
ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿ: ರಘು ಮೂಲ್ಯ ಪಾದಬೆಟ್ಟು,
ಕುಲಾಲ ಸಂಘ ಮುಂಬಯಿ ಪ್ರತಿ ವರ್ಷದಂತೆ ಈ ವರ್ಷವೂ 2024-25ರ ಸಾಲಿನ 1ರಿಂದ 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಜೂ 29ರಂದು ಪೋರ್ಟ್ ನ ಸಂಘದ ಕಚೇರಿಯಲ್ಲಿ ನಡೆ ಯಿತು.
ಸಂಘದ ಅಧ್ಯಕ್ಷ ರಾದ ರಘು ಮೂಲ್ಯ ಪಾದೆಬೆಟ್ಟು , ಗೌ.ಅಧ್ಯಕ್ಷರಾದ ದೇವದಾಸ್ ಕುಲಾಲ್ ,ಉಪಾಧ್ಯಕ್ಷರಾದ ಡಿ ಐ ಮೂಲ್ಯ, ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾದ ಆನಂದ ಕುಲಾಲ್. ಜ್ಯೋತಿ ಕೊ ಆಫ್ ಕ್ರೆಡಿಟ್ ಸೊಸೈಟಿ ಕಾರ್ಯ ಧ್ಯಕ್ಷರಾದ ಗಿರೀಶ್ ಬಿ ಸಾಲಿಯಾನ್ , ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷರಾದ ಸುನಿಲ್ ಸಾಲಿಯಾನ್, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್, ಕೋಶ ಧಿಕಾರಿ ಜಯ ಅಂಚನ್. ಮತ್ತಿತರ ಉಪಸ್ಥಿತಿಯಲ್ಲಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಅಧ್ಯಕ್ಷರಾದ ರಘ ಮೂಲ್ಯರವರು ಮಾತಾಡುತ್ತಾ 96 ವರ್ಷದ ಇತಿಹಾಸ ಇರುವ ಕುಲಾಲ ಸಂಘ ಮುಂಬಯಿ ಹಿರಿಯರಿಂದ ಕಾರ್ಯಗತವಾಗಿ ಬಂದಿರುವ ವಿದ್ಯಾರ್ಥಿ ವೇತನ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಈ ಬಾರಿ ಸುನೀಲ್ ಸಾಲಿಯನ್ ರವರ ಸಹಾಯ ಹಸ್ತದಿಂದ ಹಾಗೂ ಸದಸ್ಯರಿಂದ ಸಹಕಾರದಿಂದ ಹೆಚ್ಚು ಹಣವನ್ನು ಒಟ್ಟು ಕೂಡಿಸಿ ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಸಹಾಯವನ್ನು ನೀಡುತ್ತಿದ್ದೇವೆ. ಸಂಕಷ್ಟದ ಸಮಯದಲ್ಲಿ ಸಂಘ ಯ ಸಹಕರಿಸುತ್ತದೆ. ಆದ್ದರಿಂದ ಸಮಾಜ ಬಾಂಧವರು ಸ್ಥಳೀಯ ಸಮಿತಿ ಮೂಲಕವಾದರೂ ಸಂಘದ ಸದಸ್ಯರಾಗಬೇಕು. .ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿ ,ಮುಂದೊಂದು ದಿನ ವಿದ್ಯಾವಂತರಾಗಿ ದೊಡ್ಡ ಹುದ್ದೆ ಅಥವಾ ವ್ಯಾಪಾರವನ್ನು ಅಲಂಕರಿಸುವ ಸಮಯದಲ್ಲಿ ಅದು ನಮಗೆ ಸಹಕಾರಿಯಾಗುತ್ತದೆ.ಯುವ ಸಮುದಾಯ ಸಂಘದ ಏಳಿಗೆಗಾಗಿ ದುಡಿದು ಸಂಘವನ್ನು ಬಲ ಪಡಿಸಿ .ಮುಂದಿನ ವಿದ್ಯಾರ್ಥಿಗಳಿಗೆ ಬಾಳಿಗೆಗೆ ದಾರಿ ದೀಪವಾಗಬೇಕು ಎಂದು ಮಕ್ಕಳಿಗೆ ಮಾರ್ಗ ದರ್ಶನ ನೀಡಿದರು.
