September 6, 2026
Mumbai News Kannada
ಮುಂಬಯಿ

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.





     ಮುಂಬಯಿ ಜು 12. .ಕುಲಾಲ ಸಂಘ ಮುಂಬಯಿಯ ಗುರುವಂದನಾ ಭಜನಾ ಮಂಡಳಿಯ  ಗುರು ಪೂರ್ಣಿಮೆ ಆಚರಣೆಯು ಸಂಘದ ಕೇಂದ್ರ ಕಚೇರಿಯಲ್ಲಿ  ಜು 10  ರಂದು ಗುರುವಾರ ಸಂಜೆ   ಯಿಂದ ರಾತ್ರಿ  ವರೆಗೆ  ಭಜನೆ ಯುಂದಿಗೆ ನಡೆಯಿತು..

ಮಂಗಳಾರತಿಯೊಂದಿಗೆ ಗುರುವಂದನಾ ಭಜನಾ ಮಂಡಳಿಯ ಪ್ರದಾನ ಅರ್ಚಕರಾದ ಶಂಕರ್ ವೈ ಮೂಲ್ಯ  ನಡೆಸಿದರು.

.ಸಂಘದ ಅಧ್ಯಕ್ಷರಾದ ರಘು ಮೂಲ್ಯ,ಮತ್ತು ಗೌರಾಧ್ಯಕ್ಷರಾದ ದೇವದಾಸ್ ಕುಲಾಲ್ ಗುರುವಂದನಾ ಭಜನಾ ಮಂಡಳಿಯ  ಕಾರ್ಯಧ್ಯಕ್ಷ       ಸುಂದರ ಏನ್ ಮೂಲ್ಯ ಇವರ ಉಪಸ್ಥಿತಿಯಲ್ಲಿ ದೇವರಿಗೆ  ದೀಪ ಬೆಳಗಿಸಿ , ಪ್ರದಾನ ಅರ್ಚಕರ ಗುರು ಮಂತ್ರದೊಂದಿಗೆ ಭಜನೆಗೆ ಚಾಲನೆ ಕೊಟ್ಟರು .

  ಮಹಾ ಮಂಗಳಾರತಿಯ ನಂತರ ಪ್ರದಾನ ಅರ್ಚಕರಾದ ಶಂಕರ್ ವೈ ಮೂಲ್ಯರವರ ಹಿತ ವಚನಗಳು ನಾವು ಹುಟ್ಟಿದಂದಿನಿಂದ ಇದುವರೆವಿಗೂ ನಮಗೆ ಅಕ್ಷರ ಕಲಿಸಿದ ಎಲ್ಲ ಗುರುದೇವರ ಸಹಾಯ ಹಸ್ತ ಇದ್ದು.ಗುರು ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ .ಗುರು ಪರಂಪರೆಯ ಮಹತ್ವ ಅಂದರೆ ಒಬ್ಬ ಗುರು ತನ್ನ ಜ್ಞಾನದಿಂದ ಅನೇಕ ಶಿಷ್ಯರನ್ನು ಸಿದ್ದಪಡಿಸಿ ,ಮುಂದೆ ಅವರು ಗುರು ಪರಂಪರೆಯನ್ನು ಮುಂದುವರಿಸುವುದು , ನಮ್ಮ ಸನಾತನ ಧರ್ಮ ಸಂಸ್ಕಾರ – ಸಂಸ್ಕೃತಿ ಉಳಿಯಬೇಕಾದರೆ ಇಲ್ಲಿ ನಡೆಯುತ್ತಿರುವ ಪ್ರತಿ ತಿಂಗಳ ಮೊದಲ ವಾರದಲ್ಲಿ ಆಗುವ ಭಜನೆಗೆ ನಮ್ಮ ಹೆಚ್ಚಿನ ಸದಸ್ಯರು ಉಪಸ್ಥಿತರಿರಬೇಕು  ಎಂದು ಅಂದು ಸೇರಿದ ಭಕ್ತಾಭಿಮಾನಿಗಳಿಗೆ ಹಿತ ವಚನದ ನೀಡಿ  , ತೀರ್ಥ ಗಂಧ ಪ್ರಸಾದವನ್ನು ಹಂಚಿದರು.

  ಅಂದಿನ ಗುರುಪೂರ್ಣಿಮೆ ಆಚರಣೆಯು ಕುಲಾಲ ಸಂಘದ ಜ್ಯೋತಿ ಕೋ ಅಫ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಿಬ್ಬಂದಿಗಳು,ಮತ್ತು ಪಿಗ್ಮಿ ಕಲೆಕ್ಷನ್ ಏಜೆಂಟರ ಸಂಯೋಗಲ್ಲಿ ನಡೆಯಿತು.

