
ಮುಂಬಯಿ ಜೂ 14. ಮಲಾಡ್ ಪೂರ್ವ ದ ಕುರಾರ್ ವಿಲೇಜ್ ನ ಲಕ್ಷ್ಮಣ್ ನಗರದಲ್ಲಿರುವ ಶ್ರೀ ಶನಿಮಂದಿರದ ಆಡಳಿತ ಸಂಸ್ಥೆ. ಶನಿ ಮಹಾತ್ಮಾ ಪೂಜಾ ಸಮಿತಿಯ ಅಂಗ ಸಂಸ್ಥೆಯಾದ ಶ್ರೀ ಶನಿ ಮಹಾತ್ಮಾ ಚಾರಿಟೇಬಲ್ ಸೊಸೈಟಿ ಕಳೆದ ೨೭ ವರುಷಗಳಿಂದ ಮಲಾಡ್ ಪೂರ್ವ ಪರಿಸರ ದಲ್ಲಿ ನೆಲೆಸಿರುವ ಬಡ ವಿದ್ಯಾರ್ಥಿಗಳಿಗೆ ಮತ್ತು ಪರಿಸರ ದಲ್ಲಿ ಇರುವ ಮುನಿಸಿಪಲ್ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಸ್ಕೂಲ್ ಬ್ಯಾಗ್ ಮತ್ತು ಇತರ ಸಾಮಗ್ರಿಗಳ ವಿತರಣೆ ಸುಮಾರು ೮೦೦-೮೫೦ ಮಕ್ಕಳಿಗೆ ನೀಡುತ್ತಾ ಆದ್ಯಾತ್ಮಿಕ ಬೆಳವಣಿಗೆಯ ಒಟ್ಟಿಗೆ ಶೈಕಣಿಕ ಪ್ರೋಸ್ತಾವ ನೀಡುತ್ತಾ ಸಮಾಜ ಸೇವೆ ಮಾಡುತ್ತ ಬಂದಿರುತ್ತದೆ.
ತಾ ೧೬ ಜೂನ್ ೨೦೨೪ ರ ಭಾನುವಾರ ಬೆಳಿಗ್ಗೆ ೯ ಘಂಟೆಗೆ ದೇವಸ್ಥಾನದ ದಲ್ಲಿ ಬಡ ವಿದ್ಯಾರ್ಥಿಗಳಿಗೆ (೪ ರಿಂದ ೭ ತರಗತಿಯವರಿಗೆ) ಉಚಿತ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ರು ಅಧ್ಯಕ್ಷತೆಯಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳು ತಮ್ಮ ಮಾರ್ಕ್ ಶೀಟ್ ನ್ನು ಅಗತ್ಯವಾಗಿ ತರಲು ಸಮಿತಿ ವಿನಂತಿಸಿದೆ. ಈ ಸಮಾರಂಭ ಅಧ್ಯಕ್ಷತೆಯನ್ನು ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ ಅತಿಥಿಗಳಾಗಿ ಸಮಾಜ ಸೇವಕರು ಉದಯ್ ಮೊಗವೀರ, ಫೈನ್ ಜ್ಯೂವೆಲ್ಲರ್ಸ್ ಮಾಲಕರು ನರೇಶ್. ಮತ್ತು ಯೋಗಿ ಕ್ಲಾಸ್ ಮಾಲಕರು ಯೋಗೇಶ್ ಶ್ರೀ ಯಾನ್,, ಜತಿನ್ ಪೋಕರ್ಣೇ, ಜನರಲ್ ಮ್ಯಾನೇಜರ್ ಜೆ. ಬಿ. ಅಡ್ವಾಣಿ & ಕಂಪನಿ ಮುಂಬೈ ಆಗಮಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಭಾಗಿಯಾಗಬೇಕಾಗಿ ಕಾರ್ಯಕಾರಿ ಸಮಿತಿಯ ಮತ್ತು ಚಾರಿಟೇಬಲ್ ಸೊಸೈಟಿ
ಕಾರ್ಯಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಉಪಾಕಾಧ್ಯಕ್ಷರಾದ ಶಿವಾನಂದ ದೇವಾಡಿಗ, ಕಾರ್ಯದರ್ಶಿ ಮಹೇಶ್ ಸಾಲಿಯಾನ್, ಜೊತೆ ಕಾರ್ಯದರ್ಶಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ರಾಜಶ್ರೀ ಪೂಜಾರಿ, ಜೊತೆ ಕೋಶಾಧಿಕಾರಿ ಭರತ್ ಕೋಟ್ಯಾನ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.