
ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಇಪ್ಪತ್ತಮೂರನೇ ದಿನದ ಪ್ರದಕ್ಷಿಣೆಗೆ ದಿನಾಂಕ: 06-07-2024 ಶನಿವಾರ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅರ್ಚಕರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು




ಈ ಸಂದರ್ಭದಲ್ಲಿ ಪೆರ್ಡೂರು ಮಾಜಿ ಉಪಾಧ್ಯಕ್ಷ ಶ್ರೀ ಸುರೇಶ ಶೇರ್ವೆಗಾರ್,ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರು ಶ್ರೀ ತುಕಾರಾಮ್ ನಾಯಕ್, ಶ್ರೀ ಸಚಿನ್ ಪೂಜಾರಿ, ಗೆಳೆಯರ ಬಳಗ ಸಂಸ್ಥೆ ಸದಸ್ಯರು ಶ್ರೀ ಸತೀಶ್ ಅಣ್ಣು, ಶ್ರೀ ಸಂದೇಶ್ ಟಿವಿ, ಶ್ರೀ ನಿಶ್ವಲ್ ಶೆಟ್ಟಿ, ಶ್ರೀ ಕೃಷ್ಣ ಪೂಜಾರಿ, ಶ್ರೀ ಪ್ರಕಾಶ್ ಆಚಾರ್ಯ, ಶ್ರೀಮತಿ ರಶ್ಮಿತಾ ಆರ್ .ಕಲ್ಮಡಿ, ಶ್ರೀ ರಾಘು,ಶ್ರೀಮತಿ ಗೀತಾಂಜಲಿ ಎಮ್.ಸುವರ್ಣ , ಶ್ರೀಮತಿ ವೀಣಾ .ಎಸ್. ಶೆಟ್ಟಿ , ಶ್ರೀಮತಿ ಶ್ರೀಮತಿ ಶಿಲ್ಪಾ ಮಹೇಶ್ ಜತನ್, ಶ್ರೀ ಸತೀಶ್ ದೇವಾಡಿಗ, ಶ್ರೀ ಶಶಾಂಕ್ , ಭಕ್ತರು ಉಪಸ್ಥಿತರಿದ್ದರು.