
ನೆರವು ಪಡೆದವರು ಭವಿಷ್ಯದಲ್ಲಿ ಸಂಘದಲ್ಲಿ ಕ್ರೀಯಾಶೀಲರಾದಲ್ಲಿ ಸಂಘದ ಉದ್ದೇಶ ಸಾರ್ಥಕವಾದಂತಾಗುತ್ತದೆ :- ಪ್ರವೀಣ್ ಬೋಜ ಶೆಟ್ಟಿ,
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜೂ10. ರಾಷ್ಟ್ರದಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್ಚಿನವರು ತಳಮಟ್ಟದಿಂದ ಮೇಲಕ್ಕೆ ಬಂದವರು. ಅವರೆಲ್ಲರೂ ಸಾಧನೆ ಮತ್ತು ಪರಿಶ್ರಮದಿಂದ ಗುರುತಿಸಿಕೊಂಡವರು, ಚಾ ಮಾರುವವ ಪ್ರಧಾನಮಂತ್ರಿಯಾಗುತ್ತಾರೆ ,ರಿಕ್ಷಾ ಡ್ರೈವರ್ ಮುಖ್ಯ ಮಂತ್ರಿಗಳಾಗುತ್ತಾರೆ, ನಾನು 48 ವರ್ಷಗಳ ಹಿಂದೆ ಊರಿಂದ ಈ ನಗರಕ್ಕೆ ಆಗಮಿಸಿ ಕಠಿಣ ಪರಿಶ್ರಮದಿಂದ ಶ್ರಮಿಸಿ, ಬಂಟರ ಸಂಘದ ಅಧ್ಯಕ್ಷ ಪದವಿಯನ್ನು ಅಲಂಕರಿಸಬಹುದಾಗಿದ್ದರೆ, ನಮ್ಮ ಸಮಾಜದ ಇಂದಿನ ವಿದ್ಯಾರ್ಥಿಗಳು ಮುಂದೆ ಇದೆಲ್ಲವನ್ನು ಆದರ್ಶವಾಗಿ ಇಟ್ಟುಕೊಂಡು ಬೆಳೆದು ಬಂಟರ ಸಂಘದ ಉನ್ನತ ಪದವಿಯಲ್ಲಿ ಉಳಿತಾಗ ಬಂಟರ ಸಂಘದ ಸೇವೆ ಸಾರ್ಥಕವಾಗುತ್ತದೆ,ಬಂಟರ ಸಂಘ ಮುಂಬಯಿ ದಾನಿಗಳ ಸಹಾಯದಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಯನ್ನು ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ಬಂಧುಗಳಿಗೆ ಆರ್ಥಿಕ ನೆರವನ್ನು ವಿತರಿಸಿದ್ದು ಸಂಘದಿಂದ ವಿದ್ಯಾರ್ಥಿವೇತನ ಯಾ ಆರ್ಥಿಕ ನೆರವು ಪಡೆದ ಸಮಾಜದ ವಿದ್ಯಾರ್ಥಿಗಳು ಮುಂದೆ ಯಶಸ್ವೀ ಜೀವನವನ್ನು ಸಾಗಿಸುದರೊಂದಿಗೆ ಅವರು ಭವಿಷ್ಯದಲ್ಲಿ ಸಂಘದಲ್ಲಿ ಕ್ರೀಯಾಶೀಲರಾದಲ್ಲಿ ಸಂಘದ ಉದ್ದೇಶ ಸಾರ್ಥಕವಾದಂತಾಗುತ್ತದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ನುಡಿದರು.

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಯಿಂದ ಜೂ. 8 ರಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದ ಸಭಾಗ್ರಹದಲ್ಲಿ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ 2024ರ ಆರ್ಥಿಕ ಸಹಾಯವನ್ನು ವಿತರಿಸಲಾಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಬಂಟರ ಸಂಘ ಮುಂಬಯಿ ಸಮಾಜ ಸೇವೆಗಾಗಿಯೇ ಸ್ಥಾಪನೆಯಗಿದ್ದು ಅದಕ್ಕಾಗಿಯೇ ಕೋಟ್ಯಾಂತರ ರೂಪಾಯಿಯನ್ನು ವಿನಿಯೋಗಿಸಲಾಗಿದೆ. ಬಂಟ ಸಮಾಜದಲ್ಲಿನ ಸುಮಾರು ನಾಲ್ಕೂವರೆ ಲಕ್ಷ ಜನ ಸಂಖ್ಯೆಯಲ್ಲಿ ಸುಮಾರೂ ನಾಲ್ಕು ಲಕ್ಷ ಜನರು ಬಡತನದ ರೇಖೆಯಿಂದ ಕೆಳಗಿದ್ದು. ಅವರಿಗೆ ಸಹಾಯ ಹಸ್ತವನ್ನು ನೀಡಲು ಶ್ರೀಮಂತರು ಸಂಘಕ್ಕೆ ದೇೀನಿಗೆ ನೀಡಿದಲ್ಲಿ ಜನ ಸಾಮಾನ್ಯರಿಗೆ ಸಹಾಯ ಮಾಡಲು ನಮಗೆ ಕಷ್ಟವಾಗಲಾರದು. ನಮ್ಮ ಸಮಾಜದ ಮಕ್ಕಳು ಸಂಘದ ಶಾಲೆಯಲ್ಲೇ ಕಲಿತಲ್ಲಿ ಅವರಿಗೆ ಶಾಲಾ ಶುಲ್ಕದಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಲವಾರು ಸೌಲಭ್ಯಗಳು ಲಭ್ಯವಾಗಿದ್ದು ,ಉನ್ನತ ಶಿಕ್ಷಣವನ್ನು ಪಡೆಯಲಿಚ್ಚಿಸುವ ನಮ್ಮ ಸಮಾಜದ ಮಕ್ಕಳು ಅದರ ಪ್ರಯೋಜನವನ್ನು ಪಡೆಯಬೇಕಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉತ್ತರ ಮುಂಬಯಿಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಸಮಾಜ ಸೇವಕರಾದ ಗೋಪಾಲ್ ಶೆಟ್ಟಿ ಯವರು ಮಾತನಾಡುತ್ತಾ ಬಂಟರ ಸಂಘದ ಯಾವುದೇ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಮಾತ್ರವಲ್ಲದೆ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಉಪಸ್ತಿತರಿರುವುದು ಅಭಿಮಾನದ ಸಂಗತಿ. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಬರುರ ಅಗತ್ಯವಿದೆ್. ಅಲ್ಲದೆ ಮಕ್ಕಳಲ್ಲಿ ತಮ್ಮ ಮುಂದಿನ ಯೋಜನೆ ಬಗ್ಗೆ ಧೈರ್ಯ ಮೂಡಿಸಿದಂತಾಗುವುದು. ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ, ಗೌ. ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಲ್ಲಾರ್, ಜೊತೆ ಕೋಶಾಧಿಕಾರಿ, ಶಶಿಧರ ಕೆ. ಶೆಟ್ಟಿ ಇನ್ನಂಜೆ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಇಂದ್ರಾಳಿ ದಿವಾಕರ್ ಶೆಟ್ಟಿ, ಮಹಿಳಾ , ಪಶ್ಚಿಮ ವಲಯ ಸಂಚಾಲಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್ , ಬೋರಿವಲಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಡಾಕ್ಟರ್ ಪಿ ವಿ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪಕಾರ್ಯಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿಎ ಉತ್ತಮ್ ಶೆಟ್ಟಿ ,ಕೋಶಧಿಕಾರಿ ಜಯಪ್ರಕಾಶ್ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯ ಧ್ಯಕ್ಷ ಮುಂಡಪ್ಪ ಎಸ್ ,ಪಯ್ಯಡೆ
ಪ್ರಾದೇಶಿಕ ಸಮಿತಿಯ ಸಂಚಾಲಕರಾದ ನಿಟ್ಟೆ ಮುದ್ದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ಸಂಕೇತ್ ಎಸ್. ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಸಂಚಾಲಕಿ ಶೈಲಜಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಉಪಸ್ಥರಿದ್ದರು




ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ಮತ್ತು ರವೀಂದ್ರ ಎಸ್. ಶೆಟ್ಟಿ ಮತ್ತು ಎರ್ಮಾಳು ಹರೀಶ್ ಶೆಟ್ಟಿ, ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 244ಕ್ಕೂ ವಿದ್ಯಾರ್ಥಿಗಳು ಆರ್ಥಿಕ ನರವು . 10 ಮಕ್ಕಳನ್ನು ದತ್ತ ಸ್ವೀಕರ, ಮತ್ತು ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ ಒಟ್ಟು 16.51 ಸಾವಿರ ಆರ್ಥಿಕ ಧನಸಾಯ ಚೆಕ್ಕದ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿ ಅವರು ಪ್ರಾದೇಶಿಕ ಸಮಿತಿಗ ಹಸ್ತಾಂತರಿಸಿದರು.
ಕಾರ್ಯಕ್ರಮವನ್ನು ರಘುನಾಥ್ ಎನ್ ಶೆಟ್ಟಿ ನಿರೂಪಿಸಿದರು, ಅಶೋಕ್ ಶೆಟ್ಟಿ ಎಲ್ಐಸಿ, ಸಹಕರಿಸಿದರು,
ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿ ಧನ್ಯವಾದ ನೀಡಿದರು
———–
ಸಮಾಜದಲ್ಲಿ ಆರ್ಥಿಕವಾಗಿ ಬಡತನದಲ್ಲಿರುವವರಿಗೆ ಸಹಕರಿಸುವುದೇ ಬಂಟರ ಸಂಘದ ಮುಖ್ಯ ಉದ್ದೇಶ. ಅಲ್ಲದೆ ವಿವಾಹ ವೆಚ್ಚವನ್ನು ಭರಿಸಲು ಅಸಾಧ್ಯವಾದ ಸಮಾಜ ಬಾಂಧವರಿಗೆ ಸಹಕರಿಸಲು ನಮ್ಮ ಪ್ರಾದೇಶಿಕ ಸಮಿತಿಯು ಸೂಕ್ತ ನಿರ್ಣಯ ಕೈಗೊಂಡಿದೆ. ಮಕ್ಕಳಿಗೆ ಅವರ ಭವಿಷ್ಯದ ಬಗ್ಗೆ ಅವರ ಮಾತಾ ಪಿತರು ಸೂಕ್ತ ಪ್ರೋತ್ಸಾಹವನ್ನು ನೀಡುವುದು ಅತೀ ಅಗತ್ಯ.
ಮುಂಡಪ್ಪ ಎಸ್. ಪಯ್ಯಡೆ
ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರ
———
ಮಕ್ಕಳು ಹಣದ ಕೊರತೆಯಿಂದಾಗಿ ತನ್ನ ಮುಂದಿನ ಶಿಕ್ಷಣವನ್ನು ಮಾಡಲಸಾಧ್ಯವಾದಲ್ಲಿ ನಮ್ಮ ಗಮನಕ್ಕೆ ಬಂದಲ್ಲಿ ಅವರಿಗೆ ನಾವು ಸಹಾಯ ನೀಡುವ ವ್ಯವಸ್ಥೆಯನ್ನು ಮಾಡಬಹುದು. ನಮ್ಮ ಮಕ್ಕಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಸಾಧನೆ ಮಾಡುತ್ತಿರುವ ಬಗ್ಗೆ ಈ ಸಂದರ್ಭದಲ್ಲಿ ಹೇಳಲು ಸಂತೋಷಪಡುತ್ತಿರುವೆನು.
