September 6, 2026
Mumbai News Kannada
ಮುಂಬಯಿ

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ (ರಿ ) – ವಾರ್ಷಿಕ  ವಿಹಾರಕೂಟ.






ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ (ರಿ) ಇದರ ವಾರ್ಷಿಕ ವಿಹಾರಕೂಟವು  ಜನವರಿ 24 ಮತ್ತು 25 ರಂದು ಎಷ್ಟೆಲ್ಲಾ ಫಾರ್ಮ್ ಅಂಡ್ ರೆಸಾರ್ಟ್, ಮನೋರಿ ಮಲಾಡ್ (ಪ ) ಮುಂಬೈ, ಇಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಘದ ಸದಸ್ಯರು, ಮಹಿಳಾ ಸದಸ್ಯೆಯರು ಮತ್ತು ಮಕ್ಕಳು ತುಂಬಾ  ಉತ್ಸಾಹದಿಂದ ಭಾಗವಸಿದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮಹಿಳಾ ಸದಸ್ಯೆಯರಿಂದ ಅರಸಿನ  ಕುಂಕುಮ ಕಾರ್ಯಕ್ರಮ ನಡೆಯಿತು. ಕಾಪು ಮೊಗವೀರ ಸಭಾ ಮುಂಬೈ ಇದರ ಅಧ್ಯಕ್ಷರಾದ ಸತೀಶ್ ಕರ್ಕೇರರು ಅರಸಿನ ಕುಂಕುಮದ ಮಹತ್ವದ ಬಗ್ಗೆ ವಿವರಿಸಿದರು. ಸದಸ್ಯರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಂಘದ ಸದಸ್ಯರು ಮಹಿಳಾ ಸದಸ್ಯೆಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಅಧ್ಯಕ್ಷರು, ಅತಿಥಿಗಳು  ಮತ್ತು ಪದಾಧಿಕಾರಿಗಳು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಹಿಳಾ ಸದಸ್ಯೆಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು

ಗೌರವ ಅಧ್ಯಕ್ಷರಾದ ಮಾಧವ ಟಿ ಪುತ್ರನ್ ಮಾತನಾಡಿ ಸಭೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಮಹಿಳಾ ಮತ್ತು ಯುವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯ, ಮತ್ತು ಇಂತಹ ಕಾರ್ಯಕ್ರಮಗಳಿಂದ ನಮ್ಮ ಸದಸ್ಯರ ಕಷ್ಟ ಸುಖಗಳನ್ನು ಅರಿತುಕೊಳ್ಳಲು ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷರಾದ ಜನಾರ್ದನ್ ಮೆಂಡನ್, ಉಪಾಧ್ಯಕ್ಷರಾದ   ಶಂಕರ್ ಪುತ್ರನ್ ಮಾತನಾಡಿದರು.



Related posts

ವರ್ಲಿ   ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಇದರ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಭ್ರಮದೊಂದಿಗೆ ಆಚರಣೆ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ಬೋರಿವಲಿ ಪಶ್ಚಿಮದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk

ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಒಡಿಯೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ದಹಿಸರ್ ಶ್ರೀ ಕಾಶೀಮಠದಲ್ಲಿ ಕೊಂಕಣಿಯಲ್ಲಿ ಯಕ್ಷಗಾನ

Mumbai News Desk

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk

ಬೊರಿವಲಿ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, 52 ನೇ ವಾರ್ಷಿಕ ಮಹಾಸಭೆ

Mumbai News Desk