28 C
Mumbai
August 17, 2026
Mumbai News Kannada
ಮುಂಬಯಿ

ರೇ ರೋಡ್ ಸ್ವಾಮಿ ಅಯ್ಯಪ್ಪ ಭಕ್ತ ವೃಂದ ಮಂದಿರದ ವರ್ಧಂತ್ಯೋತ್ಸವ.






ಧರ್ಮದ ಹಾದಿಯಲ್ಲಿ ನಡೆದಾಗ ಪುಣ್ಯದ ಕಾರ್ಯ ಮಾಡಲು ಸಾಧ್ಯ: ಸತೀಶ್ ಗುರುಸ್ವಾಮಿ

ಚಿತ್ರ ವರದಿ ದಿನೇಶ್ ಕುಲಾಲ್


ಮುಂಬಯಿ, ಸೆ.9 ಮುಂಬೈಯ ಹೃದಯ ಭಾಗವಾಗಿರುವ ರೇ ರೋಡ್ ಪರಿಸರದಲ್ಲಿ ಹೋಟೆಲ್ ಉದ್ಯಮಿ ಸತೀಶ್ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ
ಸ್ವಾಮಿ ಅಯ್ಯಪ್ಪ ಭಕ್ತ ವೃಂದದ
ಮಂದಿರದ ವರ್ಧಂತ್ಯೋತ್ಸವನ್ನು ಭಕ್ತಿ ಸಂಭ್ರಮದೊಂದಿಗೆ ಸತೀಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ವಿಜೃಭಣೆಯಿಂದ ಆಚರಿಸಲಾಯಿತು.

ಬೆಳಗ್ಗೆ ಮಹಾಪೂಜೆ ನಡೆದ ನಂತರ ಅಪ್ಪಾಜಿ ಬೀಡು ವರ್ಲಿ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಹಾಗೂ ರೇ ರೋಡ್ ಭಕ್ಕ ವೃಂದ ಇವರಿಂದ ಭಜನ ನಂತರ ಮಹಾ ಮಂಗಳಾರತಿ ಜರುಗಿತು.
ದಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ಅಪ್ಪಾಜಿ ಬೀಡು ಗುರುಸ್ವಾಮಿ ರಮೇಶ್ ಗುರುಸ್ವಾಮಿ ಮತ್ತು ದಹಿಸರ್ ನವ ದುರ್ಗಾ ಅಯ್ಯಪ್ಪ ಭಕ್ತ ವೃಂದದ ಗುರುಸ್ವಾಮಿ ಮೋಹನ್ ರೈ , ಸಿಕೆ ಗುರುಸ್ವಾಮಿ, ಶಾಂಭವಿ ರಮೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಮಧ್ಯಾಹ್ನ ದಿನೇಶ್ ಕೋಟ್ಯಾನ್ ಬಳಗದ ಚೆಂಡೆ,ಮದ್ದಳೆ ,ಸೆಕ್ಸೋಪೋನ್ ವಾದನದೊಂದಿಗೆ ಮಂಗಳಾರತಿಯನ್ನು ಸತೀಶ್ ಗುರುಸ್ವಾಮಿ ನಡೆಸಿದರು.
ಪೂಜೆಯ ಬಳಿಕ ವಿಶೇಷವಾದ ಪ್ರಾರ್ಥನೆ ಮಾಡಿದ ಸತೀಶ್ ಗುರುಸ್ವಾಮಿಯವರು ನಿಷ್ಠೆ ಭಕ್ತಿಯಿಂದ ನಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಪೂಜಿಸಿದಾಗ ನಮ್ಮ ನಂಬಿಕೆಗಳು ಈಡೇರುತ್ತದೆ. ಮಾತಾಪಿತರನ್ನು ಗುರು ಹಿರಿಯರನ್ನು ಗೌರವಿಸಿ ನಡೆಯಬೇಕು.
ಸತ್ಯ ಧರ್ಮದ ಹಾದಿಯಲ್ಲಿ ನಡೆದಾಗ ನಮಗೆ ಪುಣ್ಯದ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಪುಣ್ಯಪ್ರಾಪ್ತಿಯಾದಾಗ ನಮ್ಮ ಬದುಕು ಪಾವನವಾಗುತ್ತದೆ. ಪುಣ್ಯದ ಕಾರ್ಯಗಳಿಗೆ ದಾನ ಮಾಡುವ ಗುಣ ಎಲ್ಲರಲ್ಲೂ ಬರಲಿ ಎಂದು ಹಾರೈಸಿದರು.


