
ಇಂದಿನ ವೈಜ್ಞಾನಿಕ ಯುಗದಲ್ಲಿ ಹೆತ್ತವರು ಮತ್ತು ಮಕ್ಕಳು ತಮ್ಮ ದಿನ ನಿತ್ಯದ ನಿಯಮ ತತ್ವವು ಮರೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಏಕ ಜಾತಿ ಧರ್ಮ ಪೀಠ ದ್ವಾರಕಾಮಾಯಿ ಮಠದ ಪೀಠಾಧೀಶ್ವರ ಶ್ರೀ ಸಾಯಿಈಶ್ವರ್ ಗುರೂಜಿಯವರು ತಾ.20-06-2024 ಗುರುವಾರದಂದು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ನಡೂರು ನಲ್ಲಿ ಸಂಕೇತಿಯಾಗಿ ಕೈ ಪಿಡಿಯ
ಬಿಡುಗಡೆ ಮಾಡಿದರು

ಈ ಕೈ ಪಿಡಿಯಲ್ಲಿ ಹೆತ್ತವರು ಮತ್ತು ಮಕ್ಕಳು ನಿತ್ಯ ಅನುಸರಿಸ ಬೇಕಾದ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ ಮುಂದಿನ ದಿನಗಳಲ್ಲಿ
ಎಲ್ಲಾ ಶಾಲಾ ಮಕ್ಕಳ ಕೈ ಸೇರಲಿದೆ ಎಂದು ಗುರೂಜಿಯವರು ತಿಳಿಸುವುದರೊಂದಿಗೆ ಈ ಶಾಲೆಯಲ್ಲಿಯೂ ಪ್ರತಿ ಗುರುವಾರ ಮಠದ ವತಿಯದ ನಡೆಯುವ ಪಾಯಸ ಸೇವೆಯನ್ನು ಪ್ರತಿ ಗುರುವಾರ ನೀಡುವುದರ ಬಗ್ಗೆ ಮಕ್ಕಳಿಗೆ ಸಿಹಿ ಸುದ್ದಿಯನ್ನು ನೀಡಿದರು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸಂತೋಷ್ ಶೆಟ್ಟಿ , ಗೌರವ ಶಿಕ್ಷಕಿಯರಾದ ಗಂಗಾ, ಮಮತಾ,ಅನುರಾಧ,ಕವಿತಾ, ಸೌಜನ್ಯ ಹಾಗೂ ಅಡುಗೆ ಸಿಬ್ಬಂದಿ ಪ್ರೇಮಾ , ಸಾಧನಾ
ಅಂಗನವಾಡಿ ಕಾರ್ಯಕರ್ತೆ ಮಾಲತಿ .ಆರ್.ಶೆಟ್ಟಿ ಮತ್ತು ಅನಿತಾ ಮತ್ತು ಶಾಲಾ ಆಡಳಿತ ಮಂಡಳಿಯ ಪ್ರಶಾಂತ್ ಪೂಜಾರಿ ಮತ್ತು ಶ್ರೀ ರವಿ ಶೆಟ್ಟಿ ಉಪಸ್ಥಿತರಿದ್ದರು.