23.5 C
Karnataka
April 4, 2025
ಮುಂಬಯಿ

ಬಂಟರ ಸಂಘ ಮುಂಬಯಿ, ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿ ವಾರ್ಷಿಕ ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ವಿಧವಾವೇತನ, ಆರ್ಥಿಕ ನೆರವು ವಿತರಣೆ,



ಸಂಘದ ಸೇವಾ ಕಾರ್ಯಗಳ ಮೂಲಕ ಸಮಾಜದಲ್ಲಿ ಬಡತನ ನಿರ್ಮೂಲವಾಗಲು ಸರ್ವ ಪ್ರಯತ್ನ  – ಪ್ರವೀಣ್ ಭೋಜ ಶೆಟ್ಟಿ 

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ : ಮುಂಬಯಿ ಮಹಾನಗರ ಉಪನಗರಗಳಲ್ಲಿ ಸುಮಾರು ನಾಲ್ಕು ಲಕ್ಷಗಿಂತಲೂ ಅಧಿಕ ಬಂಟ ಸಮುದಾಯದವರಿದ್ದು, ಇನ್ನೂ ಲಕ್ಷಾಂತರ ಸಮಾಜ ಬಾಂಧವರು ಸಂಘದ ಸದಸ್ಯರಾಗದೇ ಇದ್ದು, ಅಂಥವರು ಪ್ರಾದೇಶಿಕ ಸಮಿತಿಯನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರನ್ನಾಗಿ ಮಾಡಬೇಕಾಗಿದೆ.  ಯಾಕೆಂದರೆ  ಸಂಘದ ಸದಸ್ಯರೇ ಸಂಘದ ಸಂಪತ್ತು .  ಬಂಟರ ಸಂಘ ಮುಂಬಯಿಯ  ಪ್ರಾದೇಶಿಕ ಸಮಿತಿ ಗಳಿಂದಾಗಿ ಬಂಟರ ಸಂಘ ಮುಂಬಯಿ ಹೆಸರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ಬಂಟರ ಸಂಘದ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಮಗುವಿಗೆ ಸುಮಾರು 23 ವರ್ಷ ಕಲಿಯುವ ಅವಕಾಶ ಇದೆ.  ಇದೀಗ  ಒಂಬತ್ತು ಸಾವಿರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಆನಂತರ ಉನ್ನತ ಶಿಕ್ಷಣ   ಮಾಡುವುದಕ್ಕೆ ಮಹಾನಗರದಲ್ಲಿ ಎಲ್ಲಿಯೂ ಇರದ ಎಲ್ಲಾ ಸೌಲಭ್ಯಗಳು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಇದ್ದು, ಒಂದು ಬೆಷ್ಟ್ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಬೋರಿವಲಿಯಲಿ ರೂ. 180 ಕೋಟಿ ವೆಚ್ಚದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದು ಪ್ರತೀ ವಾರ ಅದಕ್ಕಾಗಿ ಡೋನೇಶನ್ ಕ್ಯಾಂಪ್ ನಡೆಸುತ್ತಿದ್ದೇವೆ.  ಸಂಘಕ್ಕೆ ನೂರು ವರ್ಷ ಪೂರ್ತಿಯಾಗುವ ಸಂದರ್ಭದಲ್ಲಿ  ಪ್ರತೀ ಪ್ರಾದೇಶಿಕ ಸಮಿತಿಯಲ್ಲಿ ನೂರು ಲಕ್ಷ ರೂಪಾಯಿ ವಿತರಿಸುವಂತಾಗಲಿ. ಒಂದು ಮಗು ಕಲಿತು ವಿದ್ಯಾವಂತನಾಗಿ ಉನ್ನತ ಉದ್ಯೋಗ ಗಳಿಸಿ ಸಮಾಜದಲ್ಲಿ ಬಡತನವೇ ಇಲ್ಲದಂತಾಗಲಿ ಎಂದು ಎಂದು ಬಂಟರ ಸಂಘ ಮುಂಬಯಿ  ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ನುಡಿದರು.

ಜೂ. 16 ರಂದು ಭಾರತ ರತ್ನ   ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹ, ಮಹಾಜನ್ ವಾಡಿ, ಮೀರಾರೋಡ್  ಇಲ್ಲಿ ಬಂಟರ ಸಂಘ ಮುಂಬಯಿ  ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿಯು ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ ಆರ್ಥಿಕ ಸಹಾಯವನ್ನು ವಿತರಿಸಲಾಗಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 

ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ  ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ಪ್ರಾದೇಶಿಕ  ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಮತ್ತವರ ತಂಡವನ್ನು ಅಭಿನಂದಿಸಬೇಕಾಗಿದೆ. ಇಂದಿನ ತುಂಬಿದ ಸಭೆಯನ್ನು ನೋಡುವಾಗ ನಮ್ಮವರಿಗೆ ಸಮಾಜದ ಮೇಲಿರುವ ಕಳಕಳಿಯ ಬಗ್ಗೆ ತಿಳಿಯುತ್ತಿದೆ. ಎಲ್ಲರೂ ಹೇಳಿದಾಗೆ ಸಹಾಯ ಪಡಕೊಳ್ಳುವವರ ಸಂಖ್ಯೆಯ ಕಡಿಮೆಯಾಗಿ ಕೊಡುವ ಮೊತ್ತ ಹೆಚ್ಚಾಗಬೇಕು. ಅತೀ ಅಗತ್ಯವಿದ್ದವರು ಮಾತ್ರ ಇಂತಹ ಸಹಾಯ ಪಡೆದಲ್ಲಿ ಇದು ಸಾಧ್ಯ. ಸಮಾಜದಿಂದ ನಾವು ಪಡೆದು ಮುಂದೆ ಸಮಾಜಕ್ಕೆ ಅದಕ್ಕಿಂತಲೂ ಹೆಚ್ಚು ಹಿಂತಿರುಗಿಸುವಂತಾಗಲಿ.  ನಾವು ಗಳಿಸಿದ ವಿಧ್ಯೆ ನಮ್ಮ ನಿಜವಾದ ಆಸ್ತಿ.  ನಮ್ಮ ಸಮಾಜದ ಮಕ್ಕಳು ಎಲ್ಲರೂ ಉತ್ತಮ ಶಿಕ್ಷಣ ಪಡೆಯಲಿ, ಶಿಕ್ಷಣಕ್ಕಾಗಿ ಬಂಟರ ಸಂಘವು ಎಲ್ಲಾ  ತೀಯಿಯ ಸಹಾಯವನ್ನು ನೀಡುತ್ತದೆ. ಕಠಿಣ ಪರಿಶ್ರಮದಿಂದ ಎಲ್ಲವೂ ಸಾಧ್ಯ ಎಂದರು. 

 ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಅವರು ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಬಂಟರ ಸಂಗವು ತನ್ನ ಸಮಾಜಕ್ಕಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದು, ಇದೇ ರೀತಿ ಇತರ ಎಲ್ಲಾ ಸಮಾಜದವರು ತಮ್ಮ ಸಮಾಜಕ್ಕೆ ಸಹಕರಿಸಿದಲ್ಲಿ ದೇಶದಲ್ಲಿ ಯಾವುದೇ ಸಮಸ್ಯೆ ಇರಲಾರದು.  ಸರಕಾರಕ್ಕೆ ಎಲ್ಲವನ್ನು ಮಾಡಲು ಅಸಾಧ್ಯ. ಜೀವನದಲ್ಲಿ ಇನ್ನೊಬ್ಬರಿಗೆ ಸಹಕರಿಸುವ ಕೆಲಸವನ್ನು ಮಾಡಿದ್ದಲ್ಲಿ, ಮುಂದೆ ಯಾವುದಾದರೂ ರೀತಿಯಲ್ಲಿ ಅದಕ್ಕಿಂತ ಹೆಚ್ಚು ಸಿಗಲು ಸಾಧ್ಯ. ತನ್ನ ಸಮಾಜದ ಜವಾಬ್ಧಾರಿಯನ್ನು ಬಂಟರ ಸಂಘ ಮುಂಬಯಿ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು.

ಪಶ್ಚಿಮ ವಲಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್ ಮಾತನಾಡುತ್ತಾ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯಿಂದ ಈ ಸಲ ಸುಮಾರು ೧.೮೦ ಕೋಟಿ ರೂಪಾಯಿಯನ್ನು ನೀಡಲಾಗಿದ್ದು ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿ ಗೆ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಮುಂದೆ ಅರ್ಜಿಯ ಸಂಖ್ಯೆ ಕಡಿಮೆಯಾಗಿ ಮೊತ್ತವು ಹೆಚ್ಚಾಗುದರಿಂದ ನಿಜವಾಗಿ ಸಹಾಯ ಬೇಕಾದವರು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ಮತ್ತು ಪರಿವಾರದವರನ್ನು ಸನ್ಮಾನಿಸಲಾಯಿತು.  ಬಹಳ ಅರ್ಥಪೂರ್ಣವಾದ ಜವಾಬ್ದಾರಿಯನ್ನು ಸಂಘ ನನಗೆ ನೀಡಿದೆ.  ನನಗೆ ನೀಡಿದ ಜವಾಬ್ದಾರಿಯನ್ನು ನನ್ನ ಬಳಗದ ಎಲ್ಲಾ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಿಸುತ್ತೇನೆ.  ನಮ್ಮ ಪ್ರಾದೇಶಿಕ ಸಮಿತಿಯಿಂದ 544 ಅರ್ಜಿಯನ್ನು ಸಲ್ಲಿಸಿದ್ದು ಸಂಘವು ಅದೆಲ್ಲವನ್ನು ಮಂಜೂರು ಮಾಡಿದೆ ಎನ್ನಲು ಸಂತೋಷವಾತುತ್ತಿದೆ. ನಮ್ಮ ಸಮಿತಿಯ ವತಿಯಿಂದ ಬಂಟರ ಸಂಘಕ್ಕೆ 5 ಲಕ್ಷ ರೂಪಾಯಿಯನ್ನು ನೀಡಿದ್ದೇವೆ.  ನಮ್ಮ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಬಂಟರ ಸಂಘ ಮುಂಬಯಿ, ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿ, ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರಿಗೂ ಕೃತಜ್ನತೆ ಸಲ್ಲಿಸುತ್ತಿರುವೆನು. 

ಆರ್ಥಿಕ ಧನಸಾಯ ಚೆಕ್ಕನ್ನು ಬಂಟರ ಸಂಘ ಮುಂಬಯಿ  ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ  ಮತ್ತು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿ ಅವರು ಪ್ರಾದೇಶಿಕ ಸಮಿತಿಗ ಹಸ್ತಾಂತರಿಸಿದರು.  

ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು  ಸಮಾಜದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲಾಯಿತು. 

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ  ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ  ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ, ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು, ಪಶ್ಚಿಮ ವಲಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್, ಸ್ಥಳೀಯ ನಗರಸೇವಕ  ಪ್ರಶಾಂತ್ ದಾಲ್ವಿ , ಸಂಘದ ಜೊತೆ ಕೋಶಾಧಿಕಾರಿ, ಶಶಿಧರ ಕೆ. ಶೆಟ್ಟಿ ಇನ್ನಂಜೆ,  ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ  ಕಾರ್ಯಾಧ್ಯಕ್ಷರಾದ  ಉಪಕಾರ್ಯಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿಎ ಉತ್ತಮ್ ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ತಾರನಾಥ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ,  ಉಪ ಕಾರ್ಯಧ್ಯಕ್ಷ  ಅರವಿಂದ ಎ. ಶೆಟ್ಟಿ , ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ ,ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ದೇರಳ ಕಟ್ಟೆ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿ , ಯುವ ವಿಭಾಗ ಕಾರ್ಯಧ್ಯಕ್ಷ ವೃಷಬ್ ಶೆಟ್ಟಿ ,  ಸಂಚಾಲಕ ರವಿಕಾಂತ್ ಶೆಟ್ಟಿ ಇನ್ನ ,ಉಪ ಕಾರ್ಯಧ್ಯಕ್ಷ  ದಾಮೋದರ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ , ಕೋಶಾಧಿಕಾರಿ  ಅಮಿತ ಬಿ. ಶೆಟ್ಟಿ  ಉಪಸ್ಥಿತರಿದ್ದರು. 

  ಕಾರ್ಯಕ್ರಮದ ಯಶಸ್ವಿಗೆ ಕಿಶೋರ್ ಶೆಟ್ಟಿ ಕುತ್ಯಾರ್ ರವೀಂದ್ರ ಶೆಟ್ಟಿ ದೇರಳ ಕಟ್ಟೆ, ರಾಜೇಶ್ ಶೆಟ್ಟಿ , ಕರುಣಾಕರ್ ಶೆಟ್ಟಿ ಕುಕ್ಕುಂದೂರು ಗುನಪಲ್ ಶೆಟ್ಟಿ ಕುಕ್ಕುಂದೂರು, ವೇಣುಗೋಪಾಲ್ ಶೆಟ್ಟಿ ಇನ್ನಂಜೆ, ಜಗದೀಶ್ ಶೆಟ್ಟಿ ಪಂಜನಡ್ಕ, ರಾಜೇಶ್ ಶೆಟ್ಟಿ ಕಾಪು ಮತ್ತು ಮಹಿಳಾ ವಿಭಾಗ ಯುವ ವಿಭಾಗದ ಸದಸ್ಯರು ಶ್ರಮಿಸಿದರು,

,ಉಪ ಕಾರ್ಯಧ್ಯಕ್ಷೆ ಸುಜಾತ ಪಿ. ಶೆಟ್ಟಿ, ಕಾರ್ಯದರ್ಶಿ  ಸುಮಂಗಳ ಕಣಂಜಾರ್, ಕೋಶಾಧಿಕಾರಿ ವಂದನ ಶೆಟ್ಟಿ, ಜೊತೆ ಕಾರ್ಯದರ್ಶಿ  ಶಿಲ್ಪ ಶೆಟ್ಟಿ, ಜೊತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ,  ಉಪ ಕಾರ್ಯಧ್ಯಕ್ಷ  ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ನಿರೀಕ್ಷ ಶೆಟ್ಟಿ,  ಕೋಶಾಧಿಕಾರಿ ಸ್ವಾತಿ ಶೆಟ್ಟಿ, ಜೊತೆ ಕಾರ್ಯದರ್ಶಿ  ಅನುಷ ಶೆಟ್ಟಿ, ಜೊತೆ ಕೋಶಾಧಿಕಾರಿ ಧನೇಶ್ ಶೆಟ್ಟಿ , ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರು, ಮಹಿಳಾ ವಿಭಾಗದ ಸಂಧ್ಯಾ ಶೆಟ್ಟಿ,  ವೈದ್ಯಕೀಯ ಸಮಿತಿಯ ಡಾ. ರಿಯಾ ಶೆಟ್ಟಿ, ಕ್ರೀಡಾ ಸಮಿತಿಯ  ಸಾಯಿ ಪ್ರಸಾದ್ ಪೂಂಜ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ರಾಜೇಶ್ ಶೆಟ್ಟಿ,  ಅಶೋಕ್ ಶೆಟ್ಟಿ , ವಿಶಲಾಕ್ಷಿ ಶೆಟ್ಟಿ, ವಿವಾಹ ನೋಂದಣಿ ಆಶಾಲತ ಶೆಟ್ಟಿ, ಮಾಹಿತಿ ಹಾಗೂ ತಂತ್ರಜ್ಞಾನ  ಅಭಿಜಿತ್ ಶೆಟ್ಟಿ, ಕ್ಯಾಟರಿಂಗ್ ವಿಭಾಗ  ಕರುಣಾಕರ್ ಶೆಟ್ಟಿ, ಭಜನೆ ಸಮಿತಿ  ಜಯಶ್ರೀ ಶೆಟ್ಟಿ, ಇ. ಉದ್ಯೋಗ  ಕೃುತಿಕ ಶೆಟ್ಟಿ ಮೊದಲಾದವರು ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿದರು. 

ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಬಂಟರ ಸಂಘದ ಪದಾಧಿಕಾರಿಗಳಾದ ಮುಂಡಪ್ಪ ಪೈಯಾಡೆ , ರವೀಂದ್ರನಾಥ್ ಭಂಡಾರಿ, ಭಾಸ್ಕರ್ ಶೆಟ್ಟಿ  ಕಾಶ್ಮೀರ, ಹರೀಶ್ ಕುಮಾರ್ ಶೆಟ್ಟಿ ಮಾಣಿ, ಮತ್ತಿತರರು ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

 ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಗಿದ್ದು ವಿಜಯ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಮಾಡಿದರು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ  ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮವನ್ನು ನಿರೂಪಿಸಿದರು.

———

ಮೀರಾ  ಭಯಂದರ್ ನ ಬಂಟರನ್ನು ಸಂಘದ ಸದಸ್ಯರನ್ನ ಮಾಡೋದು ನಮ್ಮ ಉದ್ದೇಶ: ಗುತ್ತಿನಾರ್ ರವೀಂದ್ರ ಶೆಟ್ಟಿ,

ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರು ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ಹಾಗೂ ಸಭಾಗೃಹದಲ್ಲಿ ತುಂಬಿದ ಸಮಾಜ ಬಾಂಧವರನ್ನು ಎಲ್ಲರನ್ನು ಸ್ವಾಗತಿಸಿದರು. ವರ್ಷದಿಂದ ವರ್ಷಕ್ಕೆ ಫಲಾನುಭವಿಗಳು ಕಡಿಮೆಯಾಗುತ್ತಿದ್ದಾರೆ, ಇದು ಬಾಳ ಸಂತೋಷದ ವಿಷಯ ಸಮಾಜದಲ್ಲಿ ಎಲ್ಲರೂ ಬಲಿಷ್ಠರಾಗುತ್ತಿದ್ದಾರೆ ಎನ್ನುವುದು ಸಂಕೇತವಾಗಿದೆ, ಅಗತ್ಯವಿದ್ದವರು ಮಾತ್ರ ನೆರವು ಪಡೆಯಿರಿ, ಮೀರಾ-ಬಾಯಿದರ್  ಪರಿಸರದ ಸರ್ವ ಬಂಟರನ್ನು ಸಂಘದಲ್ಲಿ ಸದಸ್ಯ ಮಾಡೋದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು,

——

ಈ ಪರಿಸರದಲ್ಲಿ ಫಲಾನುಭವಿಗಳು ಕಡಿಮೆಯಾಗಬೇಕೆನ್ನುವ  ಉದ್ದೇಶ ಇಡೇರುತ್ತಿದೆ,: ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ 

ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯು ತನ್ನ ಬೇಡಿಕೆಯನ್ನು  ಬಂಟರ ಸಂಘಕ್ಕೆ ತಿಳಿಸಿದಲ್ಲಿ ಸಂಘದ ಸಮಿತಿಯು  ಕೂಡಲೇ ಅದಕ್ಕೆ ಸ್ಪಂದಿಸಿ  ಸಹಕರಿಸುತ್ತಿದ್ದು ಇದೀಗ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ಡಾ. ದಿವಾಕರ ಶೆಟ್ಟಿ ಶೆಟ್ಟಿಯವರ ನೇತೃತ್ವದಲ್ಲಿ ಇಂದು ಈ ಸಮಿತಿಯ ಮೂಲಕ ವಿತರಿಸಲು ಮೂವತ್ತು ಲಕ್ಷಕ್ಕಿಂತಲೂ ಅಧಿಕ ಮೊತ್ತ ನೀಡಿದ್ದು ಅವರಿಗೆ ಹಾಗು ಅವರ ತಂಡಕ್ಕೆ ಹಾಗೂ ಸಂಘದ ಕಾರ್ಯಕಾರಿ ಸಮಿತಿಗೆ ಅಭಿನಂದನ ಸಲ್ಲಿಸಬೇಕಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಇದರಿಂದ ಮಕ್ಕಳಿಗೂ ಸಂಘದ ಚಟುವಟಿಕೆಗಳ ಬಗ್ಗೆ ತಿಳಿಯುವಂತಾಗುತ್ತದೆ. ಮಕ್ಕಳು ಅವರ ತಂದೆ, ತಾಯಿ, ಗುರುಗಳು ಹಾಗೂ ಸಮಾಜದ ಋಣವನ್ನು ತೀರಿಸುವಂತಾಗಬೇಕು. ನಾವೆಲ್ಲರೂ ಒಗ್ಗಟ್ಟಿನಿಂದಿರೋಣ, ಈ ಪರಿಸರದಲ್ಲಿ ಫಲಾನುಭವಿಗಳು ಕಡಿಮೆಯಾಗಬೇಕೆನ್ನುವ ನಮ್ಮ ದೊಡ್ಡ ಉದ್ದೇಶವಾಗಿತ್ತು ಕಳೆದ ವರ್ಷಕ್ಕಿಂತ ಈ ಬಾರಿ ಬಹಳಷ್ಟು ಕಡಿಮೆಯಾಗಿದೆ ಎಂದರೆ ಇಲ್ಲಿ ಬಂಟ ಬಂಧುಗಳು ಮಾಧ್ಯಮ ವರ್ಗದಿಂದ ಮೇಲಕ್ಕೆ ಬಂದಿದ್ದಾರೆ , ಮುಂಬೈ ಬಂಟರ ಸಂಘ ಮಹತ್ವದ ಯೋಜನೆಗಳನ್ನು ರೂಪಿಸಿಕೊಂಡಿದೆ ಅದೆಲ್ಲವೂ ಸಮಾಜ ಬಾಂಧವರಿಗೆ ಸಿಗಬೇಕಾಗಿದ್ದರೆ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿ ಕೊಳ್ಳಬೇಕು ಎಂದು ನುಡಿದರು.. 

Related posts

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk

ಭಾಂಡುಪ್ ಪಿಂಪಾಲೇಶ್ವರ ಮಹಾದೇವ ಮಂದಿರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ.

Mumbai News Desk

ಸಯನ್ ಮಕರ ಜ್ಯೋತಿ ಫೌಂಡೇಶನ್ ವತಿಯಿಂದ  ನೋಟ್ ಬುಕ್ ವಿತರಣೆ, ಅಭಿನಂದನಾ ಕಾರ್ಯಕ್ರಮ,

Mumbai News Desk

ನವ ತರುಣ ಮಿತ್ರ ಮಂಡಳ (ರಿ.) ಮೀರಾ ಭಾಯಂದ‌ರ್ ಆಶ್ರಯದಲ್ಲಿ ಮೀರಾ ರೋಡ್ ನಲ್ಲಿ ಅಮ್ಮು.. ಆಮುಂಡರಾ..? ತುಳು ನಾಟಕ,

Mumbai News Desk

ತೀಯಾ ಸಮಾಜ ಮುಂಬಯಿ 79ನೇಯ ವಾರ್ಷಿಕ ಮಹಾಸಭೆ; ಪ್ರತಿಭಾ ಪುರಸ್ಕಾರ ವಿತರಣೆ ಅಧ್ಯಕ್ಷರಾಗಿ ಕೃಷ್ಣ ಎನ್. ಉಚ್ಚಿಲ್ ಪುನಾರಾಯ್ಕೆ

Mumbai News Desk