
ಅಸಕ್ತರಿಗೆ ಸಹಾಯ ಮಾಡೋದೇ ದೇವರ ಪೂಜೆ :ಚಂದ್ರ ದೇವಾಡಿಗ ನಾಗೂರು
ಮುಂಬಯಿ ಜು 26. ಸಯನ್ -ಕೊಲಿವಾಡ ಪರಿಸರದ ಧಾರ್ಮಿಕ, ಸಾಮಾಜಿಕ ಸಂಸ್ಥೆ ಮಕರ ಜ್ಯೋತಿ ಫೌಂಡೇಶನ್ ಆಶ್ರಯದಲ್ಲಿ ನೋಟ್ ಬುಕ್ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಜೂನ್ 30ರಂದು ಅಂಟಾಪ್ ಹಿಲ್ ನ ಎನ್ ಎಸ್ ಕೋಚಿಂಗ್ ಕ್ಲಾಸ್ ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರ ದೇವಾಡಿಗ ನಾಗೂರು ಅಧ್ಯಕ್ಷತೆಯಲ್ಲಿ ನಡೆಯಿತು.

ನೋಟ್ ಬುಕ್ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಕನ್ನಡ ಸಂಘ ಸಯನ್ ನ ಉಪಾಧ್ಯಕ್ಷ ಸದಾಶಿವ ಶೆಟ್ಟಿ, ಫೌಂಡೇಶನ್ ಗೌರವಾಧ್ಯಕ್ಷರಾದ ಮಾಧವ ಮೇಸ್ತ ಶಿರೂರು, ಉದ್ಯಮಿ, ಸಮಾಜ ಸೇವಕ ಈಶ್ವರ ದೇವಾಡಿಗ, ಸಾಹಿತಿ ಮತ್ತು ರಂಗ ಕಲಾವಿದ ಗೋಪಾಲ್ ತ್ರಾಸಿ ದೀಪ ಬೆಳಗಿ ಚಾಲನೆ ನೀಡಿದರು.
ಈ ಸಂಧರ್ಭ ಕರುನಾಡ ಸಿರಿ ಸಂಸ್ಥೆಯ ಅಧ್ಯಕ್ಷರಾದ ಬಾಲಚಂದ್ರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಹಾಗೂ ಈ ಬಾರಿಯ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯ ಗಣ್ಯರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.

ಸದಾಶಿವ ಶೆಟ್ಟಿ, ಗೋಪಾಲ ತ್ರಾಸಿ ಸಂಸ್ಥೆಯ ಕಾರ್ಯವನ್ನು ಮೆಚ್ಚಿ, ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಚಂದ್ರ ದೇವಾಡಿಗ ಅಧ್ಯಕ್ಷೀಯ ಮಾತುಗಳ ನಾಡುತ್ತ ಈ ಪರಿಸರದಲ್ಲಿ ಸುದೀರ್ಘಕಾಲದಿಂದ ಧಾರ್ಮಿಕ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಇಲ್ಲಿಯ ತುಳು ಕನ್ನಡಿಗರನ್ನು ಅಲ್ಲದೆ ಅನ್ಯಭಾಷೆಗಳನ್ನು ಕೂಡ ಧರ್ಮದ ನಡೆಯಲ್ಲಿ ನಡೆಯಲು ಬೇರೆಸುತ್ತಿದ್ದೇವೆ .ಪ್ರತಿ ವರ್ಷ ಅಯ್ಯಪ್ಪ ಪೂಜೆ ಮತ್ತು ಅನ್ನದಾನವನ್ನು ನಡೆಸುತ್ತಾ ಬಂದಿರುವೆವು. ನಮ್ಮೆಲ್ಲ ಕಾರ್ಯಗಳಿಗೆ ದಾನಿಗಳು ಬಹಳಷ್ಟು ಸಹಕಾರವನ್ನು ನೀಡುತ್ತಿದ್ದಾರೆ ಅಸಕ್ತರ ಸೇವೆ ಮಾಡುವುದೇ ದೇವರ ಪೂಜೆ ಸರಿಸಮಾನ ಎಂದು ನುಡಿದರು.
ಮಾಲಾ ಮಾಧವ ಮೇಸ್ತ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು. ಹೇಮಾ ಶೇಖರ ಗೌಡ ಪ್ರಾಥನೆ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ತನ್ವಿ ಸುರೇಶ ದೇವಾಡಿಗ,ತನುಶ್ರಿ ಶೀನ ದೇವಾಡಿಗ, ಅನನ್ಯ ರಾಜು ಪೂಜಾರಿ ನ್ರತ್ಯ ಮಾಡಿದರು.
ನಂತರ ಸುನೀಲ್ ದೇವಾಡಿಗ ಇವರಿಂದ ಭಾವಗೀತೆ ಮತ್ತು ಬಾಬು ದೇವಾಡಿಗ ಮಲ್ಲೂರಕೇರಿ ಇವರಿಂದ ಸುಂದರವಾದ ಜಾನಪದ ಗೀತೆ ಹೇಳಿ ಪ್ರೇಕ್ಷಕರ ಮನರಂಜಿಸಿದರು
ಸಂಘದ ಗೌರವ ಅಧ್ಯಕ್ಷ ಮಾಧವ ಮೇಸ್ತ, ಅಧ್ಯಕ್ಷ ಚಂದ್ರದೇವಾಡಿಗ ನಾಗೂರು, ಉಪಾದ್ಯಕ್ಷ ಸತೀಶ ದೇವಾಡಿಗ, ಕಾರ್ಯಾದರ್ಶಿ ಕೃಷ್ಣಯಾರ್ತಿ ಮೇಸ್ತ, ಜತೆ ಕಾರ್ಯದರ್ಶಿ ಸಂತೋಷ ದೇವಾಡಿಗ, ಖಜಾಂಚಿ ಬಾಬು ದೇವಾಡಿಗ,ಸದಸ್ಯರಾದ
ನಾಗೇಶ ದೇವಾಡಿಗ, ಸುಬ್ರಮಣ್ಯ ಪೂಜಾರಿ, ಸುರೇಶ ದೇವಾಡಿಗ, ಅರುಣ್ ದೇವಾಡಿಗ, ಚಂದ್ರ ದೇವಾಡಿಗ,ನಾಗರಾಜ ಪೂಜಾರಿ, ಪ್ರಭಾಕರ ಶೆಟ್ಟಿ, ಶೇಖರ ದೇವಾಡಿಗ, ನಿತೀಶ್ ದೇವಾಡಿಗ, ರಾಮಚಂದ್ರ ದೇವಾಡಿಗಸದಸ್ಯರು, ಮಹಿಳಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.