     ಗುರು ಪೂರ್ಣಿಮೆಯ ಪುಣ್ಯದಿನದ ಗುರು ಪೂಜೆಗೆ ಜ್ಯೋತಿ ಕೋ ಅಫ್ ಕ್ರಿಡಿಟ್ ಸೊಸೈಟಿಯ ಚೇರ್ಮೆನ್ ಶ್ರೀ ಗಿರೀಶ ಬಿ  ಸಾಲಿಯಾನ್ , ಮ್ಯಾನೇಜರ್ ಶೇಖರ್ ಅಮೀನ್ ಮತ್ತು ಅಶೋಕ್ ಕುಲಾಲ್ ಹಾಗೂ

ಜ್ಯೋತಿ ಕೊ ಅಫ್ ಕ್ರೆಡಿಟ್ ನ ಎಲ್ಲ ಸಿಬಂದಿ ವರ್ಗದವರು,ಪಿಗ್ಮಿ ಕಲೆಕ್ಷನ್ ಏಜೆಂಟ್ ರವರು ಏರ್ಪಡಿಸಿದ ಗುರುಪೂರ್ಣಿಮೆ ಭಜನೆ ಸಂಕೀರ್ತನೆ.

   ಸಂಘದ ಗೌ .ಪ್ರಾ .ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ , ಸಂಘದ ಕೋಶಾಧಿಕಾರಿ ಜಯಾ ಅಂಚನ್,ಸಂಘದ ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ ಮೂಲ್ಯ, ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಬಂಜನ್, ಬಿಲ್ಡಿಂಗ್ ಕಮಿಟಿ ಉಪಾಧ್ಯಕ್ಷ ರಾದ ದಾನಿ ಸುನಿಲ್ ಸಾಲಿಯಾನ್ , ಯುವ ವಿಭಾಗದ ಚೇರ್ ಮೆನ್ ವೇಣು ಗೋಪಾಲ್ ಕರ್ಕೇರ ,TKKB ಕಾರ್ಯದರ್ಶಿ ಹರಿಯಪ್ಪ ಮೂಲ್ಯ, ಮೀರಾ ರೋಡ್ ವಿರಾರ್ ಕಾರ್ಯದರ್ಶಿ ನ್ಯಾ. ಉಮಾನಾಥ ಮೂಲ್ಯ . ಮೀರಾ ರೋಡ್ ವಿರಾರ್  ಉಮೇಶ್ ಬಂಗೇರ ,ಕೃಷ್ಣ ಬಂಗೇರ ದೊಂಬಿವಲಿ, ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯದರ್ಶಿ ಉಷಾ ಆರ್ ಮೂಲ್ಯ. ನವಿ ಮುಂಬಯಿ ಗುರುವoದನ ಭಜನಾ ಮಂಡಳಿಯ ಸಂಘಟಕರಾಗಿ ಸುನಿತಾ ಎಸ್ ಮೂಲ್ಯ, 

   ಸುಂದರ್ ಮೂಲ್ಯ ನುಡಿ ಮಾತುಗಳಿಂದ ಎಲ್ಲರ ಯಶಸ್ವಿಗೆ ದೇವರಿಗೆ ಪ್ರಾರ್ಥನೆಗೈದರು.

  ನಾನಿಲ್ತಾರ್ ಅಭಿಮಾನಿ ಬಳಗದ ಕೃಷ್ಣ ಎಸ್ ಮೂಲ್ಯ , ಇವರು ಬಂದು  ಗುರುಪೂಜೆಯ ಯಶಸ್ವಿಗೆ ಸಹಕರಿಸಿದರು.

 ಎಲ್ಲರೂ ತೀರ್ಥ ಪ್ರಸಾದವನ್ನು ಸ್ವೀಕರಿಸ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

B. Dinesh Kulal

Mob.: 9821868674



Related posts

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿಯ 80ನೇ ವಾರ್ಷಿಕ ಮಹಾಸಭೆ

Mumbai News Desk

ಪದ್ಮನಾಭ ಕಟೀಲುರವರು ಆಯೋಜನೆಯಲ್ಲಿ  ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮಯಣೆಯಲಿ ಗಲ್ಫ್ ರಾಷ್ಟ್ರದ ಸಾಧಕರಿಗೆ ಗೌರವಾರ್ಥನೆ

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಆಶಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಕರ್ನಾಟಕ ಸಂಘ ಕಲ್ಯಾಣ ವತಿಯಿಂದ ಶ್ರೀ ರಾಮ ನವಮಿ ಆಚರಣೆ

Mumbai News Desk

ಗೋರೆಗಾಂವ್ ಕರ್ನಾಟಕ ಸ಼ಂಘ, “ರಂಗಸ್ಥಳ” ದಿಂದ ಆಟಿಡೊ಼ಂಜಿ ಬಯ್ಯದ ಪೋರ್ತು 2025

Mumbai News Desk