
ಮುಂಬಯಿ ಜು25. ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ಮಹಿಳಾ ವಿಭಾಗದ ವತಿಯಿಂದ ಆಟಿ ತಿಂಗಳ “ಆಷಾಡ ಹಬ್ಬ”ವು ಉತ್ಕರ್ಷ ವಿದ್ಯಾಮಂದಿರ, ಪುಷ್ಪ ಪಾರ್ಕ್ ಮಲಾಡ್ ಪೂರ್ವ, ಇಲ್ಲಿ ಜು. 28ರಂದು ಸಂಜೆ 4ರಿಂದ ನಡೆಯಲಿದೆ.
ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರ ಅಧ್ಯಕ್ಷತೆಯಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನ ಡಿ ಕುಲಾಲ್, ಇವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಸಂಗೀತ ,ನೃತ್ಯ, ಕಾರ್ಯಕ್ರಮಗಳು ಹಾಗೂ ಆಟಿಯ ಬಗ್ಗೆ ಮಾಹಿತಿ ಮತ್ತು ಆಟಿ ಕಳಿಂಜ ಪ್ರದರ್ಶನ ನಡೆಯಲಿದೆ.
ಮಹಿಳಾ ಸದಸ್ಯರು ಮನೆಯಲ್ಲಿ ತಯಾರಿಸಿದ ಅಡುಗೆಗಳ ಊಟ, ಯುವ ವಿಭಾಗದ ಸದಸ್ಯರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ,
ಈ ಸಮಾರಂಭಕ್ಕೆ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿ ಪರವಾಗಿ ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ ಮೆಂಡನ್, ಸಂಚಾಲಕರಾದ ದಿನೇಶ್ ಕುಲಾಲ್, ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ ಮತ್ತು ಸಂತೋಷ್ ಪೂಜಾರಿ, ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ, ಜೊತೆ ಕಾರ್ಯದರ್ಶಿ, ಸನತ್ ಪೂಜಾರಿ, ಮಹಿಳಾ ವಿಭಾಗದ ಪರವಾಗಿ ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಕೋಶಾಧಿಕಾರಿ ಶೀಲಾ ಎಂ ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಲಲಿತ ಎಸ್ ಗೌಡ, ಗೀತಾ ಜೆ ಮೆಂಡನ್, ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್, ಜೊತೆ ಕೋಶಾಧಿಕಾರಿಗಳಾದ ನಳಿನಿ ಪಿ ಕರ್ಕೆರ, ಜಯಲಕ್ಷ್ಮಿ ಪಿ ನಾಯಕ್, ಸಲಹೆಗಾರರಾದ ಮೋಹಿನಿ ಜೆ ಶೆಟ್ಟಿ ಮತ್ತು ಭಾರತಿ ಎಸ್ ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ. ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ, ಕೋಶಾಧಿಕಾರಿ ದಿಶಾ ಕರ್ಕೇರ, ಸಂಚಾಲಕರಾದ ಡಾ. ಶಶಿನ್ ಆಚಾರ್ಯ, ಉಪಕಾರ್ಯಾಧ್ಯಕ್ಷರುಗಳಾದ ನವೀನ್ ಸಾಲಿಯಾನ್, ದಿವ್ಯ ಅಮೀನ್, ಯೋಗೇಶ್ವರ್ ಗೌಡ, ಸಲಹೆಗಾರರಾದ ರಷ್ಮಿ ಪೂಜಾರಿ, ಪ್ರಣಿತ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಪವನ್ ರಾವ್, ಜೊತೆ ಕೋಶಾಧಿಕಾರಿ ಶಿವಾನಿ ಪ್ರಭು, ಸೋಶಿಯಲ್ ಮೀಡಿಯಾ ಇನ್ ಚಾರ್ಜ್ ಹರೀಶ್ ಕುಂದರ್ ಮತ್ತು ನಿಧಿ ನಾಯಕ್ ವಿನಂತಿಸಿದ್ದಾರೆ.