April 1, 2025
ಮುಂಬಯಿ

ಶ್ರೀ ರಜಕ ಸಂಘ ಮುಂಬಯಿಯ 85ನೇ ವಾರ್ಷಿಕ ಮಹಾಸಭೆ

ನಾಯಕರನ್ನು ಹಿಂಬಾಲಿಸದೇ, ನಾಯಕರನ್ನು ಸೃಷ್ಟಿಸಿದಾಗ ಸಂಘದ ಅಭಿವೃದ್ಧಿ ಸಾಧ್ಯ – ಸಿ ಎ ವಿಜಯ ಕುಂದರ್

ವರದಿ : ವಾಣಿಪ್ರಸಾದ್

ನಮ್ಮದು ಸಣ್ಣ ಸಂಘವಾದರೂ,ಎಲ್ಲಾ ಕಾರ್ಯಗಳು ವ್ಯವಸ್ಥಿತವಾಗಿ, ವೃತಿಪರವಾಗಿ ನಡೆಯುತ್ತಿದೆ. ನಮ್ಮ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ತಮ್ಮ ತಮ್ಮ ಕೆಲಸಗಳನ್ನು ಬದಿಗಿಟ್ಟು, ಉತ್ಸಾಹದಿಂದ ಸಂಘದ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಕಮಿಟಿ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂಬ ತೃಪ್ತಿ ನಮಗಿದೆ. ಸಂಘಟನೆಗಳಲ್ಲಿ ನಾಯಕರನ್ನು ಹಿಂಬಾಲಿಸದೇ, ನಾಯಕರನ್ನು ಸೃಷ್ಟಿಸ ಬೇಕಿದೆ, ಇದ್ದವರೆ 10 ವರ್ಷ, 20 ವರ್ಷ ಮುಂದುವರಿಯದೆ, ಎಲ್ಲರಿಗೂ ಅವಕಾಶ ನೀಡಬೇಕು, ಆಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಶ್ರೀ ರಜಕ ಸಂಘದ ಅಧ್ಯಕ್ಷ ಸಿ ಎ ವಿಜಯ್ ಕುಂದರ್ ನುಡಿದರು.
ಅವರು ಜು. 21 ರಂದು ಸಯನ್ ಪಶ್ಚಿಮ ಶ್ರೀ ನಿತ್ಯಾನಂದ ಸ್ವಾಮಿ ಸಭಾಗ್ರಹದಲ್ಲಿ ನಡೆದ ಸಂಘದ 85ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಸಂಘದ ಮಹತ್ತರ ಯೋಜನೆಯಾದ ಮಿಷನ್ ವನ್
ಕ್ರೋರ್ ಗೆ ಇಷ್ಟರತನಕ ಅರುವತ್ತು ಲಕ್ಷ ರೂಪಾಯಿ ಸಂಗ್ರಹಣೆಯಾಗಿದ್ದು, ಎಲ್ಲರ ಸಹಕಾರದಿಂದ ಇದು ಅತೀ ಶೀಘ್ರದಲ್ಲಿ ಒಂದು ಕೋಟಿ ಆಗಬಹುದು ಎಂಬ ವಿಶ್ವಾಸ ನನಗಿದೆ. ಸಂಘಕ್ಕೆ ಎಲ್ಲರ ಯೋಗದಾನದ ಅಗತ್ಯವಿದೆ, ಅದನ್ನು ನೀವು ಸಮಿತಿಯಲ್ಲಿ ಕೆಲಸ ಮಾಡುವ ಮೂಲಕ, ನಿಧಿ ಸಂಗ್ರಹಣೆ ಅಥವಾ ಯಾವ ರೀತಿಯಿಂದಲೂ ದೇಣಿಗೆ ನೀಡಿ ಮಾಡಬಹುದು. ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲರೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು, ಆಗ ಸಂಘ ಮತ್ತಷ್ಟು ಬಲಿಷ್ಠಗೊಳ್ಳಬಹದು ಎಂದು ವಿಜಯ್ ಕುಂದರ್ ಸಮಾಜ ಬಾಂಧವರಿಗೆ ಕರೆ ನೀಡಿದರು.

