July 23, 2026
Mumbai News Kannada
ತುಳುನಾಡು

ಕಾಪು ಮೂರನೇ ಮಾರಿಯಮ್ಮ ದೇವಸ್ಥಾನ ರಜತ ಗದ್ದುಗೆ ವಿಜ್ಞಾಪನ ಪತ್ರ ಬಿಡುಗಡೆ.







ಕಾಪು, ಜು. 12 : ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತಕ್ಕೊಳಪಟ್ಟಿರುವ ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ ಸ್ಥಾಪನೆಗೊಂಡು ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಪ್ರಯುಕ್ತ ಹಮ್ಮಿಕೊಂಡಿರುವ ದೇವಸ್ಥಾನದ ಜೀರ್ಣೋದ್ಧಾರ, ನೂತನ ರಜತ ಗದ್ದುಗೆ ಸಮರ್ಪಣಾ ಕಾರ್ಯಕ್ರಮದ ವಿಜ್ಞಾಪನ ಪತ್ರ ಬಿಡುಗಡೆ ಸಮಾರಂಭವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ದೇವಸ್ಥಾನದ ತಂತ್ರಿ ಕೆ.ಪಿ. ಶ್ರೀನಿವಾಸ ತಂತ್ರಿ ಮಡುಂಬು, ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತಸರ ಪ್ರಸಾದ್ ಶೆಣೈ ಮಾತನಾಡಿದರು. ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಕಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹೊಸ ಮಾರಿಗುಡಿ

ದೇವಸ್ಥಾನದ ಆಡಳಿತ ಮೊಕ್ತಸರ ನಡಿಕೆರೆ ರತ್ನಾಕರ ಶೆಟ್ಟಿ ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ. ಶಶಿಧರ ಕೆ. ಶೆಟ್ಟಿ ಕೋತ್ವಾಲಗುತ್ತು, ಮುಂಬಯಿ ಸಮಿತಿ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ಶ್ರೀಕರ ಶೆಟ್ಟಿ ಕಲ್ಯ, ಮಾರಿಯಮ್ಮ ದೇವಸ್ಥಾನದ ದರ್ಶನ ಪಾತ್ರಿ ಗಿರೀಶ್ ಪಾತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೂರನೇ ಮಾರಿಯಮ್ಮ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಪ್ರಧಾನ ಸಂಚಾಲಕ ಅರುಣ್ ಶೆಟ್ಟಿ ಪಾದೂರು ಸ್ವಾಗತಿಸಿದರು. ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

B. Dinesh Kulal

Mob.: 9821868674



Related posts

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

Mumbai News Desk

ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ,ದೈವ ಪಾತ್ರಿ ಮುರಳಿ ಪೂಜಾರಿಗೆ ಸನ್ಮಾನ

Mumbai News Desk

ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಬನ್ನಂಜೆ ಬಿಲ್ಲವರ ಸೇವಾ ಸಂಘ: ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ.

Mumbai News Desk

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk