April 2, 2025
ಸುದ್ದಿ

ಪಾಲ್ಘರ್ ರಘು ಶೆಟ್ಟಿ ನಿಧನ.

 ಪಾಲ್ಘರ್ ( ತಾ. 26.07.2024)

ಪಾಲ್ಘರ್ ನ ಹಿರಿಯ ಹೋಟೆಲ್ ಉದ್ಯಮಿ ಹಾಗೂ ಶಹರ ಮಧ್ಯೆ ಇರುವ ನಿತ್ಯಾನಂದ ಹೋಟೆಲ್ ಮಾಲಕರಾದ‌ ರಘು ಕೆ. ಶೆಟ್ಟಿ ( 76 ವ) ಇವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ  ಬೆಳಿಗ್ಗೆ ನಿ‍‍ಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಅವರು  ಉದ್ಯಮಿಯಾಗಿ , ಧಾರ್ಮಿಕ  ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಾನುರಾಗಿ ಯಾಗಿದ್ದರು. ನಿತ್ಯಾನಂದ ಸ್ವಾಮಿಯವರ ಪರಮ ಭಕ್ತರಾಗಿದ್ದ ಇವರು ಬೊಯಿಸರ್ ನಿತ್ಯಾನಂದ ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

    ಪತ್ನಿ , ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ ರಘು ಶೆಟ್ಟಿಯವರ ನಿಧನಕ್ಕೆ ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥ ಮಂಡಳಿ ಹಾಗೂ ಭಕ್ತವೃಂದದ ಸದಸ್ಯರು ಗಾಢ ಶೋಕವನ್ನು ವ್ಯಕ್ತ ಪಡಿಸುತ್ತಾ ಶೃದ್ಧಾಂಜಲಿಯನ್ನು ಅರ್ಪಿಸಿರುತ್ತಾರೆ.

    ಸ್ಥಳೀಯ ಚಿತಾಗಾರದಲ್ಲಿ ಅಪರಾಹ್ನ ಅಂತ್ಯಕ್ರಿಯೆಯು ಜರಗಿದ್ದು ಬಂಧು ಮಿತ್ರರು , ಉದ್ಯಮಿಗಳು , ಅಸಂಖ್ಯ ತುಳುಕನ್ನಡಿಗರು ಭಾಗವಹಿಸಿದ್ದರು.

News sent by :

P.R.Ravishanker 8483980035

Related posts

ಬೊಯಿಸರ್ ಸೋಮೇಶ್ವರ ಮಂದಿರದ 15 ನೆಯ ವರ್ಧಂತ್ಯುತ್ಸವ ಸಂಪನ್ನ.

Mumbai News Desk

ಗೊರೆಗಾಂವ್ ಶ್ರೀ ಶಾಂತಾದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಧಾರ್ಮಿಕ ಸಭೆ

Mumbai News Desk

ಪೊವಾಯಿ: ರಾಘು ವಿ ಶೆಟ್ಟಿ ನಿಧನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ  ಪ್ರದೀಪ್ ಎಸ್. ಶೆಟ್ಟಿ  ದುಬೈ ಇವರು ಸೇರ್ಪಡೆ

Mumbai News Desk

ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷರಾಗಿ ಮಾಲಾ ನಾರಾಯಣ ರಾವ್ ನಿಯುಕ್ತಿ

Mumbai News Desk

ಥಾಣೆ  :ಜಯರಾಮ ಸಾಂತ ನಿಧನ

Mumbai News Desk