
ಮಕ್ಕಳಿಗೆ ಮಾರ್ಗದರ್ಶನ, ಸಂಸ್ಕೃತಿಯ ತಿಳುವಳಿಕೆ ನೀಡುವ ಕಾರ್ಯ ಶ್ಲಾಘನೀಯ : ಪ್ರವೀಣ್ ಭೋಜ ಶೆಟ್ಟ
ಮಂಗಳೂರು ಜು19. ವಿದ್ಯಾರ್ಥಿ ವೇತನವನ್ನು ನೀಡುವ ಉದ್ದೇಶ ಶಿಕ್ಷಣಕ್ಕೆ ಸ್ಫೂರ್ತಿ ನೀಡುವುದು ಇದರ ಜೊತೆಗೆ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಾ, ಸಮಾಜದ ಸುಧಾರಣೆಯನ್ನು ಮಾಡುವ ಒಳ್ಳೆಯ ಕಾರ್ಯವನ್ನು ಗುರುಪುರ ಬಂಟರ ಮಾತೃ ಸಂಘವು ಮಾಡುತ್ತಾ ಬಂದಿದೆ. ನಕಾರಾತ್ಮಕ ಚಿಂತನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಮಕ್ಕಳಿಗೆ ಮಾರ್ಗದರ್ಶನ, ಸಂಸ್ಕೃತಿಯ ತಿಳುವಳಿಕೆ ನೀಡುವ ಕಾರ್ಯವಾಗಬೇಕೆಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಗುರುಪುರ ಬಂಟರ ಮಾತೃ ಸಂಘದ ಹನ್ನೊಂದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸುತ್ತಾ ನುಡಿದರು.

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ವಾಮಂಜೂರು ಚರ್ಚ್ ಹಾಲ್‌ನಲ್ಲಿ ನಡೆಯಿತು .
ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಪುರಸ್ಕಾರ, ಬಂಟ ಯುವತಿಯರ ಸಮಾವೇಶ, ಯುವ ಸಂಗಮ, 2024-27ರ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳು ಆಶೀರ್ವಚನವನ್ನು ನೀಡಿದರು.
ಶಾಸಕ ಡಾ. ಭರತ್ ಶೆಟ್ಟಿ ಇವರು ಸಂದರ್ಭಯೋಚಿತವಾಗಿ ಮಾತನಾಡಿದರು,
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿಯವರು ಎಲ್ಲಾ ಬಂಟರ ಸಂಘ ಮಾತೃ ಸಂಘದ ಅಂಗವಾಗಿದೆ. ಹಿರಿಯರು ನಡೆಸಿದ ಉತ್ತಮ ಕಾರ್ಯವನ್ನೂ ಈಗಲೂ ಮಾತೃಸಂಘ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ನಮ್ಮ ನಿರ್ಣಯಗಳು ಕಾರ್ಯರೂಪಕ್ಕೆ ಬರಬೇಕು. ಮುಂದಿನ ಒಂದುವರೆ ವರ್ಷದಲ್ಲಿ ಗುರುಪುರ ಬಂಟರ ಭವನ ನಿರ್ಮಾಣವಾಗಬೇಕು. ಬಂಟರಿಗೆ ಯಾರೂ ವೈರಿಗಳಿಲ್ಲ. ನಮಗೆ ನಾವೇ ವೈರಿಗಳು ಎಂದು ಸಭೆಯಲ್ಲಿ ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ವಹಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟಿಗುತ್ತು, ಖ್ಯಾತ ರಂಗಕರ್ಮಿ, ಸಂಘದ ಸಾಂಸ್ಕೃತಿಕ ತಂಡದ ನಿರ್ದೇಶಕ ಪರಮಾನಂದ ಸಾಲ್ಯಾನ್ ಸಸಿಹಿತ್ತು, ಡಾಕ್ಟರೇಟ್ ಪದವೀಧರೆ ತೇಜಸ್ವಿ ಸಿದ್ಧಾರ್ಥ್ ರೈ ಶೆಡ್ಡೆ ಹೊಸಮನೆ ಇವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಂಘದ ವ್ಯಾಪ್ತಿಯ 45 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ವ್ಯಾಪ್ತಿಯ ಸಮಾಜದ 380 ವಿದ್ಯಾರ್ಥಿಗಳು ಹಾಗೂ ಇತರ ಸಮಾಜದ 108 ವಿದ್ಯಾರ್ಥಿಗಳಿಗೆ ಸುಮಾರು ರೂ. 10 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
2024-27ರ ನೂತನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.
ಮುಂಬೈ ಬಂಟರ ಸಂಘದ ಬಿವಂಡಿ ಕಲ್ಯಾಣ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶುಭೋದ್ ಡಿ. ಭಂಡಾರಿ, ಮುಂಬೈ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ.ಸುರೇಂದ್ರ ಕೆ ಶೆಟ್ಟಿ, ಬೆಂಗಳೂರು ಮಹಾನಗರದ ಸರ್ಕಲ್ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಆಳ್ವ, ಬೆಂಗಳೂರು ಬಂಟರ ಸಂಘದ ಶಿಕ್ಷಣ ಸಮಿತಿಯ ಅಧ್ಯಕ್ಷ ಸದಾನಂದ ಸುಲಾಯ, ಪೂನಾ ಮಹಾನಗರದ ಹೊಟೇಲ್ ಉದ್ಯಮಿ ಪ್ರಭಾಕರ ಶೆಟ್ಟಿ, ಪೂನಾ ಉದ್ಯಮಿ ರೋಹಿತ್ ಶೆಟ್ಟಿ ನಗಿ ಗುತ್ತು, ಮುಂಬಯಿಯ ಖ್ಯಾತ ಉದ್ಯಮಿ ನಿಖಿಲ್ ಭಂಡಾರಿ ಉಪಸ್ಥಿತರಿದ್ದರು.
