April 2, 2025
ಸುದ್ದಿ

ಶಿಕ್ಷಣ ಮತ್ತು ಸಾಮಾಜಿಕ ರಂಗದ ಅನುಪಮ ಸಾಧಕ ಹೆಜಮಾಡಿ ಕೋಡಿ ಜಯಶೀಲ ಬಂಗೇರ ಅವರಿಗೆ ಸನ್ಮಾನ.

ವಿದ್ಯಾ ಪ್ರಸಾರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ, ಹೆಜಮಾಡಿಕೋಡಿ ಇದರ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಬಪ್ಪನಾಡು ಜಯಶೀಲ ಬಂಗೇರ ಅವರನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಪರವಾಗಿ ಇತ್ತೀಚಿಗೆ ಸನ್ಮಾನಿಸಲಾಯಿತು.

ಜಯಶೀಲ ಬಂಗೇರರ ಪರಿಚಯ ಮತ್ತು ಸಾಧನೆ.

ಜಯಶೀಲ ಬಂಗೇರರವರು ಹೆಜಮಾಡಿ ಕೋಡಿಯ ಬಪ್ಪನಾಡು ದಿವಂಗತ ಸೀತಾ ಬಂಗೇರ ಮತ್ತು ಕಾಡಿಪಟ್ನ ದಿವಂಗತ ಕೆ. ಟಿ.ಮೆಂಡಂನ್ ದಂಪತಿಗಳಿಗೆ 17.12.1947 ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹೆಜಮಾಡಿ ಕೋಡಿ ಫಿಷರೀಸ್ ಶಾಲೆಯಲ್ಲಿ ಪಡೆದು ನಂತರ ಮುಲ್ಕಿಯ ವಿಜಯ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಗಳಿಸಿದರು. ಮುಂಬೈ ನಗರದಲ್ಲಿ ಉದ್ಯೋಗದ ಅವಕಾಶ ಇದ್ದರೂ ಶಿಕ್ಷಕ ವೃತ್ತಿಯನ್ನು ಕೈಗೆತ್ತಿಕೊಂಡರು. 1969 -70 ರಲ್ಲಿ ಬಜಪೆಯ ಸೈಂಟ್ ಜೋಸೆಫ್ ಪಿಯು ಕಾಲೇಜಿನಲ್ಲಿ ಒಂದು ವರ್ಷ ಹಾಗೂ 1970 -71 ರಲ್ಲಿ ಕಾಪು ಮಹಾದೇವಿ ಪ್ರೌಢಶಾಲೆಯಲ್ಲಿ ಒಂದು ವರ್ಷ ಹಾಗೆಯೇ ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 1971- 72 ರಲ್ಲಿ ಮಣಿಪಾಲ್ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಬಿಎಡ್ ತರಬೇತಿಯನ್ನು ಪಡೆದರು. 1972 73 ರಲ್ಲಿ ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಶಾಲೆಯಲ್ಲಿ ಒಂದು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.1973ರಲ್ಲಿ ಉಡುಪಿಯ ಪ್ರಸಿದ್ಧ ಶಾಲೆಗಳಲ್ಲಿ ಒಂದಾದ ಕ್ರಿಶ್ಚಿಯನ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿ, 2005ರಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದರು. ಹೀಗೆ ಶಿಕ್ಷಣ ಕ್ಷೇತ್ರದಲ್ಲಿ 35 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾಧಾನಗೈದು ದೇಶ ವಿದೇಶಗಳಲ್ಲಿ ಸಹಸ್ರಾರು ಶಿಷ್ಯಂದಿರನ್ನು ಹೊಂದಿರುವರು.


ಮಾನಂಪಾಡಿ ದಿ.ಎ.ಎಲ್ ಪುತ್ರನ್ ಹಾಗೂ ದಿ. ನರ್ಸಿ ಕೋಟ್ಯಾನ್ ದಂಪತಿಗಳ ಪುತ್ರಿ ವಸಂತಿ ಜೆ ಬಂಗೇರರನ್ನು ವಿವಾಹವಾಗಿದ್ದು ಶಿಕ್ಷಕ ವೃತ್ತಿಯ ಶ್ರೀಮತಿ ವಸಂತಿ ಬಂಗೇರರು ಸಹ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹೆಜಮಾಡಿ ಕೋಡಿ ಯಲ್ಲಿ ಪಡೆದು ನಂತರ ಮಂಗಳೂರಿನ ಕಪಿತಾನಿಯೋ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷಗಳ ಶಿಕ್ಷಕ ತರಬೇತಿ ಪಡೆದು ಹಳೆಯಂಗಡಿಯ ಖಾಸಗಿ ಶಾಲೆಯಲ್ಲಿ ಒಂದು ವರ್ಷ ಹಾಗೂ ಬಡ ಎರ್ಮಾಳು ಸರಕಾರಿ ಮೀನುಗಾರಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ನಂತರ 1973ರಲ್ಲಿ ಹೆಜಮಾಡಿ ಕೋಡಿ, ಸರಕಾರಿ ಮೀನುಗಾರಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ 2006ರಲ್ಲಿ ಮುಖ್ಯೋಪಾದಾಯಣನಿಯಾಗಿ ನಿವೃತ್ತರಾದರು.
ತಮ್ಮ ಶಿಕ್ಷಕ ಸೇವಾ ಅವಧಿಯಲ್ಲಿ ಜನ ಮೆಚ್ಚಿದ ಶಿಕ್ಷಕಿ ಎಂಬ ಪ್ರಶಸ್ತಿಯನ್ನು ಪಡೆದಿರುವರು.ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿಗೆ ಜನ್ಮ ನೀಡಿ ಅವರೆಲ್ಲರಿಗೂ ಉನ್ನತಮಟ್ಟದ ವಿದ್ಯೆಯನ್ನು ಕೊಡಿಸಿ ಅವರೆಲ್ಲರೂ ಒಳ್ಳೆಯ ಉದ್ಯೋಗವನ್ನು ಪಡೆದು ತಮ್ಮ ಗ್ರಹಸ್ಥಾಶ್ರಮದಲ್ಲಿ ನೆಲೆ ಕಂಡಿರುವರು. ತಮ್ಮ ಸೇವಾ ಅವಧಿಯಲ್ಲಿ ಅಪಾರ ಸಂಖ್ಯೆಯ ಶಿಷ್ಯಂದಿರನ್ನು ಹೊಂದಿರುವ ದಂಪತಿಗಳು ಸಮಾಜಕ್ಕೆ ಬಹಳ ಆಧರಣೀಯರಾಗಿದ್ದಾರೆ.


ನಿವೃತ್ತಿ ನಂತರ ಜಯಶೀಲ ಬಂಗೇರರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಪ್ಪನಾಡು ಮೊಗವೀರ ಗ್ರಾಮ ಸಭೆಯ ಅಧ್ಯಕ್ಷರಾಗಿ ಬಪ್ಪನಾಡು ವಿಠೋಬ ಭಜನಾ ಮಂದಿರ ಹಾಗೂ ಜೀರ್ಣಾವಸ್ಥೆಯಲ್ಲಿದ್ದ ನಾಗಬನದ ಜೀರ್ಣೋದ್ಧಾರ ಕಾರ್ಯದ ಮೇಲುಸ್ತುವಾರಿ ವಹಿಸಿದರು. 2007ರಲ್ಲಿ ಮಂದಿರದ ಆವರಣದಲ್ಲಿ ನಡೆಸಲ್ಪಟ್ಟ ಚತುಷ್ಪಪವಿತ್ರ ನಾಗಮಂಡಲದ ನೇತೃತ್ವ ವಹಿಸಿ 29.04.2009ರಲ್ಲಿ ಉದ್ಘಾಟನೆಗೊಂಡ ಸಮುದಾಯ ಭವನದ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮುಕ್ಕದಲ್ಲಿರುವ ಬಂಗೇರ ಮೂಲಸ್ಥಾನದ ಕಾರ್ಯದರ್ಶಿಯಾಗಿ ಕೋಶಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿರುವುದಲ್ಲದೆ 05.05. 95 ರಂದು ಮುಕ್ಕಾದ ಬಂಗೇರ ಮೂಲಸ್ಥಾನದಲ್ಲಿ ಜರಗಿದ ನಾಗಮಂಡಲ ನೆರವೇರುವರೆ ಪ್ರಮುಖ ಪಾತ್ರ ವಹಿಸಿದ್ದರು. ಮುಲ್ಕಿ ನಾಲ್ಕು ಪಟ್ಣ ಮೋಗವೀರ ಸಭಾದಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿ 2006ರಲ್ಲಿ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನರ್ ನಿರ್ಮಾಣ, ಬ್ರಹ್ಮಕಲಶೋತ್ಸವ,ಸಂದರ್ಭದಲ್ಲಿ ದೇವಳದ ಪಡುಭಾಗದ ಗೋಪುರ ರಚನೆಯ ಸಂಪೂರ್ಣ ಖರ್ಚನ್ನು ಮುಲ್ಕಿ ನಾಲ್ಕು ಪಟ್ನ ಮೊಗವೀರ ಸಭೆಯು ವಹಿಸಿಕೊಂಡಿದ್ದು,ಈ ಬಗ್ಗೆ ಧನ ಸಂಚಯನಕ್ಕಾಗಿ ಮುಂಬೈ ಮಹಾನಗರಿಗೆ ತೆರಳಿದ ಶಿಷ್ಯ ಮಂಡಳಿಯ ಭಾಗವಾಗಿದ್ದು ಹಲವಾರು ಸಲ ಮುಂಬೈಗೆ ತೆರಳಿ ಅಲ್ಲಿಯ ಗ್ರಾಮ ಸಭೆಯವರನ್ನು ಒಟ್ಟುಗೂಡಿಸಿ ಸದ್ರಿ ಕಾಮಗಾರಿ ಪೂರ್ಣಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೆ ಸಮಾಜದ ಮೇರು ಸಂಸ್ಥೆಯಾದ ಉಚ್ಚಿಲ ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.


