
ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾ.ಮಿಗಳ ನಿರ್ದೇಶನದಂತೆ ತಾ.29.06.2024 ರಂದು ಬೆಂಗಳೂರಿನ ಶ್ರೀ ರಾಮಾಶ್ರಮವನ್ನು ಮುಖ್ಯ ಕೇಂದ್ರವನ್ನಾಗಿಸಿಕೊಂಡು ದೇಶದ ನಾನಾ ಮಂಡಲಗಳಲ್ಲಿ ಏಕಕಾಲದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಭಾರತ ಮಂಡಲದ ಮುಂಬೈ ವಲಯದಲ್ಲಿಯೂ ಸಹ ವಲಯದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಪ್ರಕಾಶ ಭಟ್ಟ, ಮಹಿಳಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ರತಿ ಹೆಗಡೆ, ಗುರಿಕಾರರಾದ ಶ್ರೀ ಜಿ. ಎಸ್ ಹೆಗಡೆ ಹಾಗೂ ಶ್ರೀ ಪ್ರಕಾಶ ಭಟ್ಟ ಇವರ ಉಪಸ್ಥಿತಿಯಲ್ಲಿ, ಮುಂಬೈಯ ಖ್ಯಾತ ಉದ್ಯಮಿ ಮತ್ತು ಶ್ರೀಮಠದ ಭಕ್ತ ಶ್ರೀ ರವೀಂದ್ರನಾಥ ಭಂಡಾರಿ ಹಾಗೂ ಶ್ರೀ ಮಠದ ಭಕ್ತ ವಕೀಲರಾದ ಶ್ರೀ ಮೋರ್ಲಾ ರತ್ನಾಕರ ಶೆಟ್ಟಿಯವರು ದೀಪ ಪ್ರಜ್ವಲಿಸಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ತಾವೇ ಸ್ವತಃ ಬರೆದ ಭಾವ ರಾಮಾಯಣ ಪುಸ್ತಕಗಳ ಸಂಕಲನ “ರಾಮಾವತರಣ ಗ್ರಂಥದದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ರತಿ ಹೆಗಡೆಯವರು ಶ್ರೀ ಗುರುಗಳ ಸಾಧನೆಗಳನ್ನು ವಿಶಿಷ್ಟ ಕಾರ್ಯಗಳನ್ನು ಬಿತ್ತರಿಸಿದರು. ಶ್ರೀಮಠದ ಭಕ್ತರಾದ ವಕೀಲರು ಶ್ರೀ ಮೋರ್ಲಾ ರತ್ನಾಕರ ಶೆಟ್ಟಿಯವರು ಮಾತನಾಡುತ್ತಾ ಶ್ರೀ ಸಂಸ್ಥಾನ ಹೀಗೆಯೇ ಸಾಮಾನ್ಯ ಜನರ ಮನ ಮುಟ್ಟುವ ಸಂಪೂರ್ಣ ರಾಮಾಯಣ ರಚಿಸಿ ಬೇಗನೆ ಮುದ್ರಿಸಲೆಂದು ಹಾರೈಸಿದರು. ಮುಂಬೈಯ ಸಾಕಿನಾಕದಲ್ಲಿ ನಡೆದ ಈ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಭಟ್, ಶ್ರೀಮತಿ ಸವಿತಾ ಪೂಜಾರಿ, ಶ್ರೀ ಶಿವಕುಮಾರ ಮೊದಲಾದವರು ಉಪಸ್ಥಿತರಿದ್ದರು.
ವರದಿ – ಶ್ರೀಮತಿ ಈಶ್ವರಿ ಭಟ್ಟ