September 6, 2026
Mumbai News Kannada
ಮುಂಬಯಿ

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.





      ಹಿಂದು ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಹಿಂದುಗಳು ಸಾಂಪ್ರದಾಯಿಕವಾಗಿ ಗುರುಪೂರ್ಣಿಮೆಯ ಅಂಗವಾಗಿ ಗುರುಪೂಜೆ  ಮತ್ತು ಭಜನಾ ಕಾರ್ಯಕ್ರಮ ಇಟ್ಟು ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಅದಕ್ಕಾಗಿ,ಕುಲಾಲ ಸಂಘ ಮುಂಬಯಿಯ ಗುರುವಂದನಾ ಭಜನಾ ಮಂಡಳಿಯ  ಗುರು ಪೂರ್ಣಿಮೆ ಆಚರಣೆಯು ಸಂಘದ ಕೇಂದ್ರ ಕಚೇರಿಯಲ್ಲಿ 

ಜು 21ರಂದು ಬೆಳಿಗ್ಗೆ  ರಿಂದ ಮಧ್ಯಾಹ್ನ ವರೆಗೆ ನಡೆಯಿತು .

  ಮಧ್ಯಾಹ್ನ        ಶಂಕರ್ ವೈ ಮೂಲ್ಯ ಇವರು ಮಂಗಳಾರತಿ ಮಾಡಿದರು..ಸಂಘದ ಅಧ್ಯಕ್ಷರಾದ ರಘು ಮೂಲ್ಯ,ಮತ್ತು ಗುರುವಂದನಾ ಭಜನಾ ಮಂಡಳಿಯ ಕಾರ್ಯಧ್ಯಕ್ಷ ಸುಂದರ ಏನ್ ಮೂಲ್ಯ ಇವರು ದೇವರಿಗೆ  ದೀಪ ಬೆಳಗಿಸಿ  ಭಜನೆಗೆ ಚಾಲನೆ ಕೊಟ್ಟರು .

 ಗುರುಪೂರ್ಣಿಮೆ ಆಚರಣೆಯು ಕುಲಾಲ ಸಂಘದ ಜ್ಯೋತಿ ಕೋ ಅಫ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಿಬ್ಬಂದಿಗಳು,ಮತ್ತು ಪಿಗ್ಮಿ ಕಲೆಕ್ಷನ್ ಏಜೆಂಟರ ಸಂಯೋಗಲ್ಲಿ ನಡೆಯಿತು.

 ಪೂಜೆಯಲ್ಲಿ ಜ್ಯೋತಿ ಕೋ ಅಫ್ ಕ್ರಿಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ ಬಿ  ಸಾಲಿಯಾನ್ ದಂಪತಿಯರು, ಕಾರ್ಯದರ್ಶಿ ಪಿ ಶೇಖರ್ ಮೂಲ್ಯ ದಂಪತಿ, ಪ್ರಬಂಧಕ  ಶೇಖರ್ ಅಮೀನ್ ಮತ್ತು ಅಶೋಕ್ ಕುಲಾಲ್ ಹಾಗೂ ಜ್ಯೋತಿ ಕೊ ಅಫ್ ಕ್ರೆಡಿಟ್ ನ ಎಲ್ಲ ಸಿಬಂದಿ ವರ್ಗದವರು,ಪಿಗ್ಮಿ ಕಲೆಕ್ಷನ್ ಏಜೆಂಟ್ ರವರು, ಸಂಘದ ಉಪಾಧ್ಯಕ್ಷರಾದ ಡಿ ಐ ಮೂಲ್ಯ ಸಂಘದ ಕಾರ್ಯದರ್ಶಿ ಕರುಣಾಕರ ಸಾಲಿಯಾನ್,ಕೋಶಾಧಿಕಾರಿ ಜಯ ಅಂಚನ್,    ಸಂಘದ ಜೊತೆ ಕೋಶಾಧಿಕಾರಿ ಸುನಿಲ್ ಕೆ ಕುಲಾಲ್,ಅಮೂಲ್ಯ ಉಪ ಸಂಪಾದಕರಾದ ಆನಂದ್ ಮೂಲ್ಯ,  ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸಂಜೀವ ಬಂಗೇರ ವೇಣುಗೋಪಾಲ್ ಡಿ ಕರ್ಕೇರ, ಹಾಗೂ ಬಿನಿತ್ ಜಿ ಸಾಲಿಯಾನ್, ನಾನಿಲ್ತಾರ್ ಅಭಿಮಾನಿ‌  ಬಳಗದ ಅಧ್ಯಕ್ಷರು ಹರೀಶ್ ಡಿ ಮೂಲ್ಯ , ಗುರುವಂದನಾ ಭಜನಾ ಮಂಡಳಿಯ  ಮೀರಾ ರೋಡ್ ವೀರಾರ್ ನ ಅರ್ಚಕರಾದ ಯಶೋಧರ ಎಂ ಬಂಗೇರ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಮಹಿಳಾ ವಿಭಾಗದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡು  ತೀರ್ಥ ಪ್ರಸಾದವನ್ನು ಸ್ವೀಕರಿಸಿ ಮಹಾ ಪ್ರಸಾದವನ್ನು ಸ್ವೀಕರಿಸಿದರು.



Related posts

ಎಸ್. ಎಸ್. ಸಿ. ಫಲಿತಾಂಶ: ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ

Mumbai News Desk

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಶೈಕ್ಷಣಿಕ ಕಾರ್ಯಕ್ರಮ: ಜನಹಿತ ಯೋಜನೆಗಳೊಂದಿಗೆ ರಜತ ಮಹೋತ್ಸವ ಆಚರಣೆಗೆ ಸಂಕಲ್ಪ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ

Mumbai News Desk

ಭಾರತ್ ಬ್ಯಾಂಕ್ ವಿರಾರ್ ಪಶ್ಚಿಮ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವತಿಯಿಂದ ಅರಸಿನ ಕುಂಕುಮ,

Mumbai News Desk

ಬೋಂಬೆ ಬಂಟ್ಸ್  ಎಸೋಸಿಯೇಶನ್  ವತಿಯಿಂದ ಮಾಜಿ  ಅಧ್ಯಕ್ಷರಾದ ಜಯ ಎನ್ ಶೆಟ್ಟಿಯವರಿಗೆ ನುಡಿ ನಮನ .

Mumbai News Desk