
ಮುಂಬಯಿ ಜು ,2.ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. ಮುಂಡ್ಕೂರು. ಇದರ ವತಿಯಿಂದ ನಡೆಸುತ್ತಾ ಬಂದಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಈ ವರ್ಷ 16ನೇ ವರ್ಷದ ಪೂಜೆಯು ಆಗಸ್ಟ್ 11ರಂದು ವಿಲೇ ಪಾರ್ಲೆ ಪೂರ್ವದ ಗೋಮಂತಕ್ ಸಭಾಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಅಭಿಮಾನ ಬಳಗದ ಅಧ್ಯಕ್ಷ ಹರೀಶ್ ಡಿ .ಮೂಲ್ಯ ಬಿಡುಗಡೆಗೊಳಿಸಿದರು.
ಬಿಡುಗಡೆಗೊಳಿಸಿದ ಹರೀಶ್ ಡಿ ಮೂಲ್ಯ ಮಾತನಾಡಿ ಪ್ರತಿವರ್ಷದಂತೆ ಈ ವರ್ಷ ಕೂಡ ಎಲ್ಲರ ಸಹಕಾರದಿಂದ ಪೂಜೆ ಯಶಸ್ವಿಗೊಳ್ಳುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಆ 11 ರಂದು ಬೆಳಿಗ್ಗೆ 8:00 ಯಿಂದ ಸಂಜೆ 6:00 ವರೆಗೆ ನಡೆಯಲಿರುವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ಬಳಗದ ಸಂಚಾಲಕ ಕೃಷ್ಣ ಮೂಲ್ಯ ನಾಲಾಸಾಪುರ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಳಗದ ಉಪಾಧ್ಯಕ್ಷ ದಿನೇಶ್ ಮೂಲ್ಯ ಅಂದೇರಿ, ಕಾರ್ಯದರ್ಶಿ ದಿನೇಶ್ ಬಂಗೇರ ಖಾರದಾ೦ಡ್ ,ಕೋಶಧಿಕಾರಿ ರೋಹಿತ್ ದಾಸ್ ಕೆ ಬ೦ಜನ್, ಜೊತೆ ಕಾರ್ಯದರ್ಶಿ ಲೊಕೇಶ್ ಮೂಲ್ಯ. ಜೊತೆ ಕೋಶ ಧಿಕಾರಿ ವಿಶ್ವನಾಥ್ ಕುಂದರ್. ಮಹಿಳಾ ಸದಸ್ಯರಾದ ಸರೋಜಾ ಎಚ್ ಮುಲ್ಯ,ಅರ್ಚನಾ ಎಸ್ ಮೂಲ್ಯ, ಹೇಮಾಲಾತ ಬಂಗೇರ, ಜ್ಯೋತಿ ಸಾಲಿಯಾನ್. ವಿಂದ್ಯಾ ಎಲ್ ಮೂಲ್ಯ. ಸದಾಶಿವ ಮೂಲ್ಯ ವಿರಾರ್, ನಾಗಪ್ಪ ಮೂಲ್ಯ. ಮತ್ತಿತರರು ಉಪಸ್ಥರಿದ್ದರು,