23.5 C
Karnataka
April 4, 2025
ಪ್ರಕಟಣೆ

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ



ಪ್ರಿಯ ರಜಕ ಬಾಂಧವರೇ,
ನಮ್ಮ ಸಂಘದ 85ನೇ ವಾರ್ಷಿಕ ಮಹಾಸಭೆಯು ತಾ. 21.07.2024 ನೇ ರವಿವಾರ ಬೆಳಿಗ್ಗೆ ಘಂಟೆ 9.30 ಕ್ಕೆ ಸರಿಯಾಗಿ ಸ್ವಾಮಿ ನಿತ್ಯಾನಂದ ಹಾಲ್, ಮುಖ್ಯ ಅಧ್ಯಾಪಕ ಭವನ, ಪ್ಲೋಟ್ ನಂ. 6ಬಿ, ಸಾಯನ್ ಸರ್ಕಲ್ ಎದುರುಗಡೆ, ಸಾಯನ್ (ಪ.), ಇಲ್ಲಿ ಜರಗಲಿರುವುದು, ತಾವೆಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕಾಗಿ ವಿನಂತಿ.
ಕಾರ್ಯಸೂಚಿ
1) ಸ್ವಾಗತ ಭಾಷಣ
2) ಪ್ರಾರ್ಥನೆ
3) 84ನೇ ವಾರ್ಷಿಕ ಮಹಾಸಭೆಯ ವರದಿಯನ್ನು ಓದಿ ಮಂಜೂರು ಮಾಡುವುದು.
4) 2023-2024ರ ವಾರ್ಷಿಕ ವರದಿಯನ್ನು ಮತ್ತು ಲೆಕ್ಕಪತ್ರಗಳನ್ನು ಓದಿ ಮಂಜೂರು ಮಾಡುವುದು
5) ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
6) 2024-2026ರ ವರ್ಷಕ್ಕೆ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡುವುದು
7) 2024-2026ರ ವರ್ಷಕ್ಕೆ ವಲಯಗಳ, ಮಹಿಳಾ ಹಾಗೂ ಯುವ ವಿಭಾಗದ ಅಧ್ಯಕ್ಷರ ಆಯ್ಕೆ ಮಾಡುವುದು
8 ) 2024-2025ರ ವರ್ಷಕ್ಕೆ ಶಾಸನಬದ್ಧ ಮತ್ತು ಆಂತರಿಕ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡುವುದು
9 ) ಸದಸ್ಯರ ಭಾಷಣ
10) ಸಾಧಕರ, ಸ್ವರ್ಣ ದಂಪತಿಯರ ಮತ್ತು ನವ ದಂಪತಿಯರ ಸನ್ಮಾನ
11) ಅಧ್ಯಕ್ಷರ ಅನುಮತಿಯ ಮೇರೆಗೆ ಇನ್ನಿತರ ವಿಷಯ
12) ಅಧ್ಯಕ್ಷರ ಭಾಷಣ
13 )ಧನ್ಯವಾದ
14) ರಾಷ್ಟ್ರಗೀತೆ

1) ಸಮಯಕ್ಕೆ ಸರಿಯಾಗಿ (ಕೋರಮ್) ಕಾನೂನಿಗೆ ಬೇಕಾದಷ್ಟು ಸದಸ್ಯರು ಹಾಜರಿರದಿದ್ದಲ್ಲಿ ಅರ್ಧ ಘಂಟೆಯ ಕಾಲ ಕಾದು ಮುಂದುವರಿದ ಸಭೆಯೆಂದು ಪರಿಗಣಿಸಿ, ಸಭೆಯನ್ನು ನೆರವೇರಿಸಲಾಗುವುದು.
2) ಈ ವರದಿಯಲ್ಲಿ ಏನಾದರೂ ತಿದ್ದುಪಡಿ ಕಂಡು ಬಂದರೆ ಅಥವಾ ಮಹಾಸಭೆಯಲ್ಲಿ ಠರಾವು ಮಂಜೂರು ಮಾಡ ಬಯಸುವುದಾದರೆ ಅಂತಹ ಸೂಚನೆಗಳನ್ನು ಬರಹ ಮೂಲಕ ತಾ.15.07.2024 ರೊಳಗೆ ಸಂಘದ ಕಾರ್ಯಾಲಯಕ್ಕೆ ತಲುಪಿಸತಕ್ಕದ್ದು. ತದನಂತರ ದೊರಕಿದ ಯಾವುದೇ ಪತ್ರಗಳನ್ನು ಪರಿಗಣಿಸಲಾಗದು.
3) ಮಹಾಸಭೆಗೆ ಬರುವಾಗ ಈ ವರದಿ ಪುಸ್ತಕವನ್ನು ತರಬೇಕಾಗಿ ವಿನಂತಿ.
ಇತೀ ಆಡಳಿತ ಮಂಡಳಿಯ ಪರವಾಗಿ,

ಸಿ ಎ ವಿಜಯ ಕುಂದರ್ ((ಅಧ್ಯಕ್ಷರು ) ಸುಮಿತ್ರಾ ಆರ್ ಫಲಿಮಾರ್
( ಗೌರವ ಕಾರ್ಯದರ್ಶಿ)

Related posts

ಫೆ. 9. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮೀರಾ – ಭಾಯಂದರ್ ಶಾಖೆಯ ವಾರ್ಷಿಕೋತ್ಸವ

Mumbai News Desk

ನ. 26, 27 ಕಾಪುವಿನ ಮೂರೂ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜಾರ್ದೆ ಮಾರಿಪೂಜೆ

Mumbai News Desk

ಜ. 11 ರಂದು ಮುಂಬಯಿಯಲ್ಲಿ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನ ಮುಕ್ಕ, ಮಂಗಳೂರು ಇದರ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನಾ ಸಭೆ.

Mumbai News Desk

ಡೊಂಬಿವಲಿ, ಠಾಕೂರ್ಲಿ, ಕೋಪರ್ ಪರಿಸರದ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ.

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ : ಅ. 9ರಂದು ನಾಗರಪಂಚಮಿ ಉತ್ಸವ.

Mumbai News Desk

ಕನ್ನಡಿಗರ ಸ್ನೇಹ ಬಳಗ ಸಂಸ್ಥಾ (R) ವತಿಯಿಂದ ಫೆ. 26 ರಂದು ಶಿವ ಭಕ್ತಾದಿಗಳಿಗೆ ಹಣ್ಣು ಹಂಪಲು ವಿತರಣೆ.

Mumbai News Desk