
ಹಿಂದು ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಹಿಂದುಗಳು ಸಾಂಪ್ರದಾಯಿಕವಾಗಿ ಗುರುಪೂರ್ಣಿಮೆಯ ಅಂಗವಾಗಿ ಗುರುಪೂಜೆ ಮತ್ತು ಭಜನಾ ಕಾರ್ಯಕ್ರಮ ಇಟ್ಟು ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಅದಕ್ಕಾಗಿ,ಕುಲಾಲ ಸಂಘ ಮುಂಬಯಿಯ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆ ಆಚರಣೆಯು ಸಂಘದ ಕೇಂದ್ರ ಕಚೇರಿಯಲ್ಲಿ
ಜು 21ರಂದು ಬೆಳಿಗ್ಗೆ ರಿಂದ ಮಧ್ಯಾಹ್ನ ವರೆಗೆ ನಡೆಯಿತು .
ಮಧ್ಯಾಹ್ನ ಶಂಕರ್ ವೈ ಮೂಲ್ಯ ಇವರು ಮಂಗಳಾರತಿ ಮಾಡಿದರು..ಸಂಘದ ಅಧ್ಯಕ್ಷರಾದ ರಘು ಮೂಲ್ಯ,ಮತ್ತು ಗುರುವಂದನಾ ಭಜನಾ ಮಂಡಳಿಯ ಕಾರ್ಯಧ್ಯಕ್ಷ ಸುಂದರ ಏನ್ ಮೂಲ್ಯ ಇವರು ದೇವರಿಗೆ ದೀಪ ಬೆಳಗಿಸಿ ಭಜನೆಗೆ ಚಾಲನೆ ಕೊಟ್ಟರು .
ಗುರುಪೂರ್ಣಿಮೆ ಆಚರಣೆಯು ಕುಲಾಲ ಸಂಘದ ಜ್ಯೋತಿ ಕೋ ಅಫ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಿಬ್ಬಂದಿಗಳು,ಮತ್ತು ಪಿಗ್ಮಿ ಕಲೆಕ್ಷನ್ ಏಜೆಂಟರ ಸಂಯೋಗಲ್ಲಿ ನಡೆಯಿತು.
ಪೂಜೆಯಲ್ಲಿ ಜ್ಯೋತಿ ಕೋ ಅಫ್ ಕ್ರಿಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ ಬಿ ಸಾಲಿಯಾನ್ ದಂಪತಿಯರು, ಕಾರ್ಯದರ್ಶಿ ಪಿ ಶೇಖರ್ ಮೂಲ್ಯ ದಂಪತಿ, ಪ್ರಬಂಧಕ ಶೇಖರ್ ಅಮೀನ್ ಮತ್ತು ಅಶೋಕ್ ಕುಲಾಲ್ ಹಾಗೂ ಜ್ಯೋತಿ ಕೊ ಅಫ್ ಕ್ರೆಡಿಟ್ ನ ಎಲ್ಲ ಸಿಬಂದಿ ವರ್ಗದವರು,ಪಿಗ್ಮಿ ಕಲೆಕ್ಷನ್ ಏಜೆಂಟ್ ರವರು, ಸಂಘದ ಉಪಾಧ್ಯಕ್ಷರಾದ ಡಿ ಐ ಮೂಲ್ಯ ಸಂಘದ ಕಾರ್ಯದರ್ಶಿ ಕರುಣಾಕರ ಸಾಲಿಯಾನ್,ಕೋಶಾಧಿಕಾರಿ ಜಯ ಅಂಚನ್, ಸಂಘದ ಜೊತೆ ಕೋಶಾಧಿಕಾರಿ ಸುನಿಲ್ ಕೆ ಕುಲಾಲ್,ಅಮೂಲ್ಯ ಉಪ ಸಂಪಾದಕರಾದ ಆನಂದ್ ಮೂಲ್ಯ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸಂಜೀವ ಬಂಗೇರ ವೇಣುಗೋಪಾಲ್ ಡಿ ಕರ್ಕೇರ, ಹಾಗೂ ಬಿನಿತ್ ಜಿ ಸಾಲಿಯಾನ್, ನಾನಿಲ್ತಾರ್ ಅಭಿಮಾನಿ ಬಳಗದ ಅಧ್ಯಕ್ಷರು ಹರೀಶ್ ಡಿ ಮೂಲ್ಯ , ಗುರುವಂದನಾ ಭಜನಾ ಮಂಡಳಿಯ ಮೀರಾ ರೋಡ್ ವೀರಾರ್ ನ ಅರ್ಚಕರಾದ ಯಶೋಧರ ಎಂ ಬಂಗೇರ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಮಹಿಳಾ ವಿಭಾಗದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿ ಮಹಾ ಪ್ರಸಾದವನ್ನು ಸ್ವೀಕರಿಸಿದರು.