ಗೌ .ಅಧ್ಯಕ್ಷರಾದ ದೇವದಾಸ್ ಕುಲಾಲ್ ರವರು ಮಾತನಾಡುತ್ತ ಮಕ್ಕಳ ಭವಿಷ್ಯಕ್ಕಾಗಿ ಮೊದಲು ಪುಸ್ತಕ ಮತ್ತು ಪೆನ್ ಗಳನ್ನು ವಿತರಿಸುತ್ತಿದ್ದೆವು .ಈಗ ಶೈಕ್ಷಣಿಕ ನೆರವು ಕೊಡುತ್ತಿದೇವೆ .ಸಂಘವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಂಬಾ ಶ್ರಮಪಡುತ್ತದೆ. ವಿದ್ಯಾರ್ಥಿಗಳು ಸಂಘದಲ್ಲಿ ಆಗುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ನೋಡಿದಾಗ. ಸಮಾಜದ ಜ್ಞಾನ ಸಾಮರ್ಥ್ಯವನ್ನು ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾಗುತ್ತದೆ ಎಂದು ನುಡಿದರು,
ಕಾರ್ಯಕ್ರಮ ನಿರೂಪಿಸಿದ ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಮಾತಾಡುತ್ತಾ ಮಕ್ಕಳ ವಿಧ್ಯಾಭ್ಯಾಸ ಕುಂಠಿತವಾಗಬಾರದೆಂದು ,ಹೊರ ಊರಿನಿಂದಲೂ ವಿದ್ಯಾಭ್ಯಾಸಕ್ಕಾಗಿ ಸಹಕಾರ ಬರುತ್ತಿದೆ.ನಮ್ಮ ಮಕ್ಕಳು ಯಾರಾದರೂ ಅತಿಹೆಚ್ಚು ಅಂಕ ಪಡೆದ ಉನ್ನತ ವ್ಯಾಸಂಗ ಮಾಡಲು ಕಷ್ಟವಾಗಿದ್ದಲ್ಲಿ ಅವರಿಗೆ ಸುನೀಲ್ ಸಾಲಿಯಾನ್ ಸಂಘದ ಪರವಾಗಿ ಶೈಕ್ಷಣಿಕ ಸಹಕಾರ ಮಾಡುವವರಿದ್ದಾರೆ.ಇದರ ಸದುಪಯೋಗವನ್ನು ನಮ್ಮ ಮಕ್ಕಳು ಪಡೆಯಬೇಕು .ವಾರ್ಷಿಕೋತ್ಸವದ ದಿನದಂದು 10 ರಿಂದ ಪದವೀಧರರಿಗೆ ಸ್ಕಾಲರ್ ಶಿಪ್ ಸಿಗುತ್ತದೆ. ಇದರ ಸದುಪಯೋಗ ಮಕ್ಕಳು ಪಡೆಯಬೇಕು ಎಂದು ನುಡಿದರು,
ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಮಾತಾಡುತ್ತಾ ನಮ್ಮ ಎಲ್ಲ ಮಕ್ಕಳು ಸ್ಥಳೀಯ ಸಮಿತಿಯವರಲ್ಲಿ ವಿಚಾರಿಸಿ ಸಂಘದಲ್ಲಿ ಸಿಗುವ ಎಲ್ಲ ಯೋಜನೆಯ ಬಗ್ಗೆ ವಿಚಾರಿಸಿ ಅದರ ಲಾಭವನ್ನು ಪಡೆಯಬೇಕು.