32 C
Mumbai
March 7, 2026
Mumbai News Kannada
ಮುಂಬಯಿ

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,





ಭಕ್ತರ ಸಹಕಾರದಿಂದ ಉತ್ಸವ ಯಶಸ್ವಿ: ಸಾಣೂರು  ಸಾಂತಿಂಜ ಜನಾರ್ಧನ್ ಭಟ್ 

ಚಿತ್ರ ವರದಿ ದಿನೇಶ್ ಕುಲಾಲ್ 

    ಮೀರಾ ರೋಡ್ ಜೂ16.    ಮೀರಾ ರೋಡಿನ  ಮೀರಾ ಗಾವ್, ಮೀರಾ ಸೊಸೈಟಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆಯು ಜೂ 14 ರ ಶುಕ್ರವಾರದಂದು ಕ್ಷೇತ್ರದ ಆಡಳಿತ  ಮುಕ್ತಸರ ಶಿಮಂತೂರು ಮಜಲ ಗುತ್ತು ಬಾಬ ರಂಜನ್ ಶೆಟ್ಟಿ. ಯಜಮಾನಿಕೆಯಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ವಾಮಂಜೂರು  ಕೃಷ್ಣರಾಜ ಉಪಾಧ್ಯಾಯ ತಂತ್ರಿಯವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಸಾಣೂರು ಸಾಂತಿಂಜ ಜನಾರ್ಧನ್ ಭಟ್ ನೇತೃತ್ವದಲ್ಲಿ.    ಅರ್ಚಕರದ ಸಾಣೂರು ಮಾಧವ ಭಟ್ ಮತ್ತು ವಿಪ್ರಬಂಧದವರು ನಡೆಸಿದರು 

ಬೆಳಿಗ್ಗೆ  ಗಣಪತಿ ಶ್ರೀ ಸೂಕ್ತಂ ಹೋಮ ಏಕಾದಶಿ ರುದ್ರ ಪಾರಾಯಣ ಯಾಗ,ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ 

ಸಂಜೆ  ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ. ಬಳಿಕ ರಂಗಪೂಜೆ , ಮಹಾಮಂಗಳಾರತಿ ನಡೆಯಿತು 

ರಾತ್ರಿ ಕುಂಟಾಡಿ ಸುರೇಶ್ ಭಟ್. ಉತ್ಸವ ಬಲಿ ನಡೆಸಿದರು, ರಾತ್ರಿ ಮಹಾಪೂಜೆಯನ್ನು ಮಹಾಮಂಗಳಾರತಿಯನ್ನು ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ. ಜನಾರ್ಧನ್. ಭಟ್ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಜಾಗೃತಿಗೊಳ್ಳಲು ಧರ್ಮ ಕಾರ್ಯದಲ್ಲಿ ನಾವು ತೊಡಗುಕೊಳ್ಳಬೇಕು,  ದೇವಸ್ಥಾನಗಳಲ್ಲಿ ನಡೆಯುವ ಉತ್ಸವ, ಮತ್ತಿತರ ಧಾರ್ಮಿಕ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು, ಸಾಮೂಹಿಕವಾಗಿ ದೇವರಲ್ಲಿ ಪ್ರಾರ್ಥಿಸಿ ಕೊಂಡಾಗ ಪ್ರಾರ್ಥನೆಗೆ ವಿಶೇಷವಾದ ಶಕ್ತಿ , ಈ ಕ್ಷೇತ್ರದಲ್ಲಿ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಸೇವಾ ಕಾರ್ಯಗಳಲ್ಲಿ ಮೀರಾ ಭಯಂದರ್ ಹಾಗೂ ಮುಂಬೈಯ ಉಪನರದ ಭಕ್ತರು ಪಾಲ್ಗೊಂಡು ಸೇವಾ ಕಾರ್ಯಗಳನ್ನು ಯಶಸ್ವಿಗೊಳಿಸುತ್ತಾರೆ ಎಂದು ನುಡಿದರು,

ಪೂಜಾ ಕಾರ್ಯಗಳು ಯಶಸ್ವಿಯಾಗುವಲ್ಲಿ ಶ್ರೀ ಮಾಲಿಂಗೇಶ್ವರ ಕ್ಷೇತ್ರದ ಸ್ಥಾಪಕ ಸದಸ್ಯರಾದ ದಿವಂಗತ ವಿಶ್ವನಾಥ್ ಪೂಂಜ ಅವರ ಪರಿವಾರದವರು ,

ಕೃಷ್ಣ ಶೆಟ್ಟಿ ,   ಕಾರ್ಯದರ್ಶಿ ಪ್ರಮೋದ್ ಮಾತ್ರೆ,, ಅನಿಲ್ ಕೆ ಶೆಟ್ಟಿ.,  ಪ್ರಸನ್ನ ಶೆಟ್ಟಿ ಕುರ್ಕಾಲ್, ಸುಂದರ ಶೆಟ್ಟಿಗಾರ್, ಪ್ರಸನ್ನ ಬಿ ಶೆಟ್ಟಿ, ಆನಂದ್ ಶೆಟ್ಟಿ ಐಕಳ,

 ವೆಂಕಟೇಶ್ ಪಾಟೀಲ್,ಚಂದ್ರ ಶೆಟ್ಟಿ ಶಿಮಂತೂರು ಮಜಲ ಗುತ್ತ. ಪದಾಧಿಕಾರಿಗಳು,ಮಹಾಲಿಂಗೇಶ್ವರ ಟ್ರಸ್ಟ್ ನ ಸರ್ವ ಸದಸ್ಯರುಹ. ಹಾಗೂ,ಮೀರಾ ಸೊಸೈಟಿ ಸರ್ವ ಸದಸ್ಯರು ಸಹಕರಿಸಿದರು,

ಪೂಜೆಯಲ್ಲಿ ಮಾಜಿ ಶಾಸಕ ನರೇಂದ್ರಮೇತ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್. ವಿಜಯ ಆರ್ ಭಂಡಾರಿ,

ಮೀರಾ ಭಯಂದರ್  ಪ್ರಾದೇಶಿಕ ಸಮಿತಿಯ ಕಾರ್ಯ ಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಶ್ಮೀರ, ಸಂಪತ್ ಶೆಟ್ಟಿ  ಪಂಜದ ಗುತ್ತು,

 ಜಯಶೀಲ ತಿಂಗಳಾಯ, ಸುರೇಶ್ ಶೆಟ್ಟಿ ಮಾಳ, ಉದಯ ಶೆಟ್ಟಿ ಪೆಲತೂರು, ಉದಯ ಶೆಟ್ಟಿ, ರಾಜೇಶ್ ಶೆಟ್ಟಿ ಕಾಪು ,ಸುನಿಲ್ ಶೆಟ್ಟಿ ,ಹರೀಶ್ ರೈ, ಮತ್ತಿತರ ಗಣ್ಯರು ಹೋಟೆಲ್ ಉದ್ಯಮಿಗಳು. ಕಾರ್ಮಿಕರು ವಿವಿಧ ಜಾತಿಯ ಸಂಘಗಳ ಪದಾಧಿಕಾರಿಗಳು. ವಿವಿಧ ಭಜನಾ ಮಂಡಳಿಯ ಸದಸ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಪ್ರಸಾದವನ್ನು ಸ್ವೀಕರಿಸಿದರು



Related posts

ತುಳುವೆಲ್‌ಫೇರ ಎಸೋಸಿಯೇಶನ್ ಡೊಂಬಿವಲಿ : ದಾಸರ ಭಜನಾ ಸ್ಪರ್ಧೆ.

Mumbai News Desk

ಚಿಣ್ಣರಬಿಂಬದ ಇಪ್ಪತ್ತೊಂದನೆಯ ವರ್ಷದ ಮಕ್ಕಳ ಉತ್ಸವದ ಸಮಾರೋಪ .

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಆರೋಪ ಪಟ್ಟಿ ಸಲ್ಲಿಕೆ

Mumbai News Desk

ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ ಗಣೇಶ್ ಕೆ ಕಾಂಚನ್ ಆಯ್ಕೆ

Mumbai News Desk