
ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ 21 ನೇ ಚಾತುರ್ಮಾಸ್ಯ ವ್ರತಸಂಕಲ್ಪವನ್ನು ಗುರುಪೂರ್ಣಿಮೆಯಂದು ತಾ 21.07.2024 ಆದಿತ್ಯವಾರ ಕೊಂಡೆವೂರು ಮಠದಲ್ಲಿ ಕೈಗೊಳ್ಳಲಿದ್ದಾರೆ. ಆ ದಿನ ಬೆಳಿಗ್ಗೆ 9.00 ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭೀಷೇಕ, ಸೀಯಾಳಾಭೀಷೇಕ, 10.30 ಕ್ಕೆ ವ್ಯಾಸಪೂಜೆ ಆರಂಭವಾಗಿ 12.00 ಕ್ಕೆ ಮಂಗಳಾರತಿ, 12.30 ಕ್ಕೆ ಮಹಾಪೂಜೆ ನಂತರ ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ 7 ಕ್ಕೆ “ಶ್ರೀ ಗುರುಪಾದುಕಾ ಪೂಜೆ”, ಭಜನೆ ನಂತರ ಪರಮಪೂಜ್ಯರು ಸತ್ಸಂಗ ನಡೆಸಿ ಅನುಗ್ರಹ ಮಂತ್ರಾಕ್ಷತೆ ನೀಡಲಿದ್ದಾರೆ.
18.09.2024 ಕ್ಕೆ ಸಂಪನ್ನಗೊಳ್ಳಲಿರುವ ಚಾತುರ್ಮಾಸ್ಯದ ಈ ಸತ್ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿದಿನ ಸಂಜೆ 5.30 ರಿಂದ 7 ರವರೆಗೆ ವಿವಿಧ ಭಜನಾ ತಂಡಗಳಿ೦ದ ಭಜನಾಸೇವೆ ನಡೆಯಲಿದ್ದು, ಪ್ರತೀ ಭಾನುವಾರ ವಿದ್ವಾಂಸರಿ೦ದ ಪ್ರವಚನ, ಯಕ್ಷಗಾನ ತಾಳಮದ್ದಳೆ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಚಾತುರ್ಮಾಸ್ಯದ ಈ ಪುಣ್ಯ ಸಮಯದಲ್ಲಿ ಭಕ್ತಾದಿಗಳು ಶ್ರೀ ಮಠಕ್ಕೆ ಆಗಮಿಸಿ ಶ್ರೀ ಗಾಯತ್ರೀ ಮಾತೆಯ ಹಾಗೂ ನಿತ್ಯಾನಂದ ಭಗವಾನರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕೊಂಡೆವೂರು ಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.