
ಕಾಪು, ಆ. 4: ಆಟಿ ಅಮಾವಾಸ್ಯೆಯ ಪ್ರಯುಕ್ತ ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ರವಿವಾರ ಕಾಪು ಪೇಟೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹಾಲೆ ಮರದ ತೊಗಟೆಯ ಕಷಾಯವನ್ನು ವಿತರಿಸಲಾಯಿತು.

ಬಿರುವೆರ್ ಕಾಪು ಸೇವಾ ಸಮಿತಿಯ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಂಬಗುಡ್ಡೆ ಅವರ ನೇತೃತ್ವದಲ್ಲಿ ಮುಂಜಾನೆ ಬೆಳಪುವಿನಿಂದ ಸಂಗ್ರಹಿಸಿ ತಂದ ಹಾಲೆ ಮರದ ತೊಗಟೆಯಲ್ಲಿ ಸುಮಾರು 100 ಲೀಟರ್ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ಅದರ ಜತೆಗೆ ಮೆಂತೆ ಪಾಯಸವನ್ನೂ ಸರ್ವಧರ್ಮೀಯರಿಗೆ ವಿತರಿಸಲಾಯಿತು.

ಬಿರುವೆರ್ ಕಾಪು ಸೇವಾ ಸಮಿತಿ ಗೌರವಾಧ್ಯಕ್ಷ ಭಾಸ್ಕರ್ ಅಂಚನ್, ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಸುಧಾಕರ್ ಸಾಲ್ಯಾನ್, ಪದಾಧಿಕಾರಿಗಳಾದ ವಿಕ್ಕಿ ಪೂಜಾರಿ ಮಡುಂಬು, ಅತಿಥ್ ಸುವರ್ಣ ಪಾಲಮೆ, ದೀಪಕ್ ಕುಮಾರ್ ಎರ್ಮಾಳು, ಸದಸ್ಯರಾದ ಪ್ರಶಾಂತ್ ಪೂಜಾರಿ, ಸುಜನ್ ಎಲ್. ಸುವರ್ಣ, ಅನಿಲ್ ಅಮೀನ್ ಕಾಪು, ಅಶ್ವಿನಿ ನವೀನ್, ಸಂಧ್ಯಾ ಬಿ. ಕೋಟ್ಯಾನ್, ಇನ್ನಂಜೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಪೂಜಾರಿ, ಸ್ಥಳೀಯರಾದ ಶಿವಾನಂದ ಪೂಜಾರಿ ಮುನ್ನ, ರಮೇಶ್ ಪೂಜಾರಿ ಮಲ್ಲಾರು, ಅಶ್ವಿನಿ ಜಿ. ಕೋಟ್ಯಾನ್, ಸಂದೇಶ್ ಪೂಜಾರಿ, ರವಿ ಪೂಜಾರಿ ಮೊದಲಾದವರು ಸಹಕರಿಸಿದರು.