
.ಭಜನೆಯು ದೇವರನ್ನು ಮೆಚ್ಚಿಸುವ ಸಂಪೂರ್ಣ ಕಲೆ,ಸತ್ಕಾರ್ಯ.: ವಿದ್ವಾನ್ ಕೈರ ಬೆಟ್ಟು ವಿಶ್ವನಾಥ್ ಭಟ್,
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜೂ 21. ಮುಂಬೈಯ ಪ್ರತಿಷ್ಠಿತ ಧಾರ್ಮಿಕ ಸಾಮಾಜಿಕ ಸೇವಾ ಸಂಸ್ಥೆ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ ಆಶ್ರಯದಲ್ಲಿ ಸಂಸ್ಥೆಯ ಅಧ್ಯಕ್ಷರೂ,ಪ್ರಸಿದ್ಧ ಹರಿಕಥಾ ವಿದ್ವಾಂಸರೂ ಆದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಜೂನ್ 19 ಬುಧವಾರದಂದು,
ಸಂತಕ್ರುಜ್ ಪೂರ್ವದ ಪೇಜಾವರ ಮಠದಲ್ಲಿ ಭಜನೆ, ಸಂಕೇತನೆಯನ್ನು ಅಭ್ಯರ್ಥಿಸುವ ತರಬೇತಿ ಶಿಬಿರವನ್ನು ಪ್ರಾರಂಭಿಸಿದ್ದಾರೆ,
ಪ್ರತಿದಿನ ಬುಧವಾರ ಸಂಜೆ 4-30 ಯಿಂದ ಈ ಹರಿದಾಸ ಸಾಹಿತ್ಯಕ್ಕೆ ಅನುಗುಣವಾದ ಭಜನೆಯ ತರಗತಿಗಳು ನಡೆಯುತ್ತಿದ್ದು ಭಜನೆ ಕಲಿತು ಕೊಳ್ಳುವ ಆಸಕ್ತರು ಪ್ರತಿ ಬುಧವಾರ ದಂದು ನಡೆಯುವ ಈ ಸತ್ಕಾರ್ಯ ದಲ್ಲ್ಲಿ ಭಾಗವಹಿಸಿ ಜೀವನವನ್ನು ಸಾರ್ಥಕ ಗೊಳಿಸಬಹುದು , ಕಲಿಯುಗದಲ್ಲಿ ಭಜನೆಯ ಎಲ್ಲ ವಿಧದ ಭಾಗವತ್ಪೂಜೆಯ ಪ್ರತಿಕವಾಗಿದ್ದು ಶಾಸ್ತ್ರೀಯ ವಾದ ಭಜನೆ ಗಳನ್ನುತಮ್ಮ ತಮ್ಮ ಮನೆಗಳಲ್ಲಿ ಹಾಡುವುದು, ಕೇಳುವುದನ್ನು ಮಾಡುವುದರಿಂದ ಮನೆಯ ಹಾಗೆಯೇ ಭಜನೆ ನಡೆಯುವ ಸ್ಥಳ ಗಳಲ್ಲಿರುವ ವಾಸ್ತು ದೋಷಗಳು ಋಣಾತ್ಮಕ ಶಕ್ತಿ ಗಳು ನಿವರಣೆಯಾಗುವ ಅವಕಾಶವಿದ್ದು ಪ್ರತಿಯೊಬ್ಬರಿಗೂ ಜೀವನ ಉಲ್ಲಾಸ,ಸಂತೋಷ, ಆತ್ಮತೃಪ್ತಿ,ದೇವರ ಅನುಗ್ರಹ ವನ್ನು ಕೊಡುವ ಉತ್ತಮ ಸಾಧನೆಯ ಕಲೆ,ಸಾಧನವಾಗಿದೆ ಎಂದು ಆಗಮಿಸಿದ ಎಲ್ಲ ಭಾಗಿಗಳಿಗೆ ತಿಳಿಯ ಪಡಿಸಿದರು..
ಪ್ರತಿದಿನ ವಾರದಲ್ಲಿ ಒಂದು ದಿನ ಬುಧವಾರದಂದು ನಡೆಯುವ ಈ ಭಜನೆಯ ಶಿಬಿರದಲ್ಲಿ ಸ್ತ್ರೀಯರು ಪುರುಷರಾದಿಯಾಗಿ ಎಲ್ಲ ವರ್ಗದ,ವಯೋಮಾನದ ಭಕ್ತರಿಗೆ ಉಪಯೋಗ ಪಡೆದುಕೊಳ್ಳಬಹುದು..
ಹೆಚ್ಚಿನ ವಿವರಗಳಿಗಾಗಿ 9820118612(ವಿಶ್ವನಾಥ್ ಭಟ್) 8850072998 (ಸುಶೀಲಾ ದೇವಾಡಿಗ,ಪ್ರ ಕಾರ್ಯದರ್ಶಿ) 9870006800(ಲಕ್ಷ್ಮಿ ಕೋಟ್ಯಾನ್,ಮಹಿಳಾ ವಿಭಾಗ ಅಧ್ಯಕ್ಷೆ) 9867106841(ಸುಚಿತ್ರಾ ಶೆಟ್ಟಿ,ಮಹಿಳಾ ಸಹ ಕಾರ್ಯದರ್ಶಿ) ಅವರನ್ನು ಸಂಪರ್ಕಿಸಬಹುದಾಗಿದೆ