April 2, 2025
ಮುಂಬಯಿ

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ, ಗುರುಪೂರ್ಣಿಮೆ ಆಚರಣೆ – 2024

ಬಿಲ್ಲವರ ಅಸೋಸಿಯೇಶನ್ , ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಛೇರಿಯ ಸಭಾಗೃಹದಲ್ಲಿ ಗುರುಪೂರ್ಣಿಮೆಯ ಪೂಜೆಯನ್ನು ರವಿವಾರ ದಿನಾಂಕ 21/07/2024 ರಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು.


ಪುರೋಹಿತರಾದ ಐತಪ್ಪ ಸುವರ್ಣ, ಜಗದೀಶ್ ಕೋಟಿಯನ್ , ಈಶ್ವರ್ ಕೋಟಿಯನ್ , ಗೋಪಾಲ ಪೂಜಾರಿ , ಪುರೋಷೋತ್ತಮ್ ಪೂಜಾರಿ , ಚಂದ್ರಪಾಲ್ ಪೂಜಾರಿ ಹಾಗೂ ಇತರರ ಕಾರ್ಯಕರ್ತರ ಸಹಕಾರದಿಂದ ಗುರುಮಂಟಪವನ್ನು ಅಲಂಕರಿಸಿ ಪೂಜ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ 9.30 ಗಂಟೆಗೆ ಕಲಶ ಪ್ರತಿಷ್ಟೆಯ ನಂತರ ಗುರು ಭಕ್ತರಿಂದ 12.30 ರ ತನಕ ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು. ನಂತರ ಮಹಾಮಂಗಳಾರತಿ ,ಪ್ರಸಾದ ವಿತರಣೆ ಹಾಗು ಅನ್ನ ಪ್ರಸಾದ ನೆಡೆಯಿತು. ಡೊಂಬಿವಿಲಿ ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ಸಚಿನ್ ಪೂಜಾರಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಕಾರ್ಯಕಾರಿ ಸಮಿತಿಯಾ ಸದಸ್ಯೆರಾದ ಜಗದೀಶ್ ಕೋಟಿಯನ್ ಭಕ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಾನಿಗಳು,ಡೊಂಬಿವಲಿ ಪರಿಸರದ ಹಲವು ಸಂಘ ಸಂಸ್ಥೆ ಗಳ ಪಧಾಧಿಕಾರಿಗಳು, ಪ್ರತಿನಿಧಿಗಳು , ಭಾರತ್ ಬ್ಯಾಂಕ್ ನ ಅಧಿಕಾರಿಗಳು, ಹಿತೈಸಿ ಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು. ಸುಮಾರು 150 ಕು ಹೆಚ್ಚು ಗುರು ಭಕ್ತರು ಗುರು ಪೂಜೆ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪಡೆದು ಪುನೀತರಾದರು.


ಶ್ರೀಮತಿ ಮತ್ತು ಶ್ರೀ ಟಿ. ಕೆ. ಕೋಟ್ಯಾನ್ ( ಮಾಲಕರು ಮಂಜುನಾಥ್ ಕೆಟಾರಾರ್ಸ್, ಡೊಂಬಿವಲಿ) ಹಾಗೂ ಶ್ರೀಮತಿ ಗಿರಿಜಾ ಯಸ್. ಪಾಲನ್ (ಹೋಟೆಲ್ ಚಂದ್ರಹಾಸ್, ಬಾರ್ ಅಂಡ್ ರೆಸ್ಟೋರೆಂಟ್, ದೊಂಬಿವಿಲಿ) ಮದ್ಯಾಹ್ನದ ಅನ್ನದಾನ ,ಶ್ರೀಮತಿ ಕುಶ ರವಿ ಸನಿಲ್ , ಶ್ರೀಯುತ ರವಿ ಪೂಜಾರಿ ( ಹೋಟೆಲ್ ವರ್ಷ , ಠಾಕುರ್ಲಿ), ಶ್ರೀಯುತ ರಮೇಶ್ ಸುವರ್ಣ, ಶ್ರೀಮತಿ ಮತ್ತು ಶ್ರೀ ರಾಮಚಂದ್ರ ಬಂಗೇರ, ,ಶ್ರೀಮತಿ ಮತ್ತು ಶ್ರೀ ಸತೀಶ್ ಕೋಟ್ಯಾನ್ (ಮಮತಾ ಡೆಂಟಲ್ ಲ್ಯಾಬ್) ಹಾಗು ಅನೇಕ ಭಕ್ತರು ದೇಣಿಗೆ , ಎಣ್ಣೆ, ಹೂ, ಹಣ್ಣು ಕಾಯಿ ಇತ್ಯಾದಿ ನೀಡಿ ಸಹಕರಿಸಿದರು.


ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಶ್ರೀ ದೇವರಾಜ್ ಪೂಜಾರಿ, ಕಾರ್ಯಾಧ್ಯಕ್ಷ ಚಂದ್ರಹಾಸ್ ಎಸ್ ಪಾಲನ್, ಮಾಜಿ ಕಾರ್ಯಾಧ್ಯಕ್ಷ ರವಿ ಎಸ್ ಸನೀಲ್ ಉಪ ಕಾರ್ಯಾಧ್ಯಕ್ಷರುಗಳಾದ ಶ್ರೀಧರ್ ಅಮೀನ್, ಗೌರವ ಕಾರ್ಯದರ್ಶಿ ಸಚಿನ್ ಜಿ.ಪೂಜಾರಿ, ಸಹ ಕಾರ್ಯದರ್ಶಿ ಕೃಷ್ಣ ಪೂಜಾರಿ, ಗೌರವ ಕೋಶಾಧಿಕಾರಿ ಆನಂದ್ ಪೂಜಾರಿ ,ಸಹ ಕೋಶಾಧಿಕಾರಿ ಶ್ರೀ ಜಗನಾಥ್ ಸನಿಲ್ , ಶ್ರೀ ಮಂಜಪ್ಪ ಪೂಜಾರಿ, ಶ್ರೀ ಈಶ್ವರ್ ಕೋಟಿಯನ್ , ಶ್ರೀ ಸೋಮನಾಥ್ ಈ. ಪೂಜಾರಿ, ಶ್ರೀ ಜಗದೀಶ್ ಕೋಟಿಯನ್ , ಶ್ರೀ ಅನ್ನು ಪೂಜಾರಿ, ಶ್ರೀ ರಾಜೇಶ್ ಕೋಟಿಯನ್, ಶ್ರೀ ಅಶೋಕ್ ಅಮೀನ್ , ವಿಠ್ಠಲ್ ಅಮೀನ್, ತಿಲಕ್ ಸನಿಲ್, ಪ್ರಭಾಕರ್ ಪೂಜಾರಿ ಹಾಗೂ ಸಮಿತಿ ಸದಸ್ಯರು, ಮತ್ತು ಸಕ್ರಿಯ ಕಾರ್ಯಕರ್ತರು, ಯುವ ಸದಸ್ಯರು ಹಾಗೂ ಮಹಿಳಾ ವಿಭಾಗದವರು ಶ್ರಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಗುರು ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಪ್ರೊತ್ಸಾಹ ನೀಡಿ ಸಹಕರಿಸಿದರು.

Related posts

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಕರುನಾಡ ಸಿರಿ ವಾರ್ಷಿಕ ಕ್ರೀಡಾಕೂಟ ಯಶಸ್ವಿ ಸಂಪನ್ನ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಾರ್ಷಿಕ ವಿಹಾರ ಕೂಟ

Mumbai News Desk

ಕುಂದರ್ ಮೂಲಸ್ಥಾನ ಸಭಾ ಮುಂಬಯಿ : ವಾರ್ಷಿಕ ವಿಹಾರ ಕೂಟ ಮತ್ತು ಪ್ರತಿಭಾ ಪುರಸ್ಕಾರ

Mumbai News Desk