23.5 C
Karnataka
April 4, 2025
ಮುಂಬಯಿ

 ಅಂದೇರಿ ಮೊಗವೀರ ಭವನದಲ್ಲಿ ಯಕ್ಷ ಅಭಿಮಾನಿಗಳನ್ನು ರಂಜಿಸಿದ ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ,



ಮೊಗವೀರ ಭವನದಲ್ಲಿ ಕಲೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಇನ್ನಷ್ಟು ನಡೆಯಲಿ :ಸುರೇಶ್ ಆರ್ ಕಾಂಚನ್ 

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ ಜು 13. ಮೊಗವೀರ ಸಮಾಜದ ಹಿರಿಯ ಸಂಸ್ಥೆಗಳಾದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇವರ ಜಂಟಿ  ಪ್ರಾಯೋಜಕದಲ್ಲಿ ಮೆಕ್ಕೆಕಟ್ಟು ಮೇಳ ಹಾಗೂ ಹಟ್ಟಿಯಂಗಡಿ ಮೇಳದ ಪ್ರಭುತ್ವ ಕಲಾವಿದರ ಕೂಡುವಿಕೆಯಲ್ಲಿ

 ಜುಲೈ 12-ರಂದು ಶುಕ್ರವಾರ ಅಂಧೇರಿಯ ಪಶ್ಚಿಮದ  ವೀರಾ ದೇಸಾಯಿ ರೋಡ್ ಇಲ್ಲಿಯ ಮೊಗವೀರ ಭವನದಲ್ಲಿ. ‘ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಎಂಬ ಪೌರಾಣಿಕ ಯಕ್ಷಗಾನ ಕಲಾಭಿಮಾನಿಗಳನ್ನು ಮನರಂಜಿಸಿತು..

