಿ ನಡೆದ ಒಲಿಂಪಿಕ್ಸನಲ್ಲಿ ಬಾಗವಹಿಸಿದ್ದಾರೆ.

Related posts

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್

Mumbai News Desk

ಆದರ್ಶ ವಿದ್ಯಾನಿಕೇತನ ಪ್ರೌಢಶಾಲೆ,ಮೀರಾ ರೋಡ್ ನ,ವಾರ್ಷಿಕ ಕ್ರೀಡಾಕೂಟ,

Mumbai News Desk

ಸಿದ್ಧಕಟ್ಟೆ: ಕೊಡಂಗೆ ವೀರವಿಕ್ರಮ ಜೋಡುಕರೆ ಕಂಬಳ :166 ಜೋಡಿ ಭಾಗಿ

Mumbai News Desk

ಡಬ್ಲ್ಯೂ ಐಎಫ್ ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಆಯ್ಕೆ

Mumbai News Desk

ಕಬಡ್ಡಿ ವಿಶ್ವಕಪ್: ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸಿ ಸತತ ಎರಡನೇ ಬಾರಿಗೆ ಕಬಡ್ಡಿ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡ

Mumbai News Desk

ಡೊಂಬಿವಲಿ ಕರ್ನಾಟಕ ಸಂಘ:ಕ್ರೀಡಾ ವಿಭಾಗದ ಒಳಾಂಗಣ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ     

Mumbai News Desk