ಎಲ್ಲರೂ ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿಯ ಪಾಲುದಾರರಾಗಿ,10 ಲಕ್ಷದವರೆಗೆ ವಿದ್ಯಾಭ್ಯಾಸಕ್ಕಾಗಿ ಎಜುಕೇಷನ್ ಲೋನ್ ಸಿಗುತ್ತದೆ . ಇದರ ಮಹತ್ವವನ್ನು ವಿಚಾರಿಸಿ ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯ ಧ್ಯಕ್ಷ ಸುನೀಲ್ ಸಾಲಿಯಾನ್ ಮಾತನಾಡಿ ನಮ್ಮ ಮಕ್ಕಳ ವಿದ್ಯಾಭ್ಯಾಸ ಯಶಸ್ವಿಯಾಗಿ ಮುಂದುವರಿಯಬೇಕು ಎಂಬ ನಿಟ್ಟಿನಿಂದ ಸಂಘದ ವತಿಯಿಂದ ಎಲ್ಲ ವಿಧದಲ್ಲಿ ಸಹಾಯ ಮಾಡಲು ನಾನು ಸದಾ ನಿಮ್ಮೊಟ್ಟಿಗೆ ಇದ್ದೇನೆ .ಮುಂದೆ ಯಶಸ್ವಿಯಾದ ನಂತರ ಮುಂದೆ ನೀವೇ ಸಂಘದ ಏಳಿಗೆಗಾಗಿ ಯ ಶ್ರಮಿಸಬೇಕು ಅದಕ್ಕೆ ಈಗಲೇ ಪ್ರತಿಯೊಂದರಲ್ಲೂ ಶ್ರಮವಹಿಸಿ .ಸಂಘದ ಬೆನ್ನೆಲುಬಾಗಿ ನಿಲ್ಲಬೇಕು. ನಮ್ಮ ಸಂಪಾದನೆಯಲ್ಲಿ ಒಂದಂಶ ಮಾತ್ರ ಸಮಾಜಕ್ಕೆ ಮೀಸಲಿಟ್ಟರೆ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ,ಇದನ್ನು ನಾವು ಎಲ್ಲರೂ ಮನವರಿಕೆ ಮಾಡಬೇಕೆಂದು ತಿಳಿಸಿದರು.
ಸಂಘದ ಉಪದ್ಯಕ್ಷರಾದ ಡಿ ಐ ಮೂಲ್ಯ , ರಾಘು ಮೂಲ್ಯ ಗೊರೆಗಾವ್, ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಶೇಖರ ಮೂಲ್ಯ ,ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾದ ಆನಂದ್ ಕುಲಾಲ್,ಮಕ್ಕಳ ವಿದ್ಯಾಭ್ಯಾಸದ ಕುರಿತು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಅಮೂಲ್ಯ ಉಪಸಂಪಾದಕರಾದ ಆನಂದ್ ಬಿ ಮೂಲ್ಯ ,ಗುರುವಂದನಾ ಭಜನಾ ಮಂಡಳಿ ಕಾರ್ಯಾಧ್ಯಕ್ಷರಾದ ಸುಂದರ ಮೂಲ್ಯ, ಸದಸ್ಯ ನೊಂದಾನಿಕೆ ಸಮಿತಿಯ ಕಾರ್ಯಾಧ್ಯಕ್ಷೆ ರೇಣುಕಾ ಸಾಲಿಯಾನ್. ಸಂಘದ ಜೊತೆ ಕೋಶಾಧಿಕಾರಿ ಸುನಿಲ್ ಕುಲಾಲ್,ಅಶೋಕ್ ಕುಲಾಲ್, ಮುಂತಾದವರು ಉಪಸ್ಥಿತರಿದ್ದರು.
ದಾನಿಗಳ ಹೆಸರನ್ನು ಕೋಶಾಧಿಕಾರಿ ಜಯ ಅಂಚನ್ ರವರು ಯಾಚಿಸಿದರು.
ಧನ್ಯವಾದ ಸಮರ್ಪಣೆಯನ್ನು ಜೊತೆ ಕಾರ್ಯದರ್ಶಿ ಲಕ್ಷ್ಮಣ ಸಿ ಮೂಲ್ಯ ಮಾಡಿದರು.
ನಂತರ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
.