ಹೆಜಮಾಡಿ ಕೋಡಿ ಹಳೆ ವಿದ್ಯಾರ್ಥಿ ಸಂಘದಲ್ಲಿ ತನ್ನ ವಿದ್ಯಾಭ್ಯಾಸದ ಅವಧಿಯಲ್ಲಿಯೇ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವವೂ ಇವರಲ್ಲಿದೆ. 1975 ರಲ್ಲಿ ಜರಗಿದ ಸಂಘದ ರಜತ ಮಹೋತ್ಸವ ಹಾಗೂ 2001ರಲ್ಲಿ ಜರಗಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಇವರು ಕಾರ್ಯದರ್ಶಿಯಾಗಿದ್ದರು. 2011ರಲ್ಲಿ ಪ್ರಾರಂಭವಾದ “ವಿದ್ಯಾ ಪ್ರಸಾರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ” ಸಂಚಾಲಕರಾಗಿ 12 ವರ್ಷಗಳ ಕಾಲ ಏನೊಂದು ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ. ತನ್ನ ಪಿಂಚಣಿಯಿಂದ ಶಾಲೆಯ ಒಂದು ತರಗತಿ ಕೊಠಡಿಯ ಖರ್ಚನ್ನು ವಹಿಸಿಕೊಂಡಿರುವುದು ಬಹಳ ಶ್ಲಾಘನೀಯ. ಇವತ್ತಿನವರೆಗೂ ಆಡಳಿತ ಮಂಡಳಿಯ ಸದಸ್ಯರಾಗಿದ್ದು 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದಲ್ಲಿ ಕರ್ನಾಟಕ ಸಂಘ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಯಲ್ಲಿ ಉಡುಪಿ ಬ್ಲಾಕಿನ 77 ಶಾಲೆಗಳಲ್ಲಿ ನಮ್ಮ ಶಾಲೆಯು ಪ್ರಥಮ ಸ್ಥಾನ ಪಡೆದಿರುವುದು ಜಯಶೀಲ ಬಂಗೇರದಿಂದ ಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊರೆತ ಒಳ್ಳೆಯ ಮಾರ್ಗದರ್ಶನ, ಉತ್ತಮ ಸಲಹೆ ಹಾಗೂ ಬುದ್ಧಿ ಮಾತುಗಳೇ ಕಾರಣ.ಅವರ 35 ವರ್ಷಗಳ ಶಿಕ್ಷಕ ವೃತ್ತಿಯ ಅನುಭವ ಹಾಗೂ ವಿಚಾರಧಾರೆಯನ್ನು ಶಾಲೆಗೆ ಧಾರೆ ಎರೆದು ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿರುತ್ತಾರೆ.
ಹೆಜಮಾಡಿ ಕೋಡಿ ವಿದ್ಯಾ ಪ್ರಸಾರ ಫೌಂಡೇಶನ್ ಸಂಸ್ಥೆಯಲ್ಲಿ ಈಗಲೂ ಆಡಳಿತ ಮಂಡಳಿಯ ಸದಸ್ಯರಾಗಿದ್ದುಕೊಂಡು ಉತ್ತಮ ಸಲಹೆ ಸೂಚನೆಗಳನ್ನು ನೀಡಿ ಸಮಿತಿ ಸದಸ್ಯರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಇವರಿಗೆ ಇತ್ತೀಚಿಗೆ ಸನ್ಮಾನ ಸಮಾರಂಭದಲ್ಲಿ ವಿನೋದ್ ಕೋಟ್ಯಾನ್, ದಯಾನಂದ್ ಹೆಜಮಾಡಿ, ವಿಕ್ರಂ ರಾಜ್ ಮುಖ್ಯೋಪಾಧ್ಯಯರಾದ ಶ್ರೀಮತಿ ರಾಜೇಶ್ವರಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ತುಳು ಕೂಟದ ಫೌಂಡೇಶನ್, ನಲ್ಲಸೋಪಾರ , ಶ್ರೀದೇವಿ ಯಕ್ಷಕಲಾ ನಿಲಯ ವಿರಾರ್-ನಲ್ಲಸೋಪರ  ವಾರ್ಷಿಕೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಸಾಣೂರು : ಮುಟ್ಟಿ ಸಿ.ಕುಕ್ಯಾನ್ ನಿಧನ.

Mumbai News Desk

ಬಂಟ್ವಾಳ ವೀರ ವಿಕ್ರಮ ಜೋಡುಕರೆ ಕಂಬಳ,ಧಾರ್ಮಿಕ ಮುಖಂಡ ಡಾ. ಎಮ್ ‌ಜೆ ಪ್ರವೀಣ್ ಭಟ್ ಅವರಿಗೆ ಸನ್ಮಾನ,

Mumbai News Desk

“ಮಿಸ್ಟರ್ ಮದಿಮಯೆ” ಕರಾವಳಿಯಾದ್ಯಂತ  ತೆರೆಗೆ

Mumbai News Desk

ಮತ ಸೌಹರ್ದತೆಗೆ ಸಾಕ್ಷಿಯಾದ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ ಸಮಿತಿ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk