September 6, 2026
Mumbai News Kannada
ಪ್ರಕಟಣೆ

ಜು 27: ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ, ತುಳು ನಾಟಕ,





ನವಿ ಮುಂಬಯಿ : ಜು 24.ನಗರದ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾದ ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಮತ್ತು ಐತಿಹಾಸಿಕ ತುಳುನಾಡ ರಾಣಿ ಅಬ್ಬಕ್ಕ ತುಳು ನಾಟಕವು ಜುಲೈ 27ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನವಿ ಮುಂಬಯಿ ಜೂಯಿನಗರದ ಸೆಕ್ಟರ್ 24ರಲ್ಲಿರುವ ಬಂಟ್ಸ್‌ ಸೆಂಟರ್‌ನಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಥಾಣೆ ಬಂಟ್ಸ್ ನ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತಾರಾ ಶೆಟ್ಟಿ ಹಾಗೂ ಮುಲುಂಡ್ ಬಂಟ್ಸ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆರತಿ ವೈ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರುಗಳಾದ ವಿನಿತ ಸಿ ಶೆಟ್ಟಿ ,ಆಶಾ ಎಸ್ ಶೆಟ್ಟಿ ,ಲತಾ ಜಿ ಶೆಟ್ಟಿ ,ಅವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ಮೊದಲು ಮತ್ತು ನಂತರ ಅಸೋಸಿಯೇಷನ್ ನ ಮಹಿಳಾ ವಿಭಾಗದ ಸದಸ್ಯರಿಂದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟಿ ತಿಂಗಳಿನ ಬಗ್ಗೆ ಮಾತುಗಳು ಹಾಗೂ ಮಹಿಳಾ ಸದಸ್ಯರು ಅಭಿನಯಿಸುವ ನಾರಾಯಣ್ ಶೆಟ್ಟಿ ನಂದಳಿಕೆ ಅವರು ರಚಿಸಿ,ನಿರ್ದೇಶಿಸಿರುವ ಮನೋವರ ಶೆಟ್ಟಿ ನಂದಳಿಕೆಯ ಸಲಹೆ ಸಹಕಾರದ ತುಳು ಐತಿಹಾಸಿಕ ನಾಟಕ “ತುಳುನಾಡ ರಾಣಿ ಅಬ್ಬಕ್ಕ” ಪ್ರದರ್ಶನಗೊಳ್ಳಲಿದೆ,

ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಬಾಂಬೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷ ಅಡ್ವಕೇಟ್ ಡಿ. ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಕೋಶಧಿಕಾರಿ ಸಿ ಎ ವಿಶ್ವನಾಥ್ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ. ಶೆಟ್ಟಿ,ಜೊತೆ ಕೋಶಧಿಕಾರಿ ಸಿಎ ದಿವಾಕರ್ ಶೆಟ್ಟಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ, ಶಾಂತ ಎನ್. ಶೆಟ್ಟಿ, ಕಾರ್ಯದರ್ಶಿ ಸಹಾನಿ ವಿ. ಶೆಟ್ಟಿ, ಕೋಶಾಧಿಕಾರಿ ಉಷಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಲಲಿತ ಬಿ ಶೆಟ್ಟಿ, ಜೊತೆ ಕೋಶಾಧಿಕಾರಿ ಮಾಯಾ ಎಸ್ ಆಳ್ವ , ಯುವ ವಿಭಾಗದ ಕಾರ್ಯಧ್ಯಕ್ಷೆ ದೃಶ್ಯ ಕೆ ಶೆಟ್ಟಿ ವಿನಂತಿಸಿಕೊಂಡಿದ್ದಾರೆ.



Related posts

ಮೇ 31, 2026 ರಂದು ಕುಮಾರಿ ಲಿಖಿತಾ ರತ್ನಾಕರ ಕರ್ಕೇರರ ಭರತನಾಟ್ಯಂ ಪ್ರಥಮ ರಂಗ ಪ್ರವೇಶ

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ : ಅ. 9ರಂದು ನಾಗರಪಂಚಮಿ ಉತ್ಸವ.

Mumbai News Desk

SARVAJANIKA SHRI GANESHOTSAVA 2024 IN AJMAN ON 8TH SEPTEMBER BY MARGADEEPA

Mumbai News Desk

ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ, ‘ಬಾಪ್ಟಿಸ್ಟ್‌ವಾಡಿ’ ಅಂಧೇರಿ ಪೂರ್ವ : ಪುನರ್ ನಿರ್ಮಾಣ, ಹೊಸ ಮೂರ್ತಿ ಸ್ಥಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಿಮಿತ್ತ ಮನವಿ ಪತ್ರ ಬಿಡುಗಡೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು – ಮಾ. 6ಕ್ಕೆ ಸ್ತನಪಾನ ಕೊಠಡಿ ಉದ್ಘಾಟನೆ

Mumbai News Desk