ಬೆಳಿಗ್ಗೆ ಬಂಟ ಯುವತಿಯರ ಸಮಾವೇಶ-ಯುವ ಸಂಗಮ ಕಾರ್ಯಕ್ರಮವನ್ನು ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ. ಮೋಹನ್ ಆಳ್ವರವರು ಉದ್ಘಾಟಿಸಿ, ಇಂತಹ ಯುವತಿಯರ ಸಮಾವೇಶವನ್ನು ಮಾಡಿ ಯುವತಿಯರಿಗೆ ಸಮಾಜದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿರುವಂತಹ, ಅಂತರ್ಜಾತಿಯ ಪ್ರೇಮ ವಿವಾಹದ ಬಾಧಕಗಳನ್ನು ತಿಳಿಸುತ್ತಿರುವ ಗುರುಪುರ ಬಂಟರ ಮಾತೃಸಂಘದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕಂಬಳ ಸಮಿತಿಯ ರಾಜೀವ ಶೆಟ್ಟಿ ಎಡ್ವರು, ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ, ಖ್ಯಾತ ಚಿಂತಕ ದಾಮೋದರ ಶರ್ಮ ಬಾರ್ಕೂರು, ಡಾ| ವೈ.ಎನ್. ಶೆಟ್ಟಿ, ಉಪನ್ಯಾಸಕಿ ಅಕ್ಷತಾ ಶೆಟ್ಟಿ ಮುಂತಾದವರು ಯುವತಿಯರಿಗೆ ಉಪನ್ಯಾಸವನ್ನು ನೀಡಿದರು.
ಜಯರಾಮ್ ರೈ ಉಳಾಯಿಬೆಟ್ಟುಗುತ್ತು ಇವರು ವಿದ್ಯಾರ್ಥಿಗಳ ಪುರಸ್ಕಾರ ಪಟ್ಟಿಯನ್ನು ವಾಚಿಸಿದರು. ವಿಜಯಲಕ್ಷ್ಮಿ ಶೆಟ್ಟಿ, ಉದಯ ಶೆಟ್ಟಿ, ನಯನ ಶೆಟ್ಟಿ, ವಿಜಯಲಕ್ಷ್ಮಿ ಶೆಟ್ಟಿ ನಾರಳ ಸನ್ಮಾನ ಪತ್ರ ವಾಚಿಸಿದರು. ಸುದರ್ಶನ್ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಖ ಶೆಟ್ಟಿ ಕಾವೂರು ಮತ್ತು ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರವೀಣ್ ಆಳ್ವ ಗುಂಡ್ಯ ಧನ್ಯವಾದ ಸಮರ್ಪಿಸಿದರು. ವಾರ್ಷಿಕ ಮಹಾಸಭೆ, ವಾರ್ಷಿಕ ಸಮಾವೇಶದ ಬಳಿಕ ನೃತ್ಯ ಸಿಂಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
——-
ಸಂಸ್ಕೃತಿ ಕಾಪಾಡುವ ಜವಾಬ್ದಾರಿ ನಮ್ಮದು : ಸಿಎ ಸುರೇಂದ್ರ ಕೆ ಶೆಟ್ಟಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಂಬೈಯ ಪ್ರತಿಷ್ಠಿತ ಬಂಟ ಸಮಾಜದ ಸಂಘಟನೆ ಬಾಂಬೆ ಬಂಟ್ಸ್ ಆಸೋಸಿಯೇಷನ್ ಅಧ್ಯಕ್ಷ ರಾದ ಸಿಎ ಸುರೇಂದ್ರ ಕೆ ಶೆಟ್ಟಿ ಮಾತನಾಡಿ ಗುರುಪುರ ಬಂಟರ ಮಾತೃಸಂಘದ ಪ್ರತಿಯೊಂದ ಯೋಜನೆ, ಯೋಚನೆ ಬಹಳ ಸುಂದರವಾಗಿ ಮೂಡಿಬರುತ್ತಿದೆ. ಬಂಟ ಸಮಾಜವಲ್ಲದೆ ಬೇರೆ ಸಮಾಜದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ಬೇರೆಯವರಿಗೆ ಸಹಾಯ ಮಾಡುವ ಮನಸ್ಥಿತಿ ಒಳ್ಳೆಯದು. ನಮ್ಮ ಜಿಲ್ಲೆಯಲ್ಲಿ ಸ್ಪರ್ಧಾ ಪರೀಕ್ಷೆಯನ್ನು ಬರೆಯುವವರು ಬಹಳ ಕಡಿಮೆ. ಬಂಟರ ಸಂಘ ವಿದ್ಯಾರ್ಥಿಗಳನ್ನು ಈ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಪ್ರಯತ್ನ ಮಾಡಬೇಕು. ಮೂಲ ಸಂಸ್ಕಾರ, ಸಂಸ್ಕೃತಿ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದರು.