
ಮೀರಾ ರೋಡ್ ಜೂ 3. ಮೀರಾ-ಭಾಯಂದರ್ ಪ್ರಸಿದ್ಧ ಸಮಾಜ ಸೇವಕ, ಶಿಕ್ಷಣ ತಜ್ಞ, ಬಂಟರ ಸಂಘ ಮೀರಾ- ಭಯಂ ಧರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಬಿಳಿಯೂರುಗುತ್ತು ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ರೈ ಸುಮತಿ ಎಜುಕೇಶನ್ ಟ್ರಸ್ಟಿನ ಆಡಳಿತದಲ್ಲಿರುವ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ 100% ಫಲಿತಾಂಶ ಲಭಿಸಿದೆ.
ಡಾ. ಅರುಣೋದಯ ರೈ ಅವರು ತಮ್ಮ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣವನ್ನು ಕಡಿಮೆ ಸುಲ್ಕ ಪಡೆದು ವಿದ್ಯಾಭ್ಯಾಸವನ್ನು ನೀಡುತ್ತಿದ್ದು ಹಾಗೂ ಕನ್ನಡಿಗರಿಗೆ ವಿಶೇಷವಾದ ರಿಯಾಯಿತಿ ನೀಡುತ್ತಿದ್ದಾರೆ.
ಈ ಸಲದ ಎಸ್ ಎಸ್ ಸಿ ಪರೀಕ್ಷೆ ಯಲ್ಲಿ ಭಾವೇಶ್ ಶೆಟ್ಟಿಗೆ 90.6% ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಈತ ಮನೋಹರ್ ಶೆಟ್ಟಿ ಮತ್ತು ಸವಿತಾ ಶೆಟ್ಟಿ, ದಂಪತಿಯ ಸುಪುತ್ರ. ಮತ್ತು ನೇಹಲ್ ಶೆಟ್ಟಿ ಇವರು ಈ ಸಲದ ಎಸ್ ಎಸ್ ಸಿ ಪರೀಕ್ಷೆಯಲ್ಲಿ 91.2% ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಈತ ರಾಜೇಶ್ ಶೆಟ್ಟಿ ಮತ್ತು ಯಶವಂತಿ ಶೆಟ್ಟಿ, ದಂಪತಿಯ ಸುಪುತ್ರ.
ಉತ್ತಮ ಅಂಕ ಪಡೆದ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಡಾ. ಅರುಣೋದಯ ರೈ, ಸ್ವರ್ಣಲತಾ ಅರುಣೋದಯ ರೈ, ಜೈಕಿರಣ್ ರೈ, ಕಾವ್ಯ ಜೈ ಕಿರಣ್ ರೈ, ಡಾ. ಸ್ವರೂಪ್ ಚೇತನ್ ಶೆಟ್ಟಿ, ಚೇತನ್ ಶೆಟ್ಟಿ ಮತ್ತು ಶಾಲೆಯ ಮಥಾಯಿಸ್ ಫೆರ್ನಾಂಡಿಸ್. ಮುಖ್ಯ ಅಧ್ಯಾಪಕರು ಶಿಕ್ಷಕರು ಅಭಿನಂದಿಸಿದ್ದಾರೆ .