ಪೂಜೆಯ ಬಳಿಕ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಶೆಟ್ಟಿ ಕಟಪಾಡಿ ಮತ್ತವರ ಸಹೋದರ ಹರೀಶ್ ಶೆಟ್ಟಿ ಕಟಪಾಡಿ ಇವರ ಸೇವೆಯ ರೂಪದಲ್ಲಿ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಿತು .


ಈ ಸಂದರ್ಭದಲ್ಲಿ ಮಂದಿರಕ್ಕೆ ಸ್ಥಳಾವಕಾಶ ನೀಡಿದ ರೇ ರೋಡ್ ಹೋಟೆಲ್ ಉಡುಪಿ ಮಾಲಿಕರಾದ ಶುಭನಂದ ಶೆಟ್ಟಿ ದಂಪತಿಯನ್ನು, ದೇವಸ್ಥಾನಕ್ಕೆ ಹೂವಿನ ಸಿಂಗಾರ ಸೇವೆಯನ್ನು ನೀಡಿದ ವಿಶ್ವನಾಥ್ ಶೆಟ್ಟಿ ಕಾಪು, ಅನ್ನದಾನ ನೀಡಿದ ಕಿಶೋರ್ ಶೆಟ್ಟಿ ಕಟ್ಪಾಡಿ ಮತ್ತು ಸಂಸ್ಥೆಯ ಗೌರವ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ, ಅಪ್ಪಾಜಿ ಬೀಡು ಫೌಂಡೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ ಹಾಗೂ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಸರ್ವ ಭಕ್ತರಿಗೆ ರೇ ರೋಡ್ ಸ್ವಾಮಿ ಅಯ್ಯಪ್ಪ ಭಕ್ತ ವೃಂದದ ಸತೀಶ್ ಗುರುಸ್ವಾಮಿ , ಗೌರವ ಅಧ್ಯಕ್ಷ ಮಂಜುನಾಥ ಶೆಟ್ಟಿ , ಅಧ್ಯಕ್ಷ ಕಿಶೋರ್ ಶೆಟ್ಟಿ ಕಟಪಾಡಿ, ಸಂಚಾಲಕ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಬೆಳಪು ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಶಿಬರೂರು ಗುತ್ತು ಸುರೇಶ್ ಶೆಟ್ಟಿ , ಕೋಶಾಧಿಕಾರಿ ರವಿ ಮೂಳೂರು , ಜೊತೆ ಕಾರ್ಯದರ್ಶಿ ಸುಕೇಶ್ ಸ್ವಾಮಿ, ಜೊತೆ ಕೋಶಾಧಿಕಾರಿ ರೂಪೇಶ್ ಸಾಣೂರು, ಮಂಜುನಾಥ ಗುರುಸ್ವಾಮಿ ಸೋಮೇಶ್ವರ, ಜಯ ಗುರುಸ್ವಾಮಿ ಅಡ್ವೆ ಪೂಜೆಯ ಪ್ರಸಾದವನ್ನು ನೀಡಿ ಸಾಲುವದಿಸಿ ಗೌರವಿಸಿದರು.
ಪೂಜೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉದ್ಯಮಿಗಳು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು.



Related posts

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk

ಕುಲಾಲ ಸಂಘ ಮುಂಬೈ – ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣೆ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿ ಶೀರೂರು ಪರ್ಯಾಯೋತ್ಸವ – 2026 ಪೂರ್ವಭಾವಿ ಸಭೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ: ವೈವಾಹಿಕ ಬೆಳ್ಳಿ ಹಬ್ಬ ಆಚರಿಸುತ್ತಿರುವ ದಂಪತಿಗಳು ಹಾಗೂ ನವದಂಪತಿಯನ್ನು ಗೌರವಿಸುವ ವಿಶಿಷ್ಟ ಕಾರ್ಯಕ್ರಮ

Mumbai News Desk

ಮಲಾಡ್ ಇರಾನಿ ಕಾಲನಿಯ ಶ್ರೀ ಶನಿ ಮಂದಿರದಲ್ಲಿ ಭಕ್ತಿ,ಸಡಗರದಿಂದ ನಡೆದ ಶ್ರೀ ಶನಿಜಯಂತ್ಯೋತ್ಸವ

Mumbai News Desk

ಬೋರಿವಲಿ ಪೂರ್ವ ನ್ಯಾನ್ಸಿ ಕಾಂಪ್ಲೆಕ್ಸ್: ಶ್ರೀ ಜಗದೀಶ್ವರಿ ಮಂದಿರದಲ್ಲಿ ದೃಢ ಕಲಶಾಭಿಷೇಕ ಸಂಪನ್ನ

Mumbai News Desk