April 2, 2025
ಮುಂಬಯಿ

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

ಮಾನವೀಯ ಮೌಲ್ಯಗಳನ್ನು ತುಂಬಿಸುವ ಕಾರ್ಯ ಭಜನೆಯಿಂದಾಗುತ್ತದೆ. : ಒಡಿಯೂರು ಶ್ರೀ

ಮುಂಬಯಿ ಅ.2 : ಗುರುದೇವದತ್ತ ಸಂಸ್ಥಾನ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಜುಲೈ 27 ಶನಿವಾರ ಅಂಧೇರಿ ಪಶ್ಚಿಮದ ವೀರ ದೇಸಾಯಿ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ಕಾಲೋನಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗೆ ಭೇಟಿ ನೀಡಿ ಗುರು ಭಕ್ತರನ್ನು ಹರಸಿದರು.
ಪ್ರಾರಂಭದಲ್ಲಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸದಸ್ಯರು ಹಾಗೂ ಬಾಲ ಭಜನಾ ವೃಂದದ ಮಕ್ಕಳು ಭಜನಾ ಕಾರ್ಯಕ್ರಮ ನೀಡಿದರು.
ಸ್ವಾಮೀಜಿಯವರು ಚಿತ್ತೈಸಿದಾಗ ಭಜನಾ ಮಂಡಳಿಯ ಅರ್ಚಕರಾದ ಮನೋಜ್ ಮೆಂಡನ್, ಪುರಂದರ ಸಾಲ್ಯಾನ್ ಹಾಗೂ ಭುವಾಜಿ ದಯಾನಂದ ಬಂಗೇರವರು ಶ್ರೀಗಳನ್ನು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡರು.


ಶ್ರೀ ಮಹಾಲಕ್ಶ್ಮಿ ಮಾತೆಗೆ ಸ್ವಾಮೀಜಿಯವರು ಆರತಿ ಬೆಳಗಿದರು. ಶ್ರೀ ಶರದ್ ಕರ್ಕೇರ ದಂಪತಿಗಳು ಸ್ವಾಮೀಜಿ ಅವರ ಪಾದ ಪೂಜೆಗೈದರು.
ಬಳಿಕ ಒಡಿಯೂರು ಶ್ರೀಗಳು ದೀಪ ಪ್ರಜ್ವಲಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಮಹಾಲಕ್ಶ್ಮಿ ಭಜನಾ ಮಂಡಳಿಯ ಟ್ರಸ್ಟಿಗಳು ಹಿರಿಯ ಸದಸ್ಯರ ಜೊತೆಗೂಡಿ ಸ್ವಾಮಿಜಿಯವರನ್ನು ಗೌರವಿಸಿದರು. ಮಹಿಳಾ ಸದಸ್ಯೆಯರು ಸಾಧ್ವಿ ಮಾತೆ ಶ್ರೀ ಮಾತಾನಂದಮಯಿ ಅವರನ್ನು ಗೌರವಿಸಿದರು.
ಸಾಧ್ವಿ ಮಾತೆ ಮಾತನಂದಮಯಿ ತನ್ನ ಸುಶ್ರಾವ್ಯ ಕಂಠದಿಂದ ಭಕ್ತಿ ಗೀತೆ ಪ್ರಸ್ತುತ ಪಡಿಸಿದರು.
ಬಳಿಕ ಒಡಿಯೂರು ಶ್ರೀಗಳು ಆಶೀರ್ವಚನ ನೀಡಿದರು.
“ನಮ್ಮ ಬದುಕಿನಲ್ಲಿ ನಂಬಿಕೆ ಬಲ ಇರಬೇಕು. ಅದು ಮೂಲ ನಂಬಿಕೆ ಆಗಿರಬೇಕು. ಆಗಲೇ ಬದುಕು ಸುಗಮವಾಗುವುದು. ಚತುರ್ವಿಧ ಪುರುಷಾರ್ಥಗಳಲ್ಲಿ ತಿಳಿಸಿದ ಅರ್ಥ – ಕಾಮಗಳನ್ನು ಧರ್ಮದ ಸೂತ್ರದಲ್ಲಿ ಬಳಸಬೇಕು. ಈ ನಗರದಲ್ಲಿ ಬದುಕು ನಡೆಸುತ್ತಿದ್ದಾರೆಂದರೆ ಅದಕ್ಕೆ ಕಾರಣ ನಂಬಿಕೆ ಬಲವಾಗಿರುವುದೇ ಆಗಿದೆ. ವ್ಯವಸ್ಥಿತವಾಗಿ ಜೀವನ ಸಾಗಿಸುತ್ತಿರುವುದನ್ನು ಕಾಣಬಹುದು.
ಮಕ್ಕಳಿಗೆ ಸಂಸ್ಕಾರ ಶಿಕ್ಷಣದ ಅಗತ್ಯವಿದೆ. ಇಂಟರ್ ನೆಟ್ ಯುಗದಲ್ಲಿ ಆನ್ ಲೈನ್, ಆಫ್ ಲೈನ್ ಇದೆ. ಆದರೆ ಲೈಫ್ ಲೈನ್ ಸರಿಯಾಗಬೇಕಿದ್ದರೆ ಸಂಸ್ಕಾರ ಅತೀ ಅಗತ್ಯ. ಬದುಕೆಂದರೆ ಹಾವು ಏಣಿ ಆಟವಿದ್ದಂತೆ. ನಮಗೆ ಜೀವನದಲ್ಲಿ ಸಿಗುವ ಮಾರ್ಗದರ್ಶನವನ್ನು ನಾವು ಪಾಲಿಸುವವರಾಗಬೇಕು. ಮಾನವೀಯ ಮೌಲ್ಯಗಳನ್ನು ತುಂಬಿಸುವ ಕಾರ್ಯ ಭಜನೆಯಿಂದಾಗುತ್ತದೆ. ಆ ಕಾರ್ಯವು ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ನಡೆಯುತ್ತಿರುವುದು ಶ್ಲಾಘನೀಯಲಾಗಿದೆ”ಎಂದು ಸ್ವಾಮೀಜಿ ತನ್ನ ಆಶೀರ್ವಚನದಲ್ಲಿ ತಿಳಿಸಿದರು.
ಗುರುದೇವ ಸೇವಾ ಬಳಗದ ಅಧ್ಯಕ್ಷರು ದಾಮೋದರ್ ಶೆಟ್ಟಿ, ಕಾರ್ಯಧರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿರಿದ್ದರು.
ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಕಾಂಚನ್, ಟ್ರಸ್ಟಿಗಳಾದ ಶ್ರೀ ದಯಾನಂದ ಬಂಗೇರ, ಚಂದ್ರಶೇಖರ್ ಆರ್ ಸಾಲ್ಯಾನ್, ಪುರಂದರ ಸಾಲ್ಯಾನ್, ಶರದ್ ಕರ್ಕೇರ ಮತ್ತು ಪ್ರಫುಲ್ ಶ್ರೀಯಾನ್ ಅರ್ಚಕರಾದ ಆನಂದ ಮೆಂಡನ್, ಮನೋಜ್ ಮೆಂಡನ್ ಪುರಂದರ.ಜಿ.ಸಾಲ್ಯಾನ್, ಕಾರ್ಯದರ್ಶಿಗಳಾದ ದಯಾವತಿ ಸುವರ್ಣ, ನಾಗೇಶ್ ಪುತ್ರನ್, ಕೋಶಾಧಿಕಾರಿಗಳಾದ ರೇಖಾ ಕರ್ಕೇರ, ಪ್ರತಿಭಾ ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಜತೆಗೂಡಿ ಮಹಿಳಾ ಸದಸ್ಯರು ವಿಶೇಷವಾಗಿ ಸಹಕಾರ ನೀಡಿದರು.

