
ಗುರುಸೇವೆ ಶ್ರೇಷ್ಠವಾದುದು. ಧರ್ಮ ರಾಷ್ಟ್ರ ಒಟ್ಟೊಟ್ಟಿಗೆ ಹೋಗಬೇಕು.: ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ,
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಜು 22. ಭವಸಾಗರ ದಾಟಲು ಗುರುವಿನ ಅಗತ್ಯವಿದೆ. ಯಾವುದಕ್ಕೂ ಗುರುಬಲ ಬೇಕು ಎಂದು ಹೇಳುವುದುಂಟು. ಜನನಿ ತಾನೆ ಮೊದಲ ಗುರು. ಮೊದಲ ಪಾಠಶಾಲೆಯಾಗಬೇಕು. ತಾಯಿಯೇ ಮೊದಲ ಗುರುವಾಗಬೇಕು. ಇಂದಿನ ಗೊಂದಲಗಳಿಗೆ ಇದರ ಕೊರತೆಯೇ ಕಾರಣವಾಗಿದೆ. ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಮನೆಯಿಂದಲೇ ಸಿಗಬೇಕು ಎಂದು ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಅವರು ಜುಲೈ 21ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಬಂಟರ ಸಂಘ ಮುಂಬಯಿ ಮತ್ತು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕ, ಹಾಗೂ ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಮಹಾರಾಷ್ಟ್ರ ಘಟಕ ಜಂಟಿ ಆಯೋಜನೆಯಲ್ಲಿ ಗುರುಪೂರ್ಣಿಮೆಯ ಆಚರಣೆಯು ಗುರು ಭಕ್ತರಿಗೆ ಆಶೀರ್ವಚನ ನೀಡಿದರು ,
ಮಾನವಪ್ರೀತಿ – ಮಾಧವ ಭಕ್ತಿಯ ಕೊರತೆಯಿಂದ ನಮ್ಮಲ್ಲಿ ಸಂಬಂಧಗಳು ಹಳಸಲು ಕಾರಣವಾಗಿದೆ. ಜೀವನ ವಿಕಾಸವಾಗಬೇಕಾದರೆ ಮಾನವ ಪ್ರೀತಿ ಮಾಧವ ಭಕ್ತಿ ನಮ್ಮಲ್ಲರಬೇಕು. ಉದ್ದೇಶ ಸಾಫಲ್ಯವಾಗಬೇಕಾದರೆ ಹಿಂದೆ ಗುರುವಿನ ಅಗತ್ಯವಿದೆ. ಗುರುವಾಗಿ ಯಾರನ್ನು ಸ್ವೀಕರಿಸಬೇಕೆನ್ನುವ ಅರಿವಿರಬೇಕು. ನಿತ್ಯ ವಿದ್ಯಾರ್ಥಿಯಾದವ ಆದರ್ಶ ಗುರುವಾಗಬಲ್ಲ. ವಿಶ್ವವೇ ವಿಶ್ವವಿದ್ಯಾಲಯ. ಕಲಿಯುವುದಕ್ಕೆ ಬಹಳಷ್ಟು ಇದೆ ಎಂದು ನುಡಿದರು.
ಮಹಾಮಂಗಳಾರತಿಯನ್ನು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು. ಒಡಿಯೂರ ಗುರು ದೇವ ಸೇವೆ ಬಳಗದ ಮುಂಬಯಿ ಬಳಗದ ಅಧ್ಯಕ್ಷ ದಾಮೋದರ್ ಶೆಟ್ಟಿ ನಡೆಸಿದರು.

ಮಧ್ಯಾಹ್ನ ಭಜನೆ. ಬಳಿಕ ಶ್ರೀ ಸ್ವಾದಿ ಶ್ರೀ ಮಾತಾನಂದಮಯಿ ಅವರು ಪಾದಪೂಜೆಯನ್ನು ನಡೆಸಿದರು.
ರಾತ್ರಿ ಮಹಾಪೂಜೆಯ ಬಳಿಕ ಮನೀಶ್ ಕ್ಯಾಟರಿಂಗ್ ನ ಮಾಲಕ ವಾಮನ್ ಶೆಟ್ಟಿ ಅವರ ಆಯೋಜನೆಯಲ್ಲಿ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಿತು.
. ಗುರುಪೂರ್ಣಿಮೆಯಲ್ಲಿ ಬಂಟರ ಸಂಘದ ಪದಾಧಿಕಾರಿಗಳು ಸದಸ್ಯರು ಮಹಿಳಾ ವಿಭಾಗದ ಪದಾಧಿಕಾರಿಗಳು. ಯುವ ವಿಭಾಗದ ಪದಾಧಿಕಾರಿಗಳು ಸದಸ್ಯರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡು ಗುರುದೇವರ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು .