23.5 C
Karnataka
April 4, 2025
ಮುಂಬಯಿ

ಬಂಟರ ಸಂಘ ದ ವಸಯಿ ಡಹಣು ಪ್ರಾದೇಶಿಕ ಸಮಿತಿ – ಮಹಿಳಾ ವಿಭಾಗ ಆಟಿಡೊಂಜಿ ದಿನ – ದತ್ತು ಸ್ವೀಕಾರ ಕಾರ್ಯಕ್ರಮ.



 

ವಿದ್ಯೆ ಜ್ಞಾನ ನೀಡಿದರೆ ಒಗ್ಗಟ್ಟು ಸಂಸ್ಕಾರ ನೀಡುತ್ತದೆ: ಪ್ರವೀಣ್ ಭೋಜ ಶೆಟ್ಟಿ

ಚಿತ್ರ ವರದಿ ದಿನೇಶ್ ಕುಲಾಲ್

  ಮುಂಬಯಿ  ಜು 31. ಗ್ರಾಮೀಣ ಪ್ರದೇಶವಾಗಿರುವ ಈ ಪರಿಸರದ ಬಂಟ ಸಮಾಜ ಬಂಧುಗಳ ಒಗ್ಗಟ್ಟು ಮತ್ತು ಪ್ರತಿಭೆಗಳು ಖುಷಿ ಕೊಡುತ್ತದೆ. ಈ ನಗರದಲ್ಲಿ ಸುಮಾರು 4 ಲಕ್ಷಕ್ಕೂ ಮಿಕ್ಕಿ ಬಂಟ ಸಮಾಜ ಬಾಂಧವರಿದ್ದಾರೆ ಅದರಲ್ಲಿ 60,000ಕ್ಕೂ ವಸಯಿ ತಾಲೂಕಿನಲ್ಲಿ ವಾಸ್ತವ ವಿರಬಹುದು. ಬಂಟ ಸಮಾಜ ಬಾಂಧವರು ಬಡತನದಲ್ಲಿ ಇರಬಾರದು ಅವರು ಎನ್ನುವ ಉದ್ದೇಶದಿಂದ ಸಂಘ ವರ್ಷಕ್ಕೆ 10 ಕೋಟ ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ನೀಡುತ್ತಿದೆ. ಅದಕ್ಕೆ ಪೂರಕವಾಗಿ ಸಂಘದ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿಯವರು ಸಂಜೀವಿನಿ ಎಂಬ ಯೋಜನೆಯ ಮೂಲಕ 9 ಪ್ರಾದೇಶಿಕ ಸಮಿತಿಯಲ್ಲಿ ಕಡು ಬಡತನದ  ಕುಟುಂಬಗಳನ್ನು ದತ್ತ ಸ್ವೀಕಾರ .ವಿದ್ಯಾರ್ಥಿವೇತನ .ವೈದ್ಯಕೀಯ ಸೇವೆಗಳನ್ನು ನೀಡುವುದಕ್ಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ ಈ ಯೋಜನೆಯ ಮೂಲಕ ಬಂಟ ಸಮಾಜದ ಬಡತನ ನಿರ್ಮೂಲನವಾಗಬಹುದು. ಸಂಘದ ಪ್ರತಿ ಪ್ರಾದೇಶಿಕ ಸಮಿತಿಗಳು ಒಗ್ಗಟ್ಟಾಗಬೇಕೆ ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಸುತ್ತಿದ್ದಾರೆ. ವಿದ್ಯೆಗೆ ಪ್ರಾಮುಖ್ಯತೆ ನೀಡುವ ನೀಡುವುದಕ್ಕಾಗಿ ಸುಮಾರು 180 ಕೋಟಿ ರೂಪಾಯಿ ವೆಚ್ಚದ ಬೋರಿವಲಿ ಯಲ್ಲಿ ಶಿಕ್ಷಣ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ವಿದ್ಯೆ ಜ್ಞಾನ ನೀಡಿದರೆ ಒಗ್ಗಟ್ಟು ಸಂಸ್ಕಾರ ನೀಡುತ್ತದೆ. ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು.

ಜು 28 ರಂದು  ಹೊಟೇಲ್ ಗ್ಯಾಲಕ್ಸಿ ಸಭಾಂಗಣ ಎಸ್ ಟಿ ಡಿಪೋ ಬಳಿ ನಾಲಾಸೋಪಾರ ಪಶ್ಚಿಮ ಇಲ್ಲಿ ಆಟಿಡೊಂಜಿ ದಿನ ಹಾಗೂ ಡಾ. ಆರ್ ಕೆ ಶೆಟ್ಟಿ ಅವರ ಇಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಇದರ  ಪ್ರಾಯೋಜಿತ ಆರ್ಥಿಕವಾಗಿ ಹಿಂದುಳಿದ ಬಂಟ ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಹಾಗೂ ಸದಸ್ಯರ ವೈದ್ಯಕೀಯ ನೆರವಿನ ದತ್ತು ಸ್ವೀಕಾರ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. 

ಸಮಾಜ ಬಾಂಧವರು ಬಹು ವೆಚ್ಚದಲ್ಲಿ ಮನೆಯಲ್ಲಿ ಸಂಭ್ರಮವನ್ನು ಕಾರ್ಯಕ್ರಮವನ್ನು ಮಾಡುತ್ತೀರಿ ಅದರ ಅರ್ಧ ಅಂಶವಾದರೂ ಬಂಟರ ಸಂಘಕ್ಕೆ ನೀಡಿ. ಸಂಘ ಸಮಾಜದ ಅಭಿವೃದ್ಧಿಗಾಗಿ ಸೇವೆ ಮಾಡುತ್ತಿದೆ. ಇಲ್ಲದಿದ್ದಲ್ಲಿ ನಮ್ಮ ಲೆಕ್ಕಗಳನ್ನು ದೇವರು  ಕೇಳಬಹುದು ಎಂದು ನುಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೊಯಿಸರ್ ಪರಿಸರದ ಹಿರಿಯ ಹೋಟೆಲ್ ಉದ್ಯಮಿ  ರಘರಾಮ್ ರೈಯವರ ಧರ್ಮಪತ್ನಿ  ಉಷಾ ರಘರಾಮ್ ರೈಯವರುಮಾತನಾಡುತ್ತಾ ಮಳೆಗಾಲ ಪ್ರಾರಂಭವಾಗುವ ಮೊದಲು ನಮ್ಮ ಸುತ್ತಮುತ್ತಲು ಮರಗಳನ್ನು ನೆಡುಯವ ಕಾರ್ಯಗಳನ್ನು ಮಾಡಿ. ಮರಗಳು ಕಡಿಮೆಯಾಗಿದೆ, ಆದ್ದರಿಂದ  ಮುಂದಿನ ದಿನಗಳಲ್ಲಿ ನಮಗೆ ತುಂಬಾ ತೊಂದರೆಗಳು ಎದುರಾಗಬಹುದು. ಈ ಪ್ರಾದೇಶಿಕ ಸಮಿತಿ ಸಮಾಜ ಬಾಂಧವರಿಗೆ ಅನುಕೂಲವಾಗುವ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮೀಣ ಪ್ರದೇಶದ ಸಮಾಜ ಬಾಂಧವರಿಗೆ ಸಹಕಾರ ನೀಡುವಂತಾಗಲಿ ಎಂದು ನುಡಿದರು.

