ಕಲೀನಾದಲ್ಲಿರುವ ತುಳುಕನ್ನಡಿಗರ ಒಡೆತನದ ಟೆಂಡರ್ ಫ್ರೆಶ್ ಐಸ್ಕ್ರೀಮ್ ಗೆ ಟೈಮ್ಸ್ ಆಫ್ ಇಂಡಿಯಾ ದ ET ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ಉತ್ಪನ್ನ ವಿಭಾಗದಲ್ಲಿ ಪಡೆದ ಈ ಗೌರವವನ್ನು ಟೆಂಡರ್ ಫ್ರೆಷ್ ಆಡಳಿತ ನಿರ್ದೇಶಕ ವಿ ಕೆ ಶೆಟ್ಟಿ ಹಾಗೂ ನಿರ್ದೇಶಕರಾದ ಜಗದೀಶ್ ಎಸ್ ಕಾಮತ್, ಉಷಾ ವಿ ಶೆಟ್ಟಿ ಯವರು ಖ್ಯಾತ ಚಿತ್ರ ನಟಿ ಮುಗ್ಧ ಗೋಡ್ಸೆ ಯವರಿಂದ ಸ್ವೀಕರಿಸಿ ದರು.
ಜುಲೈ 1ರಂದು ಅಂಧೇರಿ ಪೂರ್ವ ದ ಪಂಚತಾರ ಹೋಟೆಲ್ ರೆಡಿಸಾನ್ ಬ್ಲೂ ನಲ್ಲಿ ಜರಗಿತು. ಸುಮಾರು 16 ವರ್ಷಗಳ ಹಿಂದೆ ಸ್ಥಾಪನೆ ಗೊಂಡ ಟೆಂಡರ್ ಫ್ರೆಷ್ ಇದರ 20 ವಿಕ್ರಯ ಘಟಕ ಗಳು ಮುಂಬೈ ಉಪನಗರ, ಗುಜರಾತ್ ರಾಜ್ಯ, ಮಧ್ಯಪ್ರದೇಶದಲ್ಲಿ ವ್ಯವಹರಿಸುತ್ತಿವೆ.