ಪ್ರಾರಂಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಸುಮಿತ್ರ ಪಲಿಮಾರ್ ಪದಾಧಿಕಾರಿಗಳನ್ನು, ಸದಸ್ಯರನ್ನು ಸ್ವಾಗತಿಸಿದರು.
ಕುಲದೇವರಾದ ಶ್ರೀ ವೀರಭದ್ರ ಸ್ವಾಮಿ ಹಾಗೂ ಕುಲಗುರು ಮಾಚಿದೇವರಿಗೆ ಪೂಜೆ ಸಲ್ಲಿಸಿ, ಶ್ರೀ ರಜಕ ಗುರು ಮಾಚಿದೇವ ಭಜನಾ ಮಂಡಳಿಯ ಮಹಿಳೆಯರ ಪ್ರಾರ್ಥನೆಯೊಂದಿಗೆ, ಸಂಘದ ಅಧ್ಯಕ್ಷ ವಿಜಯ್ ಕುಂದರ್ ರವರು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು.
ಸಂಘದ ಮಾಜಿ ಅಧ್ಯಕ್ಷರನ್ನು, ಹಿರಿಯ ಸದಸ್ಯರನ್ನು, ಮಾಜಿ ಪದಾಧಿಕಾರಿಗಳನ್ನು ವಿಜಯ ಕುಂದರ್ ಹಾಗೂ ಹರೀಶ್ ಸಾಲ್ಯಾನ್ ರವರು ಗೌರವಿಸಿದರು.


ಬಳಿಕ ಸುಮಿತ್ರ ಪಲಿಮಾರ್ 84ನೇ ವಾರ್ಷಿಕ ವರದಿ ವಾಚಿಸಿದರು.
ವಾರ್ಷಿಕ ವರದಿ ಹಾಗೂ 2023-24ರ ವಾರ್ಷಿಕ ಲೆಕ್ಕ ಪತ್ರ ಮಂಜೂರು ಮಾಡಲಾಯಿತು.
ಕಾರ್ಯಸೂಚಿ 5ರ ಪ್ರಕಾರ ಉತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾದ ಸಮಾಜ ಬಾಂಧವರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


ತದ ನಂತರ 2024-2026ರ ವರ್ಷಕ್ಕೆ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿ ಎ ವಿಜಯ ಕುಂದರ್, ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್, ಗೌರವ ಕಾರ್ಯದರ್ಶಿ ಆಗಿ ಸುಮಿತ್ರ ಪಲಿಮಾರ್, ಕೋಶಧಿಕಾರಿ ಜಯ ಪಡುಬಿದ್ರೆ ಹಾಗೂ ಸುಮಿತ ಸಾಲ್ಯಾನ್ ಮರು ಆಯ್ಕೆಯಾದರು.
ಕಾರ್ಯಸೂಚಿ 7ರಂತೆ 2024-2026ರ ವರ್ಷಕ್ಕೆ ವಲಯಗಳ, ಮಹಿಳಾ ಹಾಗೂ ಯುವ ವಿಭಾಗದ ಅಧ್ಯಕ್ಷರ ಆಯ್ಕೆ ಮಾಡಲಾಯಿತು.
ಸ್ವರ್ಣ ದಂಪತಿಯರಾದ ಶ್ರೀಮತಿ ಶೀಲಾ – ಶ್ರೀ ಎನ್ ಯು ಕುಂದರ್ ದಂಪತಿ ಮತ್ತು ಶ್ರೀಮತಿ ಸುಮಿತ್ರ- ಶ್ರೀ ಭುಜಂಗ ಗುಜರನ್ ದಂಪತಿಗಳಿಗೆ ಸನ್ಮಾನ ಮಾಡಲಾಯಿತು.


ಹಾಗೂ ನವ ದಂಪತಿಗಳಾದ ಶ್ರೀಮತಿ ರೋಷನಿ-ಶ್ರೀ ಸಂದೇಶ್ ಕುಂದರ್ ಇವರನ್ನೂ ಅಭಿನಂದಿಸಲಾಯಿತು.
ಆ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಡಾ ನಂದಿತಾ ಮನೋಹರ್ ಬಂಗೇರ, , ಕಲಾ ರಂಗದಲ್ಲಿ ಸಾಧನೆ ಮಾಡಿದ ನಿಧಿಶಾ ಹರೀಶ್ ಸಾಲ್ಯಾನ್, ರಾಜ್ಯ -ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ರೀಡೆಯಲ್ಲಿ ಪದಕಗಳಿಸಿರುವ ಶುಭ ದಯಾನಂದ ಗುಜರನ್ ಮತ್ತು ಕ್ರೀಡಾ ಪಟು ಸುಮಿತ ದಯಾನಂದ ಸಾಲ್ಯಾನ್ ಇವರನ್ನು ಸನ್ಮಾನ ಮಾಡಲಾಯಿತು.
ಇದೇ ವೇಳೆ ಹೆಸರಾಂತ ಯಕ್ಷಗಾನ ಕಲಾವಿದ, ಕಟೀಲು ಮೇಳದಲ್ಲಿ ಕಳೆದ 25ವರ್ಷಗಳಿಂದ ಸೇವೆ ಮಾಡುತ್ತಿರುವ ಉಮೇಶ್ ಕುಪ್ಪೆಪದವು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.