ಬಂಟರ ಸಂಘ ಮುಂಬಯಿಯ , ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ ಅವರು ತನ್ನದೇ ಯೋಜನೆಯಾದ ಸಂಜೀವಿನಿಯ ಬಗ್ಗೆ ಮಾಹಿತಿ ನೀಡುತ್ತಾ ಅಂದೇರಿ ಬಾಂಧ್ರಾ ಪ್ರಾದೇಶಿಕ ಸಮಿತಿಯಲ್ಲಿ ಕಾರ್ಯ ಧ್ಯಕ್ಷನಾಗಿದ್ದಾಗ ಆ ಪ್ರದೇಶದಲ್ಲಿ ವಾಸ್ತವಿರುವ ಬಂಟ ಸಮಾಜದ ಕಡುಬಡತನದ ಕುಟುಂಬಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ ಅವರಿಗೆಲ್ಲ ಅದೇ ಸಮಯದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ಪ್ರಾದೇಶಿಕಸಮಿತಿಯ ಮೂಲಕ ನೀಡಿದ್ದೇವೆ. ಆದ್ದರಿಂದ ನನ್ನ ಸಂಜೀವಿನಿ ಎಂಬ ಯೋಜನೆಯ ಮೂಲಕ ಕಡು ಬಡತನದ ಕುಟುಂಬಗಳಿಗೆ ವಿದ್ಯಾರ್ಥಿಗಳಿಗೆ ವೈದ್ಯಕೀಯಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶ ನಮ್ಮದಾಗಿದೆ. ಈ ಪರಿಸರದ ಸುಮಾರು 10 ಮಕ್ಕಳನ್ನು ದತ್ತ ಸ್ವೀಕರಿಸಿದ್ದೇವೆ. ಅಲ್ಲದೆ ಇನ್ನಷ್ಟು ಪ್ರಯೋಜನ ವಾಗುವ ರೀತಿಯಲ್ಲಿ ಯೋಜನೆಯನ್ನು ವಿಸ್ತರಿಸುತ್ತೇವೆ ಎಂದು ನುಡಿದರು.

 ಸಂಘದ  ಜೊತೆ ಕೋಶಾಧಿಕಾರಿ  ಶಶಿಧರ ಕೆ ಶೆಟ್ಟಿ ಇನ್ನಂಜೆ ಮಾತನಾಡುತ್ತಾ ಮುಂಬೈಯ ನಗರದಲ್ಲೂ ಎಷ್ಟು ಬಡತನದ  ಕುಟುಂಬಗಳಿವೆ . ಆದ್ದರಿಂದ ಈ  ಪ್ರದೇಶದಲ್ಲಿರುವ ಸಮಾಜ ಬಾಂಧವರು ಸಿಥಿ ಗತ್ತಿಯಲ್ಲಿ ಉತ್ತಮರಾಗಿದ್ದಾರೆ. ಆರ್ ಕೆ ಶೆಟ್ಟಿಯವರ ಯೋಜನೆ ಈ ಪರಿಸರದ ಸಮಾಜ ಬಾಂಧವರಿಗೆ ಸಹಕಾರಿ ಆಗುವುದಕ್ಕೆ ನಮ್ಮ ಪ್ರಯತ್ನ ನಿರಂತರ ನಡೆಯುತ್ತದೆ. ಈ ಇಂದಿನ ದಿನವನ್ನು ನೆನಪಿಸುವ ಮೂಲಕ ಯುವ ಜನಾಂಗಕ್ಕೆ ಈ ಕಾರ್ಯಕ್ರಮ ಆದರ್ಶವಾಗಿದೆ. ಭಾರಿ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿಕೊಂಡಿರುವುದು ಕಂಡಾಗ ಸಂತೋಷವಾಗುತ್ತದೆ .ಆದರೂ ನಮ್ಮವರಿಗೆ ಇದು ಕಡಿಮೆ ಎಣಿಸುತ್ತದೆ ಏಕೆಂದರೆ ಸಣ್ಣ ಕಾರ್ಯಕ್ರಮಗಳು ಕೂಡ ಸಾವಿರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಾಗುತ್ತಾರೆ. ಮಹಿಳಾ ವಿಭಾಗ ಉತ್ತಮ ಕಾರ್ಯಕ್ರಮವನ್ನು ರೂಪಿಸಿದೆ .ಪಾಲ್ಕಾರ್ ಪರಿಸರದಲ್ಲಿ ರಘುರಾಮ್ ಶೆಟ್ಟಿ ಅವರ ಪ್ರಾದೇಶಿಕ ಸಮಿತಿಯ ಸೇವೆ ಅವಿರತವಾಗಿದೆ. ಎಂದು ನುಡಿದರು.

ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಸಮನ್ವಯಕ ಶ್ರೀ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಾತನಾಡುತ್ತಾ ಇಂಥ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಉತ್ತಮ ವೇದಿಕೆಯಾಗಿದೆ ಅವರ ಕಲಾ ಪ್ರತಿಭೆಗಳು ಬೆಳಕಿಗೆ ಬಂದಂತಾಗಿದೆ. ದತ್ತ ಸ್ವೀಕಾರ ದಂತ ಕಾರ್ಯಕ್ರಮ ನನಗೆ ಬಹಳ ಮನಸ್ಸಿಗೆ ಖುಷಿ ನೀಡುವ ಕಾರ್ಯವಾಗಿದೆ ನಾನು ಕಲಿತ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಮೂಲಕ ಕೂಡ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ. ದುಡ್ಡಿದ್ದವರು ಬಹಳಷ್ಟು ಜನ ಇದ್ದಾರೆ ಆದರೆ ಕೊಡುವ ಗುಣ ಒಂದಿರುವವರು ಕಡಿಮೆ. ಡಾ. ಆರ್ ಕೆ ಶೆಟ್ಟಿ ಅವರ ಈ ಯೋಜನೆ ಬಂಟ ಸಮಾಜದ ಬಂಧುಗಳಿಗೆ ಆಶಾಕಿರಣವಾಗಲಿ . ಆಡಂಬರದ ಆಟಿ ಸಂಭ್ರಮ ಬೇಡ. ಸಂಪ್ರದಾಯದ ಪದ್ಧತಿ ಇರುವಂತೆ  ಮಾಡೋಣ ಎಂದು ನುಡಿದರು.

   ಸಂಘದ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ  ಚಿತ್ರಾ ಆರ್ ಶೆಟ್ಟಿ ಮನಾಡುತ್ತಾ  ಈ ಪ್ರಾದೇಶಿಕ ಸಮಿತಿ ಎಂದರೆ ನನಗೆ ಬಹಳ ಅಭಿಮಾನ .ಅಲ್ಲದೆ ನಾಲಾಸಾಪುರ ಮಣ್ಣಿನ ಋಣ ನನಗಿದೆ ನನ್ನ ಬಂಧುಗಳು ಇಲ್ಲಿ ನೆಲೆಸಿದ್ದಾರೆ. ಬಂಟ ಮಹಿಳೆಯೊಬ್ಬಳು ಅಂಗಳ ಗುಡಿಸಿದರೆ ಕಸ ಇರುವುದಿಲ್ಲ .ಅನ್ನಪಡಿಸಿದರೆ ಹಸಿವಿರುವುದಿಲ್ಲ ಅಂತ ಗುಣವಂತೆ ಆಗಿರುವವಳು. ಇಂದು ಮಹಿಳೆಯರು ಮನೆಯಲ್ಲೇ ಮಾಡಿದ ಅಡುಗೆಗಳನ್ನು ಪ್ರೀತಿ ಮತ್ತು ಜವಾಬ್ದಾರಿಯನ್ನು ತುಂಬಿಕೊಂಡು ತಂದಿದ್ದಾರೆ ಇದರಲ್ಲಿ ಬಹುಮಾನ ವಿದೆ ಎನ್ನುವ ಅಭಿಮಾನವಲ್ಲ ಅವರ ಒಗ್ಗಟ್ಟಿನ ಪ್ರೀತಿ ತುಂಬಿದೆ ಪ್ರತಿಯೊಬ್ಬರು ಮಾಡಿರುವ ತಿಂಡಿ ಕನಸುಗಳು ಬಹುಮಾನಕ್ಕೆ ಯೋಗ್ಯವಾಗಿರುವಂಥದ್ದು. ಮತ್ತು ರುಚಿ ಆಗಿರುವಂತದ್ದು ಆದ್ದರಿಂದ ಇದು ಸ್ಪರ್ಧೆಯಲ್ಲ ನಮ್ಮ ಪ್ರೀತಿಯ ಬಾಂಧವ್ಯತೆ ಎಂದು ನುಡಿದರು. 

