
ಮುಂಬಯಿ, ಜೂ. 12 : ಬಂಟರ ಸಂಘ ಮುಂಬಯಿ , ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿ ವತಿಯಿಂದ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ , ವಿಧವಾವೇತನ ,ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮವು ಜೂ. 16ರ ರವಿವಾರ ಬೆಳಿಗ್ಗೆ ಗಂಟೆ 11:30 ಕ್ಕೆ ಸರಿಯಾಗಿ ಭಾರತ ರತ್ನ ದಿ. ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹ, 588- ಮಹಾಜನ್ ವಾಡಿ, ಪ್ರಸಾದ್ ಇಂಟರ್ ನ್ಯಾಶನಲ್ ಹೊಟೇಲ್ ಸಮೀಪ, ಠಾಕೂರು ಮಾಲ್ ಬಳಿ, ಮೀರಾರೋಡ್ ಇಲ್ಲಿ ಆಯೋಜಿಸಲಾಗಿದೆ.
ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ನೇತೃತ್ವದಲ್ಲಿ , ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ , ಗೌರವ ಪ್ರದಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ,ಗೌರವ ಕೋಶಾಧಿಕಾರಿ
ಸಿಎ ರಮೇಶ್ ಬಿ. ಶೆಟ್ಟಿ ,ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ , ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ , ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ಡಾ. ದಿವಕರ ಶೆಟ್ಟಿ , ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ , ಕಾರ್ಯದರ್ಶಿ ಸಿ. ಎಫ್. ಉತ್ತಮ್ ಶೆಟ್ಟಿ , ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ ,
ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರ ಆರ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ ಸವಿನ್ ಜೆ. ಶೆಟ್ಟಿ , ಪಶ್ಚಿಮ ವಲಯ ಸಮನ್ವಯಕ ಭಾಸ್ಕರ್ ಶೆಟ್ಟಿ ಖಾಂದೇಶ್ ಭಾಗವಹಿಸಲಿದ್ದಾರೆ.
ಮೀರಾ – ಭಾಯಂದರ್ ಪರಿಸರದ ಬಂಟ ಸಮಾಜ ಬಾಂದವರಿಗೆ ಬಂಟರ ಸಂಘದ ಆರ್ಥಿಕ ಸಹಾಯವನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಸದಸ್ಯರು ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಮಿತಿಯ ಸಂಚಾಲಕ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು ,
ಉಪ ಕಾರ್ಯಧ್ಯಕ್ಷ : ಅರವಿಂದ ಎ. ಶೆಟ್ಟಿ ,ಕಾರ್ಯದರ್ಶಿ: ಬಾಬಾ ಪ್ರಸಾದ್ ಅರಸ ಕುತ್ಯಾರು , ಕೋಶಾಧಿಕಾರಿ: ಶಂಕರ್ ಶೆಟ್ಟಿ ಬೋಳ ,ಜೊತೆ ಕಾರ್ಯದರ್ಶಿ: ರಮೇಶ್ ಶೆಟ್ಟಿ ಸಿದ್ದಕಟ್ಟೆ , ಜೊತೆ ಕೋಶಾಧಿಕಾರಿ: ಜಗದೀಶ್ ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ ವರ್ಷಭ್ ಶೆಟ್ಟಿ , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು , ಸಂಚಾಲಕ ರವಿಕಾಂತ್ ಶೆಟ್ಟಿ ಇನ್ನ ,ಉಪ ಕಾರ್ಯಧ್ಯಕ್ಷ ದಾಮೋದರ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ , ಕೋಶಾಧಿಕಾರಿ ಅಮಿತ ಬಿ. ಶೆಟ್ಟಿ ಹಾಗೂ ಸಮಿತಿಯ ಸಹಕಾರದೊಂದಿಗೆ ಜರಗಲಿದೆ.
ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು , ವಿಧವೆಯರು ಹಾಗೂ ಅಂಗವಿಕಲರು ಧನ ಸಹಾಯ ಪಡೆಯಲಿದ್ದಾರೆ . ಈ ಎಲ್ಲಾ ಫಲಾನುಭವಿಗಳ ಸಂಪೂರ್ಣ ವಿವರಗಳು ಪ್ರಾದೇಶಿಕ ಸಮಿತಿಯಲ್ಲಿ ಹಾಗೂ ಬಂಟರ ಸಂಘದಲ್ಲಿ ಲಭ್ಯವಿದ್ದು , ದೂರವಾಣಿಯ ಮೂಲಕ ಅವರೆಲ್ಲರನ್ನೂ ಈಗಾಗಲೇ ಸಂಪರ್ಕಿಸಿ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ . ಈ ಸವಲತ್ತುಗಳನ್ನು ಸ್ವೀಕರಿಸಲಿರುವ 18 ವರ್ಷದ ಮೇಲ್ಪಟ ವಿದ್ಯಾರ್ಥಿಗಳು ಸ್ವತಃ ಹಾಗೂ 18 ವರ್ಷಕ್ಕಿಂತ ಕಿರಿಯ ಮಕ್ಕಳ ಪಾಲಕರು ಬಂಟರ ಸಂಘದ ಸದಸ್ಯರಾಗಿದ್ದು , ಕಡ್ಡಾಯವಾಗಿ ಸದಸ್ಯತ್ವ ಕಾರ್ಡನ್ನು ಮತ್ತು ಅರ್ಜಿಯ ಪ್ರತಿರೂಪ (Application number) ತೋರಿಸಿ ತಮ್ಮ ಚೆಕ್ ಅನ್ನು ಪಡೆಯ ಬಹುದು. ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——-