ಇದೇ ಸಂದರ್ಭದಲ್ಲಿ ಮಿಷನ್ ಒನ್ ಕ್ರೋರ್ ಗೆ ವಿಶೇಷ ಸಹಕಾರ ನೀಡಿದ ರಮೇಶ್ ನಾಗಪ್ಪ ಪಲಿಮಾರ್, ಸುಂದರ ಎಚ್ ಮಡಿವಾಳ ರನ್ನು ಗೌರವಿಸಲಾಯಿತು ಹಾಗೂ ಮಿಷನ್ ಒನ್ ಕ್ರೋರ್ ಗೆ ಹೊರಗಿಂದ ದೇಣಿಗೆ ಸಂಗ್ರಹಣೆ ಮಾಡಿದ ಪಿ. ಎಂ. ಸಾಲ್ಯಾನ್, ಚಂದ್ರಹಾಸ ಸಾಲ್ಯಾನ್, ಮತ್ತು ಶುಭ ಗುಜರನ್ ರನ್ನು ಅಭಿನಂದಿಸಲಾಯಿತು.


ಸಂಘದ ಮೆನೇಜರ್ ಆಗಿ 10 ವರ್ಷಗಳಿಂದ ನಿಷ್ಠೆಯಿಂದ ಸೇವೆಗೈಯುತ್ತಿರುವ ಸಂತೋಷ ಸಾಲ್ಯಾನ್ ರನ್ನು ಸನ್ಮಾನಿಸಲಾಯಿತು.
ತನ್ನ ಜನ್ಮದಿನಕ್ಕೆ ಕೊಡುಗೆಯಾಗಿ ಬಂದ ಹಣವನ್ನು ಸಂಘಕ್ಕೆ ದೇಣಿಗೆ ನೀಡಿದ ಬಾಲಕ ತ್ರಿಷಾನ್ ಪ್ರಸಾದ್ ಮತ್ತು ವಿಶೇಷ ಬಾಲ ಪ್ರತಿಭೆ ವ್ಯೋಮ್ ಕುಂದರ್ ರನ್ನು ಅಭಿನಂದಿಸಲಾಯಿತು.


ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ ಯುವರಜಕದ, ತಂಡವನ್ನು ಹಾಗೂ ಮುಂಬೈಯಲ್ಲಿ ಜರಗಿದ ಕಾರಂತ ನಾಟಕೋತ್ಸವದಲ್ಲಿ ಭಾಗವಹಿಸಿದ ಸಂಘದ ಸದಸ್ಯರನ್ನು, ಊರಿನಲ್ಲಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ರಜಕ ಗುರು ಮಾಚಿದೇವ ಭಜನಾ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.
ಸದಸ್ಯರ ಪರವಾಗಿ ಬಿ ಡಿ. ಸಾಲ್ಯಾನ್ ಮಾತನಾಡಿ ಸಲಹೆ -ಸೂಚನೆ ನೀಡುತ್ತಾ “ಕಳೆದ ವರ್ಷದ ಮಹಾಸಭೆಯಲ್ಲಿ ನಾ ನು 60 ನೂತನ ಸದಸ್ಯರನ್ನು ನೋಂದಣಿ ಮಾಡುವ ಭರವಸೆ ನೀಡಿದ್ದೆ, ಆದರೆ ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಆದರೆ ಮುಂದಿನ ಮಹಾಸಭೆಯೊಳಗೆ ಈ ಕಾರ್ಯವನ್ನು ಖಂಡಿತ ಮಾಡುತ್ತೇವೆ. ನಮ್ಮ ಸಂಘಕ್ಕೆ ಆದಷ್ಟು ಯುವಕರನ್ನು ಸೇರ್ಪಡೆಗೊಳಿಸಲು ಪ್ರಯತ್ನ ಮಾಡುತ್ತಿದ್ದು, ಇಷ್ಟ್ರರ ತನಕ 45 ಯುವಕರು ನಮ್ಮೊಂದಿಗೆ ಸೇರಿ ಕೊಂಡಿದ್ದಾರೆ, ಇದು ಬಹಳ ಸಂತಸ. ಇದೇ ರೀತಿ ಇತರ ವಲಯಗಳು ಯುವಕರನ್ನು ಸಂಘಕ್ಕೆ ಸೇರಿಸುವ ಕಾರ್ಯ ಮಾಡಬೇಕಿದೆ ಎಂದರು.
ಜತೆ ಕಾರ್ಯದರ್ಶಿ ಕಿರಣ್ ಕುಂದರ್ ಕೊನೆಗೆ ಧನ್ಯವಾದ ಸಮರ್ಪಣೆ ಮಾಡಿದರು.
ವೇದಿಕೆಯಲ್ಲಿ ಅಧ್ಯಕ್ಷ
ಸಿ ಎ ವಿಜಯ್ ಕುಂದರ್, ಉಪಾಧ್ಯಕ್ಷ
ಹರೀಶ್ ವಿ ಸಾಲ್ಯಾನ್, ಕಾರ್ಯದರ್ಶಿ
ಸುಮಿತ್ರ ಆರ್ ಪಲಿಮಾರ್, ಜೊತೆ ಕಾರ್ಯದರ್ಶಿ
ಕಿರಣ್ ಕುಂದರ್, ಕೋಶಾಧಿಕಾರಿ
ಜಯ ಕುಂದರ್ ಪಡುಬಿದ್ರಿ, ಜೊತೆ ಕೋಶಾಧಿಕಾರಿ
ಸುಮಿತ ಡಿ ಸಾಲ್ಯಾನ್,
ಸಮಿತಿ ಸದಸ್ಯರಾದ ಭಾಸ್ಕರ್ ಕುಂದರ್, ಸುಂದರ್ ಎಚ್ ಎಮ್, ಉಮೇಶ್ ಸಾಲ್ಯಾನ್, ಸುರೇಶ್ ಸಾಲ್ಯಾನ್, ಸುರೇಶ್ ಮಡಿವಾಳ್, ಸುಭಾಷ್ ಸಾಲ್ಯಾನ್, ರೋನಕ್ ಕುಂದರ್, ಪ್ರವೀಣ ಕುಂದರ್, ಸುಮಂತ ಸಾಲ್ಯಾನ್, ಪ್ರಕಾಶ್ ಗುಜರನ್, ಮಹಿಳಾ ವಿಭಾಗದ ಅಧ್ಯಕ್ಷೆ ವನಿತಾ ಕುಂದರ್, ಯುವರಜಕದ ಅಧ್ಯಕ್ಷ ನಿತೇಶ್ ಸಾಲ್ಯಾನ್, ಪ್ರಾದೇಶಿಕ ವಲಯ ಡೊಂಬಿವಿಲಿಯ ಅಧ್ಯಕ್ಷ ಬಿ ಡಿ ಸಾಲ್ಯಾನ್, ನವಿ ಮುಂಬಯಿಯ ಅಧ್ಯಕ್ಷ ಹರೀಶ್ ಯು ಸಾಲ್ಯಾನ್, ವೆಸ್ಟರ್ನ್ ಅಧ್ಯಕ್ಷ ದಯಾನಂದ್ ಸಾಲ್ಯಾನ್, ವಸಾಯಿಯ ಅಧ್ಯಕ್ಷ ಮೈಲ ಬಂಗೇರ ಉಪಸ್ಥಿತರಿದ್ದರು.

ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.

ಶ್ರೀ ರಜಕ ಸಂಘವು ಕಳೆದ 85 ವರ್ಷಗಳಿಂದ ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಸಮಾಜ ಬಾಂಧವರ ಐಕ್ಯತೆ ಮತ್ತು ಏಳಿಗೆಗಾಗಿ ಶ್ರಮಿಸುತ್ತಿದೆ. ಸಂಘದ ಯೋಜನೆ -ಯೋಚನೆಗಳು ಸಮಾಜದ ಪ್ರತಿಯೊಬ್ಬರಿಗೂ ತಲುಪಲು ಡೊಂಬಿವಲಿ, ನವಿ ಮುಂಬೈ, ವಸಯಿ, ಸೆಂಟ್ರಲ್ ಹಾಗೂ ವೆಸ್ಟರ್ನ್ ವಲಯಗಳನ್ನು ರಚಿಸಿದೆ. ಸಂಘದ ಮಹಿಳಾ ವಿಭಾಗ, ಯುವ ವಿಭಾಗವೂ ಸಕ್ರಿಯವಾಗಿದೆ. ಯುವ, ಉತ್ಸಾಹಿ ನಾಯಕ, ವಿಜಯ್ ಕುಂದರ್ ಅವರು 2ನೇ ಬಾರಿ ಸಂಘದ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಸಂಘದ ಮಿಷನ್ ವನ್ ಕ್ರೋರ್ ಯೋಜನೆ ಪೂರ್ಣಗೊಳ್ಳಲಿ, ಸಂಘ ಮತ್ತಷ್ಟು ಬಲಿಷ್ಠಗೊಳ್ಳಲಿ ಎಂದು ಆಶಿಸುತ್ತಿದ್ದಾರೆ.