ವೇದಿಕೆಯಲ್ಲಿ. ಸಂಘದ  ಜೊತೆ ಕಾರ್ಯದರ್ಶಿ  ಗಿರೀಶ್ ಶೆಟ್ಟಿ ತೆಳ್ಳಾರ್. ವಸಯಿ ಡಹಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ  ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿ ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ  ಉಮಾ ಸತೀಶ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ  ಅರುಣಾ ಎ ಶೆಟ್ಟಿ, ಕಾರ್ಯದರ್ಶಿ ಯ ಸಂಧ್ಯಾ ವಿ ಶೆಟ್ಟಿ, ಕೋಶಾಧಿಕಾರಿ  ಜಯಶ್ರೀ ವಿ ಶೆಟ್ಟಿ, ಜೊತೆ ಕಾರ್ಯದರ್ಶಿ  ಪ್ರಭಾ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ  ಸಂಧ್ಯಾ ಯು ಶೆಟ್ಟಿ, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ  ಜಯ ಎ ಶೆಟ್ಟಿ, ಯುವ ವಿಭಾಗ ಕಾರ್ಯಾಧ್ಯಕ್ಷೆ ಕು. ವರ್ಷಾ ಎಸ್ ಶೆಟ್ಟಿ, ಉಪಸ್ಥಿತರಿದ್ದರು

ಸಭಾ ಕಾರ್ಯಕ್ರಮವನ್ನು  ಮಂಜುಳಾ ಎ ಶೆಟ್ಟಿ ನಿರೂಪಿಸಿದರು. ಸಂಸ್ಕೃತಿಕ ಕಾರ್ಯಕ್ರಮವನ್ನುವರ್ಷಾ  ಶೆಟ್ಟಿ, ನಡೆಸಿದರು.

ಪ್ರಾರ್ಥನೆಯನ್ನು ಸುಮನ ಶೆಟ್ಟಿ .ಸರಿತಾ ಶೆಟ್ಟಿ, ವೀಣಾ ಶೆಟ್ಟಿ ಮಾಡಿದರು.

 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯೆಯರಿಂದ ಹಾಗೂ ಯುವ ವಿಭಾಗದ ಸದಸ್ಯರಿಂದ ನೃತ್ಯ ಕಾರ್ಯಕ್ರಮ, ಮತ್ತು ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆಯರಿಂದ  ದಯಾಮಣಿ ಶೆಟ್ಟಿ ಎಕ್ಕಾರ್ ವಿರಚಿತ,  ಆಶಾ ವಿಜಯ್ ಶೆಟ್ಟಿ ಇವರಿಂದ ತುಳು ಭಾಷೆಗೆ ತರ್ಜುಮೆಗೊಂಡ ತುಳು ಕಿರು ನಾಟಕ ಪಣವುದಾಯೆ ಪ್ರದರ್ಶನ ಗೊಂಡಿತ್ತು . 

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಿಗಾಗಿ ಆಷಾಡ ತಿಂಗಳ ಸಮಯ ತುಳುನಾಡಿನಲ್ಲಿ ತಯಾರಿಸುವ ವಿಶೇಷ ಖಾದ್ಯಗಳ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .

ಕಾರ್ಯಕ್ರಮದ ಯಶಸ್ವಿಗೆ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್.ಸಲಹೆಗಾರ ಸಮಿತಿ ಕಾರ್ಯಾಧ್ಯಕ್ಷ  ಗುರ್ಮೆ ಹರೀಶ್ ಶೆಟ್ಟಿ,ಕಾರ್ಯದರ್ಶಿ ಜಗನ್ನಾಥ್ ಡಿ ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ್ ಎಮ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ್ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ  ವಿಜಯ್ ಪಿ ಶೆಟ್ಟಿ ಕುತ್ತೆತ್ತೂರು, ಉಪ ಸಮಿತಿಕಾರ್ಯಾಧ್ಯಕ್ಷರುಗಳು,  ಕಾರ್ಯಕಾರಿ ಸಮಿತಿ ಸದಸ್ಯರು ಸಹಕರಿಸಿದರು 