ಡಾ. ಪಿ. ವಿ. ಶೆಟ್ಟಿ
********
ಇಂಥಹ ಕಾರ್ಯಕ್ರಮದ ಮೂಲಕ ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲರೂ ವಿದ್ಯಾವಂತರಾದಲ್ಲಿ ರಾಮ ರಾಜ್ಯವಾಗಲು ಸಾಧ್ಯ. ಅದಕ್ಕಾಗಿ ನಮ್ಮ ಹಿರಿಯರ ಪ್ರಾರಂಭಿಸಿದ ಇಂತಹ ಕಾರ್ಯಕ್ರಮವನ್ನು ಮುಂದುವರಿಸುತ್ತಾ ನಮ್ಮ ಸಮಾಜದಲ್ಲಿ ಹೆಚ್ಚಿನವರು ವಿದ್ಯಾವಂತರಾಗಲು ಸಾಧ್ಯ.
ಪಶ್ಚಿಮ ವಲಯ ಸಂಚಾಲಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್
********
ಸಮಾಜದಲ್ಲಿ ಒಂದು ಜವಾಬ್ದಾರಿಯನ್ನು ಪಡೆದ ನಂತರ ನಾವು ಆ ಕೆಲಸವನ್ನು ಮಾಡಲೇಬೇಕಾಗಿದೆ. ಕಳೆದ ಸಲಕ್ಕಿಂತ ಈ ಸಲ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಮೂಲಕ ಹೆಚ್ಚಿನ ಮೊತ್ತವನ್ನು ವಿತರಿಸಲಾಗುತ್ತಿದ್ದು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಇದಕ್ಕೆ ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ. ಅಲ್ಲದೆ ನಮ್ಮ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ತಂಡದ ಕಾರ್ಯ ಅಭಿನಂದನೀಯ. ಸಂಘವು ಮಾಡುತ್ತಿರುವ ಇಂತಹ ಸಹಾಯವನ್ನು ಮಕ್ಕಳು ಸದುಪಯೋಗ ಮಾಡಬೇಕು. ಸಂಘದಿಂದ ಪಡೆದು ಮುಂದೆ ಕಿಚಿಂತ್ತಾದರೂ ಸಂಘಕ್ಕೆ ಮಕ್ಕಳು ಹಿಂತಿರುಗಿಸುವಂತಾಗಲಿ.
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ್ ಶೆಟ್ಟಿ ಇಂದ್ರಾಳಿ
——
ಸಾಮೂಹಿಕ ವಿವಾಹದ ಬಗ್ಗೆ ನಮ್ಮ ಪ್ರಾದೇಶಿಕ ಸಮಿತಿ ಸಹಕಾರ,: . ಪ್ರೇಮನಾಥ ಶೆಟ್ಟಿ ಕೊಂಡಾಡಿ
ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರು ಎಲ್ಲರನ್ನು ಸ್ವಾಗತಿಸುತ್ತಾ ಸಂಘದ ಎಲ್ಲಾ ಸಮಾಜ ಮುಖಿ ಕಾರ್ಯಕ್ರಮಗಳಿಗಿಂತ ಸಮಾಜಕ್ಕೆ ಸಹಾಯ ನೀಡುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವವಿದೆ. ಸಮಾಜದ ದಾನಿಗಳ, ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸಮಾಜದಲ್ಲಿ ಕಷ್ಟದಲ್ಲಿರುವ ಅವಿವಾಹಿತ ಜೋಡಿಗಳಿಗೆ ಸಾಮೂಹಿಕ ವಿವಾಹದ ಬಗ್ಗೆ ನಮ್ಮ ಪ್ರಾದೇಶಿಕ ಸಮಿತಿ ಸಹಕಾರ ನೀಡುವ ಸಿದ್ಧವಾಗಿದೆಎಂದರು .