July 23, 2026
Mumbai News Kannada
ಪ್ರಕಟಣೆ

ಪೆ. 3 ರಿಂದ 9 ರ ತನಕ ಬೋರಿವಲಿ: ಶ್ರೀ ಜಗದೀಶ್ವರಿ ದೇವಸ್ಥಾನದ ನೂತನ ಆಲಯ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಂಭ್ರಮ







ಮುಂಬಯಿ: ಇಲ್ಲಿನ ಬೋರಿವಲಿ ಪೂರ್ವದ ನ್ಯಾನ್ಸಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀ ಜಗದೀಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಶ್ರೀ ಜಗದೀಶ್ವರಿ, ಶ್ರೀ ಮಹಾಗಣಪತಿ ಹಾಗೂ ಪರಿವಾರ ದೇವರುಗಳ ನೂತನ ದೇವಾಲಯ ಸಮರ್ಪಣೆ, ಪುನಃ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿ 3ರಿಂದ 9ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.

ವೈದಿಕ ಕಾರ್ಯಕ್ರಮಗಳ ವಿವರ:

ಬ್ರಹ್ಮಶ್ರೀ ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ, ವೇದಮೂರ್ತಿ ಪಕ್ಷಿಕೆರೆ ವಿಜಯ್ ಉಪಾಧ್ಯಾಯ ಹಾಗೂ ಸಂತೋಷ್ ಕುಮಾರ್ ಭಟ್ ಮುದ್ರಾಡಿ ಅವರ ಸಹಯೋಗದೊಂದಿಗೆ ಸಪ್ತ ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

  • ಫೆಬ್ರವರಿ 3 (ಮಂಗಳವಾರ): ಬೆಳಿಗ್ಗೆ 8:30ರಿಂದ ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ದ್ವಾದಶ ನಾಳೀಕೇರ ಗಣಪತಿ ಯಾಗ ಹಾಗೂ ನವಗ್ರಹ ಯಾಗ ನಡೆಯಲಿದೆ. ಸಂಜೆ ಭೂಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ ಹಾಗೂ ಅಂಕುರಾರೋಪಣ ಕಾರ್ಯಕ್ರಮಗಳು ಜರುಗಲಿವೆ.
  • ಫೆಬ್ರವರಿ 4 (ಬುಧವಾರ): ಬೆಳಿಗ್ಗೆ ಭೂ ವರಾಹ ಹೋಮ, ಬಿಂಬಶುದ್ಧಿ ನಡೆಯಲಿದ್ದು, ಸಾಯಂಕಾಲ ಜಗದೀಶ್ವರಿ, ಗಣಪತಿ ಹಾಗೂ ನಾಗದೇವರ ಬಿಂಬ ಶೈಯ್ಯಾಧಿವಾಸ ಮತ್ತು ಅಷ್ಟಬಂಧ ಅಧಿವಾಸ ಪ್ರಕ್ರಿಯೆಗಳು ನೆರವೇರಲಿವೆ.
  • ಫೆಬ್ರವರಿ 5 (ಗುರುವಾರ): ಬೆಳಿಗ್ಗೆ 7:15ರ ಮಕರ ಲಗ್ನದ ಸುಮುಹೂರ್ತದಲ್ಲಿ ದೇವತೆಗಳ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಪ್ರತಿಷ್ಠೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
  • ಫೆಬ್ರವರಿ 6 & 7: ನಾಗದೇವರಿಗೆ ಆಶ್ಲೇಷಾ ಬಲಿ, ಧರ್ಮದೈವಗಳ ಪ್ರತಿಷ್ಠೆ, ಗಣಪತಿ ಅಥರ್ವಶೀರ್ಷ ಯಾಗ ಹಾಗೂ ಶನೈಶ್ವರ ಪೂಜೆಗಳು ನಡೆಯಲಿವೆ.
  • ಫೆಬ್ರವರಿ 8 (ಭಾನುವಾರ): ಬೆಳಿಗ್ಗೆ 8:25ರ ಕುಂಭ ಲಗ್ನದಲ್ಲಿ ದೇವಿಯ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಬಳಿಕ ಮಹಾ ಚಂಡಿಕಾ ಯಾಗ, ಪಲ್ಲಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸತ್ಯನಾರಾಯಣ ಪೂಜೆ ಹಾಗೂ ರಂಗಪೂಜೆ ಜರುಗಲಿದೆ.
  • ಫೆಬ್ರವರಿ 9 (ಸೋಮವಾರ): ಬೆಳಿಗ್ಗೆ ಮಹಾಸಂಪ್ರೋಕ್ಷಣೆ ಹಾಗೂ ಮಂಗಳ ಗಣಪತಿ ಯಾಗದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

ಈ ಪವಿತ್ರ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕೆಂದು ಟ್ರಸ್ಟ್‌ನ ಅಧ್ಯಕ್ಷರಾದ ಶೇಖರ್ ಎಂ. ಕೋಟ್ಯಾನ್, ಪ್ರಧಾನ ಅರ್ಚಕ ವಿಜಯ ಉಪಾಧ್ಯಾಯ, ಕಾರ್ಯದರ್ಶಿ ರವೀಂದ್ರ ಆರ್. ಮೆಂಡನ್ ಹಾಗೂ ಕೋಶಾಧಿಕಾರಿ ಚೇತನ್ ಎಚ್. ಪೂಜಾರಿ, ಸಲಹಾ ಮಂಡಳಿಯ ಸದಸ್ಯರಾದ ಈಶ್ವರ ದೇವ ಶುಕ್ಲಾ, ರಾಜೇಶ್ ಪೂಜಾರಿ, ಅರುಣ ಮೋಲಿ, ರೋಹಿತ್ ಸುವರ್ಣ ಮತ್ತು ಶ್ರೀಮತಿ ಪುಷ್ಪ ಜಿ. ಬಂಗೇರಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9987949478 / 9833677284



Related posts

ಜ. 31ರಿಂದ ಹೆಜಮಾಡಿಯಲ್ಲಿ ಮಹಿಳಾ ಕ್ರಿಕೆಟ್ ಹಬ್ಬ:ಪಡುಬಿದ್ರಿ ಯುವವಾಹಿನಿಯಿಂದ ಬಿಲ್ಲವ ಮಹಿಳಾ ಪ್ರೀಮಿಯರ್ ಲೀಗ್

Mumbai News Desk

ಡೊಂಬಿವಲಿ, ಠಾಕೂರ್ಲಿ, ಕೋಪರ್ ಪರಿಸರದ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ.

Mumbai News Desk

ಜು. 20 : ಸಯಾನ್ ನ ಶ್ರೀ ನಿತ್ಯಾನಂದ ಸಭಾಗ್ರಹದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗೆ ಗುರುವಂದನೆ.

Mumbai News Desk

ಮಾ. 22: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು : ಅ. 3ರಿಂದ ಶರನ್ನವತಾತ್ರಿ ಮಹೋತ್ಸವ.

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk