24.7 C
Karnataka
April 3, 2025
ಮುಂಬಯಿ

ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ,




ಯಕ್ಷಗಾನ ಕ್ಷೇತ್ರದಲ್ಲೂ ಮಹಿಳೆಯರು ಪ್ರಬಲವಾಗಿ ಬೆಳೆಯಬೇಕು: ವಿನೋದ ಡಿ ಶೆಟ್ಟಿ,

ಮುಂಬಯಿ, ಜು. 23. ಕಾಂದಿದಲಿ ಕನ್ನಡ ಸಂಘದ ವತಿಯಿಂದ ಸಂಘದ ಮಹಿಳಾ ವಿಭಾಗದ ಸದಸ್ಯರ ಸಂಯೋಜನೆಯಲ್ಲಿ ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರ ದಕ್ಷ ನಿರ್ದೇಶನದಲ್ಲಿ “ಸುದರ್ಶನ ವಿಜಯ “ಯಕ್ಷಗಾನ ತಾಳಮದ್ದಳೆ ಕಾಂದಿವಿಲಿ ಪಶ್ಚಿಮದ ಮಹಾವೀರ ನಗರದ ಪೋಯಿಸರ್ ಸಭಾಗೃಹದಲ್ಲಿ ಜು. 7ರಂದು ನಡೆಯಿತು

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಘದ ಅಧ್ಯಕ್ಷ ಪೂಲ್ಯ ಜಯಪಾಲ್ ಶೆಟ್ಟಿ ಬಳಿಕ ಮಾತನಾಡಿ ಯಕ್ಷಗಾನ ದೇವರ ಸೇವೆ, ಅದು ನಮ್ಮ ಸಾಂಸ್ಕೃತಿಕ ಕಲೆಯು ಹೌದು, ಯಕ್ಷಗಾನಕ್ಕೆ ಭಾಷೆ, ಕಲೆ, ಸಂಸ್ಕೃತಿಗೆ ಮನುಷ್ಯತ್ವ ರೂಪಿಸುವ ಶಕ್ತಿಯಿದೆ. ವಿಶೇಷ ಮಹಾಕಾವ್ಯಗಳ ಆಧಾರಿತ ಯಕ್ಷಗಾನ ತಾಳಮದ್ದಳೆ ಕಲೆಗೆ ಮನಸ್ಸು ಪರಿವರ್ತಿಸುವ ಶಕ್ತಿಯಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕಿ, ತುಳು ಸಂಘ ಬೊರಿವಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ ಮಾತನಾಡಿ, ಸಾಂಸ್ಕೃತಿಕ ಬದುಕಿನಲ್ಲಿ ಮನೋಭಾವ ಚಿಂತನೆಗಳು ಭಾವನಾತ್ಮಕವಾಗಿ ಬೆಳೆದಾಗ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲು ಸಾಧ್ಯ ಪರಿಸರದಲ್ಲಿ ಸಾಂಸ್ಕೃತಿಕವಾಗಿ ಬೆಳೆದ ಮಹಿಳೆಯರಿಗೆ ಇಂಥ ಅವಕಾಶಗಳು ದೊರೆಯಬೇಕು. ಆಗ ಅವರ ಅಂತರಂಗದ ಸಾಂಸ್ಕೃತಿಕ ಬದುಕು ಹೂರಣವಾಗಲು ಸಾಧ್ಯ ಎಂದರು.


ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಮಾತನಾಡಿ, ಮಹಿಳೆಯರ ಸುಪ್ತ ಪ್ರತಿಭೆ ಅನಾವರಣ ಗೊಳ್ಳಲು ಇಂತಹ ಈ ಕಾರ್ಯಕ್ರಮ ಗಳು ಅವಕಾಶ ಕಲ್ಪಿಸಲಿದೆ. ಇಂದಿನ ಕಾರ್ಯಕ್ರಮಕ್ಕೆ ಪರಿಸರದ ತುಳು ಕನ್ನಡಿಗರ ಉಪಸ್ಥಿತಿ ಮಹಿಳೆಯರ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತಾಗಿದೆ.ಯಕ್ಷಗಾನ ಕ್ಷೇತ್ರದಲ್ಲೂ ಮಹಿಳೆಯರು ಪ್ರಬಲವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದೇವೆ ಎಂದು ನುಡಿದರು.

ಸುದರ್ಶನ ವಿಜಯ-ಯಕ್ಷಗಾನ ತಾಳಮದ್ದಳೆ ಯಶಸ್ವಿಯಾಗಿ ಜರಗಿತು. ಜಯಲಕ್ಷ್ಮೀ ಶೆಟ್ಟಿ ಶುಭಾ ಸುವರ್ಣ, ಭಾರತಿ ಶೆಟ್ಟಿ .ಶ್ರುತಿ ಗಾಣಿಗ .ಸುನಂದಾ ಶೆಟ್ಟಿ .ನೇತ್ರಾ ಶೆಟ್ಟಿ .ಶರ್ಮಿಳಾ ಶೆಟ್ಟಿ. ದಿವ್ಯಾ ಶೆಟ್ಟಿಗಾರ್, ಶೈಲಜಾ ಶೆಟ್ಟಿ ಕಲಾವಿದರಾಗಿ ಭಾಗವಹಿಸಿದರು.

ಸಂಘದ ಉಪಾಧ್ಯಕ್ಷ ಪ್ರೇಮನಾಥ್ ಪಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸಬಿತ ಜಿ.ಪೂಜಾರಿ, ಗೌರವ ಕೋಶಾಧಿಕಾರಿ ಜಗನ್ನಾಥ್ ಡಿ. ಕುಕ್ಯಾನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶರ್ಮಿಳಾ ಎಸ್. ಶೆಟ್ಟಿ .ಕಾರ್ಯದರ್ಶಿ ಜಯಲಕ್ಷ್ಮಿ ಬಿ.ಶೆಟ್ಟಿ .ಕೋಶಾಧಿಕಾರಿ
ಆಶಾ ಮೊಗವೀರ ಉಪಸ್ಥಿತರಿದ್ದರು.

ಸದಸ್ಯ ತನುಜಾ ಭಟ್ ಕಾರ್ಯ ಕ್ರಮ ನಿರೂಪಿಸಿದರು. ಆಶಾ ಮೊಗವೀರ ವಂದಿಸಿದರು.

Related posts

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

ಶ್ರೀ ರಾಜನ್ ದೈವ ಶ್ರೀ ಧೂಮವತಿ ದೈವಸ್ಥಾನ ಬಳ್ಕುಂಜೆ : ಅಭಿವೃದ್ಧಿ ಸಮಿತಿ ಮುಂಬಯಿ 15 ನೇ ವಾರ್ಷಿಕ ಮಹಾಸಭೆ.

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ – 170 ನೇ ಗುರು ಜಯಂತಿ ಆಚರಣೆ – 2024

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆಟಿಡೊಂಜೆ ಬಂಟರೆ ಕೂಟ

Mumbai News Desk

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ: ವಿದ್ಯಾರ್ಥಿಗಳಿಗೆ  ಲೀಡರ್ಶಿಪ್ ಬಗ್ಗೆ ಉಪನ್ಯಾಸ. 

Mumbai News Desk

ಕಲಾತಂತ್ರ ಪ್ರೊಡಕ್ಷನ್ ಲೋಕಾರ್ಪಣೆ : ಜು. 28ರಂದು ‘ತುಡರ್’ ತುಳು ಚಿತ್ರ ಬಿಡುಗಡೆ.

Mumbai News Desk