July 22, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿ: ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ : ಜೂ. 16 ರಂದು  ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ, ದತ್ತು ಸ್ವೀಕಾರ, ವಿಧವಾವೇತನ, ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ







ಮುಂಬಯಿ, ಜೂ. 14:  ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ  ಸಮಿತಿ ವತಿಯಿಂದ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ವಿಧವಾವೇತನ, ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮವು ಜೂ. 16ರ ರವಿವಾರ ಬೆಳಿಗ್ಗೆ ಗಂಟೆ 10:00 ಗೆ ಸರಿಯಾಗಿ  ಹೋಟೆಲ್ ಗ್ಯಾಲಕ್ಸಿ  ಸಭಾಗೃಹ, ಎಸ್ಟಿ ಬಸ್ ನಿಲ್ದಾಣದ ಸಮೀಪ, ನಲ್ಲಸೋಪಾರ ಪಶ್ಚಿಮ ಇಲ್ಲಿ ನಡೆಯಲಿದೆ.

  ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ನಾರಾಯಣ ಶೆಟ್ಟಿ ಕೊಡ್ಲಾಡಿ ಯವರ ನೇತೃತ್ವದಲ್ಲಿ , ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ಡಾ. ದಿವಕರ ಶೆಟ್ಟಿ, ಉಪಸ್ಥಿತಿಯಲ್ಲಿ.  ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು  ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕೆ  ಜಯ ಅಶೋಕ್ ಶೆಟ್ಟಿಯವರ ಉಸ್ತುವಾರಿಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಹಾಗೂಮಹೇಶ್ ಎಸ್. ಶೆಟ್ಟಿ , ಗೌರವ ಪ್ರದಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ  ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ,  ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಸಿ. ಎಫ್. ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ,  ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ  ಚಿತ್ರ ಆರ್. ಶೆಟ್ಟಿ, ಯುವ ವಿಭಾಗ ಕಾರ್ಯಧ್ಯಕ್ಷ  ಸವಿನ್ ಜೆ. ಶೆಟ್ಟಿ, ಪಶ್ಚಿಮ ವಲಯ ಸಮನ್ವಯಕ ಭಾಸ್ಕರ್ ಶೆಟ್ಟಿ ಖಾಂದೇಶ್ ಭಾಗವಹಿಸಲಿದ್ದಾರೆ.

ವಸಾಯಿ-ಡಹಾಣು ಪರಿಸರದ ಬಂಟ ಸಮಾಜ ಬಾಂದವರಿಗೆ ಬಂಟರ ಸಂಘದ ಆರ್ಥಿಕ ಸಹಾಯವನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು ಸದಸ್ಯರು ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ     ಪ್ರಾದೇಶಿಕ ಸಮಿತಿಯ ಸಂಚಾಲಕ ಹರೀಶ್ ಪಾಂಡು ಶೆಟ್ಟಿ, ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷ: ಹರೀಶ್ ಪಿ ಶೆಟ್ಟಿಗುರ್ಮೆ, ಸಮಿತಿಯಉಪ ಕಾರ್ಯಧ್ಯಕ್ಷ ಪ್ರವೀಣ್ ಶೆಟ್ಟಿ, ಕಣಂಜಾರ್, ಕಾರ್ಯದರ್ಶಿ ಜಗನ್ನಾಥ್ ಡಿ ಶೆಟ್ಟಿ, ಪಳ್ಳಿ,  ಕೋಶಾಧಿಕಾರಿ ವಿಜಯ ಎಮ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಎಮ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶತೀಶ್ ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ  ಉಮ ಸತೀಶ್ ಶೆಟ್ಟಿ, ಯುವ ವಿಭಾಗ ಕಾರ್ಯಧ್ಯಕ್ಷೆ ಕುಮಾರಿ ವರ್ಷ ಶೇಕರ್ ಶೆಟ್ಟಿ , , ಸಲಹೆಗಾರರು, ಎಲ್ಲಾ ಉಪ-ಸಮಿತಿಯ ಕಾರ್ಯಾಧ್ಯಕ್ಷರ ಹಾಗೂ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಜರಗಲಿದೆ. 

ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿಧವೆಯರು ಹಾಗೂ ಅಂಗವಿಕಲರು ಧನ ಸಹಾಯ ಪಡೆಯಲಿದ್ದಾರೆ. 

ಈ ಎಲ್ಲಾ ಫಲಾನುಭವಿಗಳ ಸಂಪೂರ್ಣ ವಿವರಗಳು ಪ್ರಾದೇಶಿಕ ಸಮಿತಿಯಲ್ಲಿ ಹಾಗೂ ಬಂಟರ ಸಂಘದಲ್ಲಿ ಲಭ್ಯವಿದ್ದು, ದೂರವಾಣಿಯ ಮೂಲಕ ಅವರೆಲ್ಲರನ್ನೂ  ಈಗಾಗಲೇ ಸಂಪರ್ಕಿಸಿ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ. ಈ ಸವಲತ್ತುಗಳನ್ನು ಸ್ವೀಕರಿಸಲಿರುವ 18 ವರ್ಷದ ಮೇಲ್ಪಟ ವಿದ್ಯಾರ್ಥಿಗಳು ಸ್ವತಃ ಹಾಗೂ 18 ವರ್ಷಕ್ಕಿಂತ ಕಿರಿಯ ಮಕ್ಕಳ ಪಾಲಕರು ಬಂಟರ ಸಂಘದ ಸದಸ್ಯರಾಗಿದ್ದು, ಕಡ್ಡಾಯವಾಗಿ ಸದಸ್ಯತ್ವ ಕಾರ್ಡನ್ನು  ಮತ್ತು ಅರ್ಜಿಯ ಪ್ರತಿರೂಪ (Application number) ತೋರಿಸಿ ತಮ್ಮ ಚೆಕ್ ಅನ್ನು ಪಡೆಯ ಬಹುದು.  ಸಮಾಜ ಬಾಂಧವರು  ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ, ಕಾರ್ಯಾಧ್ಯಕ್ಷರಾದ ಮಂಜುನಾಥ ನಾರಾಯಣ ಶೆಟ್ಟಿ ಕೊಡ್ಲಾಡಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೇ ಜಯ ಅಶೋಕ್ ಶೆಟ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಉಮ ಸತೀಶ್ ಶೆಟ್ಟಿ, ಯುವ ವಿಭಾಗ ಕಾರ್ಯಧ್ಯಕ್ಷೆ ಕುಮಾರಿ ವರ್ಷ ಶೇಕರ್ ಶೆಟ್ಟಿ ಹಾಗೂ ಕಾರ್ಯಕಾರಿಣಿಯ ಸಮಿತಿಯ ಸದಸ್ಯರು, ಎಲ್ಲಾ ಉಪ-ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

— 

 



Related posts

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಮಾ.16: ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ವತಿಯಿಂದ ವಿಶ್ವಮಹಿಳಾ ದಿನಾಚರಣೆ, ಸಂಸ್ಥಾಪಕ ದಿನಾಚರಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಮೇ 24: ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಹುಟ್ಟೂರ ಸಮ್ಮಾನ –  ತಾಳಮದ್ದಳೆ

Mumbai News Desk

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ಓಂ ಶ್ರೀ ಜಗಧೀಶ್ವರಿ ಸೇವಾ ಸಮಿತಿ ದೇವುಲಪಾಡ, ಬೊರಿವಲಿ ಪೂರ್ವ : ಜ. 25ರಂದು 52ನೇ ವರ್ಷದ ಬೈದರ್ಕಳ ನೇಮೋತ್ಸವ

Mumbai News Desk