ಯಕ್ಷಗಾನದ ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ   ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಗೌರವ ಅಧ್ಯಕ್ಷರಾದ ಸುರೇಶ್ ಆರ್ ಕಾಂಚನ್  ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಿಂದ ಮುಂಬೈ ನಗರಕ್ಕೆ ಆಗಮಿಸುವ ಕಲಾವಿದರಿಗೆ ಮೊಗವೀರ ಭವನ ವಿಶೇಷ ರಿಯಾಯಿತಿಯಲ್ಲಿ ಸಭಾಭವನವನ್ನು ನೀಡುವಂತಾಗಬೇಕು. ಆ ಮೂಲಕ ಕಲೆ ಕಲಾವಿದರಿಗೆ ಪ್ರೋತ್ಸಾಹ ವಾಗಬಹುದು. ತವರೂರಿನಿಂದ ಬರುವ ನಾಟಕ ಯಕ್ಷಗಾನ ತಂಡದ ಕಲಾವಿದರಿಗೆ ಅವರ ಕಲಾ ಪ್ರದರ್ಶನವನ್ನು ಅನಾವರಣಗೊಳಿಸುವುದಕ್ಕೆ ಸೂಕ್ತ ವೇದಿಕೆಗಳು ಅಗತ್ಯ ಅದುವೇ ಅವರಿಗೆ ನಾವು ನೀಡುವ ಪ್ರೋತ್ಸಾಹ ಆದ್ದರಿಂದ ಮೊಗವೀರ ವ್ಯವಸ್ಥಾಪಕ ಮಂಡಳಿ ಮೊಗವೀರ  ಭವನವನ್ನು ಕಲಾತಂಡಗಳಿಗೆ ನೀಡುವ ಮೂಲಕ ಸಹಕಾರ ವಾಗಬೇಕು. ಕಲಾವಿದರಿಗೆ ನಮ್ಮೆಲ್ಲರ ಪ್ರೀತಿ ಉತ್ಸಾಹ ಪ್ರೋತ್ಸಾಹ ದೊರೆತಾಗ ಅವರು ಇನ್ನಷ್ಟು ರಂಗಭೂಮಿಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಈಗ ಕಲಾವಿದರಲ್ಲಿ ಬಡತನ ಕಡಿಮೆಯಾಗಿದೆ ಕಲಾವಿದರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ವಿದೇಶಗಳಲ್ಲೂ ಉದ್ಯೋಗವನ್ನು ಮಾಡಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ನಗರಕ್ಕೆ ಆಗಮಿಸಿದ ಯಕ್ಷಗಾನ ತಂಡಕ್ಕೆ ಮೊಗವೀರ ಸಮಾಜ ಪೂರ್ಣ ರೀತಿಯ ಸಹಕಾರವನ್ನು ನೀಡಿದೆ ಮುಂದಿನ ದಿನಗಳಲ್ಲೂ ಕೂಡ ಸಮಾಜ ಬಾಂಧವರು ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಕಲೆ ಕಲಾವಿದರಿಗೆ ನಿರಂತರ ಸಹಕಾರವನ್ನು ನೀಡುವ ಎಂದು ನುಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷರಾದ ಎಚ್ ಅರುಣ್ ಕುಮಾರ್ ಮಾತನಾಡುತ್ತಾ. ಮೊಗವೀರ ವ್ಯವಸ್ಥಾಪಕ ಮಂಡಳಿಯಲ್ಲಿ ಸಾಂಸ್ಕೃತಿಕ ಸಮಿತಿ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಪ್ರತಿ ವರ್ಷ ಯಕ್ಷಗಾನ ನಾಟಕಗಳನ್ನು ಮೊಗವೀರ ಭವನದಲ್ಲಿ ಏರ್ಪಡಿಸಿ  ಕಲೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿವರು ಯಕ್ಷಗಾನವ ವನ್ನು ಪ್ರದರ್ಶಿಸುವ ಮೂಲಕ ಕಲಾವಿದರಿಗೆ ಮತ್ತು ಕಲೆಯನ್ನು ಬೆಳೆಸುವುದಕ್ಕೆ ಪ್ರೋತ್ಸಾಹ ನೀಡುವಲ್ಲಿ ಆಕರಿಸಿದ್ದಾರೆ. ಕಲಾ ಪ್ರೇಮಿಗಳಿಗೆ ರಂಜಿಸುವ ನಿಟ್ಟಿನಲ್ಲಿ ಬಹಳಷ್ಟು ಹಿಂದೆ ಯಕ್ಷಗಾನ ತಂಡಗಳು ನಮ್ಮ ಉಭಯ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದೆ ಪ್ರಸ್ತುತ ಸಂದರ್ಭದಲ್ಲಿ ಯಕ್ಷಗಾನ ತಂಡಗಳು ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಆದರೆ ಮುಂಬೈಯ ಕಲಾಭಿಮಾನಿಗಳು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಮಾನವೀಯತೆ ಗುಣದಿಂದ ಕಲಾವಿದರು ಹೆಚ್ಚೆಚ್ಚು ಬೆಳೆದುಕೊಂಡಿದ್ದಾರೆ . ಯಕ್ಷಗಾನ ಪೌರಾಣಿಕ ಹಿನ್ನೆಲೆಗಳನ್ನು, ನಮ್ಮನ್ನು ಧರ್ಮದ ನಡೆಯಲ್ಲಿ ಬೆಳೆಸಲು ಪೂರಕವಾಗಿದೆ.. ಎಂದು ನುಡಿದರು.

ವೇದಿಕೆಯಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಮಾಜಿ ಅಧ್ಯಕ್ಷ. ಮಹಾಬಲ ಕುಂದರ್ , ಎಸ್.ಎ. ಗ್ರೂಪ್ ಆಫ್ ಹೊಟೇಲ್ಸ್ ಆಡಳಿತ ನಿರ್ದೇಶಕ ಸಂತೋಷ್ ಪುತ್ರ ನ್. ರತ್ನಾಕರ ಚಂದನ್ (ಮ್ಯಾನೇಜಿಂಗ್ ಪಾರ್ಟ್‌ನ‌ರ್ ಸ್ಟೇಟಸ್ ಗ್ರೂಪ್ ಆಫ್ ಹೊಟೇಲ್ಸ್)ವಿನೋದ್ ಎಸ್. ಕೋಟ್ಯಾನ್ (ಮ್ಯಾನೇಜಿಂಗ್ ಪಾರ್ಟ್‌ನರ್ ರಾಯಲ್ ಸರ್ವಿಸಸ್ ಮುಂಬಯಿ, ) ಮೊಗವೀರಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್,, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್. ಟ್ರಸ್ಟಿ ದೇವರಾಜ್ ಬಂಗೇರ. ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಗೌರವ ಕೋಶಧಿಕಾರಿ ಪ್ರತಾಪ್ ಕರ್ಕೇರ, ಮಹಿಳಾ ವಿಭಾಗದ ಪ್ರೇಮಲತಾ , ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಕಮಲಾಕ್ಷ ಸರಪ್, ಮಲಾಡ್ ಪ್ರಸಾದ ಹೊಟೇಲ್ ಮಾಲಕ ಬಾಬು ಎಸ್ ಶೆಟ್ಟಿ, ಅಶೋಕ್ ಶೆಟ್ಟಿ, (ಮ್ಯಾನೇಜಿಂಗ್ ಪಾರ್ಟ್‌ನರ್, ಎಸ್.ಎ. ಗ್ರೂಪ್ ಆಫ್ ಹೊಟೇಲ್ಸ್) ಉದಯ ಶೆಟ್ಟಿ (ಸೇಲ್ಸ್ ಮ್ಯಾನೇಜರ್, ಸ್ವಿಫ್ಟ್ ಪ್ರೈಟ್ ಇಂಡಿಯಾ) ಮತ್ತಿತರರು ಪಾಲ್ಗೊಂಡಿದ್ದರು

      ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ವೇದಿಕೆಯಲ್ಲಿ ಆಸೀನರಾಗಿದ್ದ ಅತ್ತಿಗಣ್ಯರಿಗೆ ಮತ್ತು ಕಲಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಯಕ್ಷಗಾನ ಕಲೆ ಉಳಿಯಬೇಕು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಎರಡುಮೊಗವೀರ ಸಂಘಟನೆಗಳು ಜಂಟಿಯಾಗಿ ಯಕ್ಷಗಾನವನ್ನು ಆಯೋಜಿಸಿಕೊಂಡು ಯಶಸ್ವಿಯಾಗಿ ನಡೆದಿದೆ ಇದಕ್ಕೆ ಸಹಕಾರ ನೀಡಿದ ಎಲ್ಲರನ್ನು ನೆನಪಿಸಿಕೊಂಡು. 

ಈ ಸಂದರ್ಭದಲ್ಲಿ ಯಕ್ಷಗಾನ ತಂಡದ ಹಾಸ್ಯ ಕಲಾವಿದ ರಮೇಶ್ ಭಂಡಾರಿ . ಖ್ಯಾತ ಕಲಾವಿದ ಜಲವಲ್ಲಿ ವಿದ್ಯಾಧರ್ ರಾವ್, ಶ್ರೀ ಪಾತ್ರಧಾರಿ ನೀಲೋಡು ಶಂಕರ ಹೆಗಡೆ ಇವರನ್ನು ಸನ್ಮಾನಿಸಲಾಯಿತು

 ಹಾಗೂ ಮೇಳದ ಯಜಮಾನರಾದ ರಂಜಿತ್ ಶೆಟ್ಟಿ . ಮತ್ತು ಯಕ್ಷಗಾನವನ್ನು ಸಂಯೋಜಿಸುವಲ್ಲಿ ವಿಶೇಷ ಸಹಕಾರ ನೀಡಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಮಾಜಿ ಅಧ್ಯಕ್ಷ ರಮೇಶ್ ಬಂಗೇರ ಅವರನ್ನು ಅವರನ್ನು ವಿಶೇಷವಾಗಿ ಗೌರವಿಸಲಾಯಿತು, 

ಕಾರ್ಯಕ್ರಮವನ್ನು ರಾಘವೇಂದ್ರ ಬಗ್ವಾಡಿ ನಿರೂಪಿಸಿ ಹೊಂದಿಸಿದರು

ಯಕ್ಷಗಾನದಲ್ಲಿ ಪ್ರಭುತ್ವ ರಂಗ ಕಲಾವಿದರಾದ  ಡೈನಮಿಕ್ ಸ್ಟಾರ್ ವಿದ್ಯಾಧರ ಜಲ್ವಳ್ಳಿ, ನೇಲ್ಕೊಡು ಶಂಕರ ಹೆಗಡೆ, ರಮೇಶ್ ಭಂಡಾರಿ ಮೂರೂರು, ರಾಜೇಶ್ ಭಂಡಾರಿ ,ಗುಣವಂತೆ, ನರಸಿಂಹ ಗಾವ್ಕರ್, ಜಯರಾಮ್ ಕೊಟಾರಿ ಕಮಲಿ ಶಿಲೆ, ಶ್ರೀಕಾಂತ ರಟ್ಟಾಡಿ, ದ್ವಿತೇಶ್ ಕಾಮತ್ ಹಿರಿಯಡ್ಕ, ಅಜಿತ್ ಶೆಟ್ಟಿ, ಮುಂತಾದ ಕಲಾವಿದರು ಭಾಗವಹಿಸಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಆರ್ ಡಿ ಸಂತೋಷ್ ಕುಮಾರ್,ಸುಧೀರ್ ಭಟ್ ಪೆರಡೂರು ಮದ್ದಲೆದಾರರಾಗಿ ಸುಬ್ರಹ್ಮಣ್ಯ ಹೆಗಡೆ ಮೂರೂರು ಚಂಡೆ ವಾದಕರಾಗಿ  ಪ್ರಶಾಂತ್ ಭಂಡಾರಿ ತಮ್ಮ ಪ್ರಭುತ್ವ ಕಲಾ ಚತುರತೆಯಿಂದ  ಸಭಾಂಗಣದಲ್ಲಿ ಸೇರಿಕೊಂಡಿರುವ ಕಲಾಭಿಮಾನಿಗಳನ್ನು ಮನರಂಜಿಸಿದರು.

——

ಸನ್ಮಾನಿತರ ನುಡಿ,

 ಕಲಾವಿದರನ್ನ ಗೌರವಿಸುವ ನಗರ ಮುಂಬೈ: ರಮೇಶ್ ಬಂಡಾರಿ 

ತಂಡದ ಹಿರಿಯ ಹಾಸ್ಯ ಕಲಾವಿದ ರಮೇಶ್ ಭಂಡಾರಿ ಸನ್ಮಾನಕ್ಕೆ ಉತ್ತರಿಸುತ್ತಾ ಮುಂಬೈ ನಗರಕ್ಕೆ ಬರುವುದೆಂದರೆ ಬಹಳ ಸಂತೋಷ,  ಕಲಾವಿದರನ್ನು ಇಲ್ಲಿಯ ಕಲಾಪ್ರೇಕ್ಷಕರು ಪ್ರೀತಿ ಮತ್ತು ಸಂತೋಷದಿಂದ ಮಾತನಾಡುವುದು ವಿಶೇಷವಾಗಿ ಗೌರವಿಸುವುದು ಗುಣ ನನ್ನಂತವರಿಗೆ ಮಾನಸಿಕವಾಗಿ ಸಂತೋಷಗೊಳಿಸುತ್ತದೆ. ಈ ನಗರದ ಹೋಟೆಲ್ ಉದ್ಯಮಿಗಳು ನೌಕರರು ಕಲೆಗೆ ಮಹತ್ವವಾದ ಗೌರವನ್ನು ನೀಡುತ್ತಿದ್ದಾರೆ. ಈ ಹಿಂದೆ ಯಕ್ಷಗಾನ ಒಂದು ದಿನದಲ್ಲಿ ಮೂರು  ಪ್ರದರ್ಶನವಾಗುತ್ತಿದ್ದ ಸಂದರ್ಭವಾಗಿತ್ತು. ಆದರೆ ಈಗ ಸ್ಥಳಾವಕಾಶಗಳು ಮತ್ತು ಹೋಟೆಲ್ ನಲ್ಲಿ ದುಡಿಯುತ್ತಿರುವ ನಮ್ಮ ಊರಿನ ಜನ ಕಡಿಮೆ ಆಗಿರುವುದರಿಂದ ಯಕ್ಷಗಾನದಲ್ಲಿ ಪ್ರೇಕ್ಷಕರು ಮತ್ತು ಪ್ರದರ್ಶನ ಕಡಿಮೆಯಾಗಿದೆ ಆದರೂ ಕಲಾವಿದರನ್ನು ಕಲೆಯನ್ನು ಬೆಳೆಸುವ ಮಹತ್ವ ಕಾರ್ಯ ಈ ನಗರದಲ್ಲಿ ನಡೆಯುತ್ತಿದೆ ಎಂದರು. 

————

ಕಲಾವಿದರ ಅನ್ನದ ಪಟ್ಟಲು ಮುಂಬೈ: ಜಲವಲ್ಲಿ ವಿದ್ಯಾಧರ್ ರಾವ್,

ಪ್ರಸಿದ್ಧ ಕಲಾವಿದ ಜಳವಲ್ಲಿ ವಿದ್ಯಾಧರಾವ್ ಮಾತನಾಡುತ್ತಾ ಮಳೆಗಾಲದಲ್ಲಿ ಕಲಾವಿದರಿಗೆ ಮುಂಬೈ ಅನ್ನದ ಬಟ್ಟಲಾಗಿದೆ ಕಲಾವಿದರ ಅನ್ನದಾತರು ಆಗಿರುವರು. ಕಲಾವಿದರು ಅದೆಷ್ಟು ವರ್ಷಗಳ ಗಳಿಂದ ಮನೆಯನ್ನು ಸಂಸಾರವನ್ನು ತೊರೆದು ಯಕ್ಷಗಾನದಲ್ಲಿ  ತೊಡಗಿಸಿಕೊಂಡಿದ್ದು ಅವರ ಕಷ್ಟ ದುಃಖಗಳು ದೂರವಾಗಳು ಇಂತ ಸಮಾರಂಭ ಕಾರಣ ಏಕೆಂದರೆ ಕಲಾವಿದರನ್ನು ಸಾವಿರ ಜನರು ಗುರುತಿಸುವಂತೆ ಮಾಡಿದ್ದೆ ಸನ್ಮಾನ ಗೌರವಗಳು. ದೊಡ್ಡ ಉದ್ಯಮಿಗಳು ಅಥವಾ ಉನ್ನತ ವ್ಯಾಸಂಗ ಮಾಡಿದವರಿಗೂ ಕೂಡ ಇಂತಹ ಗೌರವಗಳು ಸಿಗುವುದು ಕಡಿಮೆ. ಇದು ಕಲಾವಿದನ ಬದುಕಿನ ಬೆಳವಣಿಗೆಗೆ ಪ್ರೋತ್ಸಾ ನೀಡುವಂತಾಗಿದೆ ಎಂದು ನುಡಿದರು. 

——

ಹಿರಿಯ ಕಲಾವಿದರೊಂದಿಗೆ ಕಿರಿಯರನ್ನು ಗೌರವಿಸಿದ್ದೀರಿ :ನೀಲೋಡು ಶಂಕರ ಹೆಗಡೆ ,

ನೀಲೋಡು ಶಂಕರ ಹೆಗಡೆ ಮಾತನಾಡುತ್ತಾ ಹಿರಿಯ ಕಲಾವಿದರೊಂದಿಗೆ ಕಿರಿಯ ಕಲಾವಿದನಾದ ನನ್ನನ್ನು ಸನ್ಮಾನಿಸಿದ್ದೀರಿ, ಕಲಾಭಿಮಾನಿಗಳ ಆಶೀರ್ವಾದವೇ ನನ್ನ ಮುಂದಿನ  ಬೆಳವಣಿಗೆಗೆ ಪ್ರೋತ್ಸಾಹ ,ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡಲು ಈ ಸನ್ಮಾನ ಪೂರಕವಾಗಿದೆ ಎಂದು ನುಡಿದರು.

Related posts

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಪೂರ್ವ – ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ 26ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ.

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ 35ನೇ ವಾರ್ಷಿಕ ಶರವನ್ನರಾತ್ರಿ ಮಹೋತ್ಸವ ಚಂಡಿಕಾ ಹೋಮ,ಙ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಶೀರೂರು ಮಠಾಧಿಪತಿ, ಪೂಜ್ಯ ವೇದವರ್ಧನತೀರ್ಥ ಶ್ರೀಪಾದರ ಆಗಮನ.

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ 71ನೇ ವಾರ್ಷಿಕ ಮಹಾಸಭೆ.

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಭಾಂಡುಪ್ ಸ್ಥಳೀಯ ಕಚೇರಿಯ ಸಂಯೋಜನೆಯಲ್ಲಿ ಬಾಬು ಶಿವ ಪೂಜಾರಿ ಅವರ “ಬಿಲ್ಲವರ ಗುತ್ತು” ಗ್ರಂಥದ ಮುಂಬಯಿ ಅವೃತಿ ಬಿಡುಗಡೆ.

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024 ಅನುಷಾ ಎ ಕರ್ಕೇರ ಉತ್ತೀರ್ಣ

Mumbai News Desk