ಸನ್ಮಾನಿತರ ನುಡಿ

ನಂದಿತಾ ಮನೋಹರ್ ಬಂಗೇರ.

ನನ್ನನ್ನು ಬೆಂಗಳೂರಿನಿಂದ ಕರೆದು ಮಹಾಸಭೆಯ ವೇದಿಕೆಯಲ್ಲಿ ಸನ್ಮಾನ ಮಾಡಿದ್ದಕ್ಕೆ ಶ್ರೀ ರಜಕ ಸಂಘಕ್ಕೆ ತುಂಬಾ ಧನ್ಯವಾದಗಳು.

ಶುಭಾ ದಯಾನಂದ ಗುಜರನ್.
ಸನ್ಮಾನಕ್ಕಾಗಿ ರಜಕ ಸಂಘಕ್ಕೆ ಅಭಾರಿಯಾಗಿರುವೆ. ನಾನು ಬಾಲ್ಯದಲ್ಲೆ ಆಟೋಟದಲ್ಲಿ ಬಹಳ ಆಸಕ್ತಳಾಗಿದ್ದೆ, ಕ್ರೀಡೆಯಲ್ಲಿ ಭಾಗವಹಿಸಿ ಗೆಲ್ಲುವ ಬಗ್ಗೆ ನಾನು ಗುರಿ ಇಟ್ಟುಕೊಂಡಿದ್ದೆ, ಆದರೆ ನನಗೆ ಆಗ ಪ್ರೋತ್ಸಾಹ ಸಿಗಲಿಲ್ಲ. ಅದರೆ ನನ್ನ ವಿವಾಹದ ಬಳಿಕ, ರಜಕ ಸಂಘ ಸೇರಿಕೊಂಡೆ, ನಂತರ ನನ್ನ ಕ್ರೀಡಾ ಚಟುವಟಿಕೆ ಆರಂಭವಾಯಿತು. ಇನ್ನು ಮುಂದೆಯೂ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುವ ಭರವಸೆ ನನಗಿದೆ.

ಸುಮಿತಾ ದಯಾನಂದ್ ಸಾಲ್ಯಾನ್.

ಸಂಘ ನನಗೆ ನೀಡಿದ ಪ್ರೀತಿ, ಗೌರವಕ್ಕೆ ಧನ್ಯವಾದಗಳು

ಉಮೇಶ್ ಕುಪ್ಪೆಪದವು (ಯಕ್ಷಗಾನ ಕಲಾವಿದ )
ನನ್ನ ಪತ್ನಿ, ತಂಗಿಯವರ ಪ್ರೋತ್ಸಾಹದಿಂದ ಕಟೀಲು ಮೇಳದಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದೇನೆ. ಇಷ್ಟರ ತನಕ 24 ಕಡೆ ಸನ್ಮಾನ ಸಿಕ್ಕಿದೆ, ಇಂದು 25ನೇ ಸನ್ಮಾನ ಮುಂಬಯಿಯ ಶ್ರೀ ರಜಕ ಸಂಘದಿಂದ ಸ್ವೀಕರಿಸಿದ್ದೇನೆ, ಅತೀವ ಹೆಮ್ಮೆ ಹಾಗೂ ಸಂತೋಷವಾಗುತ್ತಿದೆ. ನಮ್ಮ ಸಮಾಜದವರು ಯಕ್ಷಗಾನದಲ್ಲಿ ಅತೀ ವಿರಳ, ನಮ್ಮ ಸಮಾಜದ ಮಕ್ಕಳಿಗೆ ಯಕ್ಷಗಾನ ಕಲಿಸುವ ಅಗತ್ಯವಿದೆ, ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬಾ ಸಂತಸವಾಯಿತು.

Related posts

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 15 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ, ಸಮಾರೋಪ ಸಮಾರಂಭ .

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ ಸಮಾರಂಭಕ್ಕೆ ಚಾಲನೆ ,ಕೃತಿ ಲೋಕಾರ್ಪಣೆ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಶ ಕುಶಾಲಪ್ಪ ಮೂಲ್ಯ ಗೆ ಶೇ 93.60 ಅಂಕ.

Mumbai News Desk

ಕನ್ನಡ ಸಂಘ ಸಯನ್ ನ ಆಯೋಜನೆಯಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಧಾರ್ಮಿಕ ಸಭೆ

Mumbai News Desk