———

ಆಟಿ ತಿಂಗಳು ಬದುಕಲು ಕಲಿಸಿದೆ : ಡಾ. ಪ್ರೀಯಾ ಹರೀಶ್

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕಿಯಾಗಿ ಪಾಲ್ಗೊಂಡಿದ್ದ ನಮ್ಮ ಕುಡ್ಲ ವಾಹಿನಿಯ ಟಿವಿ ನಿರೂಪಕಿ ಹಾಗೂ ಪ್ರಾಧ್ಯಾಪಕಿ ಡಾ. ಪ್ರೀಯಾ ಹರೀಶ್ ಅವರು  ತುಳುನಾಡಿನಲ್ಲಿ ಆಷಾಡ ತಿಂಗಳ ವಿಶೇಶತೆ ಬಗ್ಗೆ ತಿಳಿಸಿತ್ತು . ಅಂದಿನ ಕಾಲದ ನೆನಪುಗಳು ಇಂದಿನ ಯುವ ಪೀಳಿಗೆಗೆ  ತಿಳಿಸುವುದರೊಂದಿಗೆ ಆಟಿ ತಿಂಗಳ ಆಟಗಳು, ತಿಂಡಿ ತಿನಸುಗಳು. ಔಷಧಿ ಗುಣವುಳ್ಳ ಸಸ್ಯಹಾರಿ ಪದಾರ್ಥಗಳು ಬದುಕಿನಲ್ಲಿ ಅರಿವು ಮೂಡಿಸುವಂತಾಗಿದೆ. ಅಂದಿನ ಮಳೆಗಾಲದ ಸಂದರ್ಭದಲ್ಲಿ ಕಷ್ಟಗಳು ಹೇಗಿತ್ತು ಎಂದರೆ ವರ್ಷಪೂರ್ತಿ ಮನೇಲಿ ಇರಿಸಿದ ದವಸ ಧಾನ್ಯಗಳು ಹುಡುಕಿ ಹಸಿವನ್ನು ನೀಗಿಸುವ ದಿನವಾಗಿತ್ತು. ಇಂದಿನ ಆಟಿ ತಿಂಗಳ ಸಂಭ್ರಮದಿಂದ ಕೂಡಿದ್ದರು   ನಮ್ಮ ಹಿರಿಯರ ಬದುಕಿನ ಸಂಪ್ರದಾಯ. ಮತ್ತು ಬದುಕಲು ಕಳಿಸಿದೆ  ಎಂದ ಅವರು ತುಳು ಭಾಷೆಯಲ್ಲಿ ನಿಹಗ್ಲವಾಗಿ ಮಾತನಾಡಿ ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿಸಿದರು.

——

ಮಹಿಳಾ ವಿಭಾಗ ಮಹಿಳೆಯರನ್ನು ಬಲಿಷ್ಠ ಗೊಳಿಸಿದೆ:ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿ. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ 

ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿ ಮಾತನಾಡುತ್ತಾ ಒಳ್ಳೆಯ  ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಅವರ ಪ್ರತಿಭೆ ಅನಾವರಣಗೊಳಿಸುವುದಕ್ಕೆ ವೇದಿಕೆಯಾಗಿದೆ. ಈ ಪ್ರಾದೇಶಿಕ ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೆ ಶಶಿಧರ್ ಶೆಟ್ಟಿ ಪರಿವಾರ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತದೆ .ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ  ಪ್ರದೇಶದ ಸಮಾಜ ಬಾಂಧವರನ್ನು ಒಗ್ಗಟ್ಟು ಮಾಡುವ ಕಾರ್ಯ ಮಾಡುತ್ತೇವೆ . ಮಹಿಳಾ ವಿಭಾಗ ಮಹಿಳೆಯರನ್ನು  ಬಲಿಷ್ಠ ಗೊಳಿಸಿದೆ ಎಂದು ನುಡಿದರು.

Related posts

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಆಶ್ರಯದಲ್ಲಿ ಯಕ್ಷಗಾನ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ಸಂಭ್ರಮದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk

ಕುಲಾಲ ಸಂಘ ಮುಂಬೈ  ಕಾರ್ಯಾಲಯದಲ್ಲಿ ಮಕರ  ಸಂಕ್ರಾಂತಿ ಆಚರಣೆ.

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಯಲ್ಲಿ ಆಷಾಢದಲ್ಲಿ ಒಂದು ದಿನದ ಸಂಭ್ರಮ*

Mumbai News Desk