ಶ್ರೀ ಮಹಾಲಕ್ಷ್ಮೀ ಹೌಸಿಂಗ್ ಸೊಸೈಟಿ, ಶ್ರೀ ಮದ್ಭಾರತ ಮಂಡಳಿ, ಮೊಗವೀರ ವ್ಯವಸ್ಥಾಪಕ ಮಂಡಳಿ, ಶ್ರೀ ಮಹಾಲಕ್ಷ್ಮೀ ನವರಾತ್ರಿ ಸಂಘ, ಚಿನ್ಮಯ ಮಿಶನ್ ನ ಸದಸ್ಯರು, ಮಹಾಲಕ್ಷ್ಮೀ ಕಾಲೋನಿಯ ನಿವಾಸಿಗಳು ಹಾಗೂ ಗುರು ಭಕ್ತರು ಉಪಸ್ಥಿತರಿದ್ದು ಸ್ವಾಮೀಜಿ ಅವರಿಂದ ಪ್ರಸಾದ ಸ್ವೀಕರಿಸಿದರು.

Related posts

ಕೆನರಾ ಗೌಡ ಬ್ರಾಹ್ಮಣ ಸಮಾಜ, ಮುಂಬೈ : ಸಾಮೂಹಿಕ ಸತ್ಯನಾರಾಯಣ ಪೂಜೆ

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ಸಯನ್ ಮಕರ ಜ್ಯೋತಿ ಫೌಂಡೇಶನ್ ವತಿಯಿಂದ  ನೋಟ್ ಬುಕ್ ವಿತರಣೆ, ಅಭಿನಂದನಾ ಕಾರ್ಯಕ್ರಮ,

Mumbai News Desk

ಮೀರಾ -ದಹಣು ಬಂಟ್ಸ್ ವತಿಯಿಂದ ಆಟಿದ ಕೂಟ -2024 ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವಕ್ಕೆ ಚಾಲನೆ

Mumbai News Desk

 ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ,

Mumbai News Desk