
ಬಿಲ್ಲವರ ಎಸೋಸಿಯೇಷನ್ ಮುಂಬೈ ಇದರ ಮಾಜಿ ಉಪಾಧ್ಯಕ್ಷ, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಮಾಜಿ ಕಾರ್ಯಧ್ಯಕ್ಷ, ಖ್ಯಾತ ಸಂಘಟಕ ಶ್ರೀ ಸಿ ಟಿ ಸಾಲ್ಯಾನ್ (75) ಧೀರ್ಘ ಕಾಲದ ಅನಾರೋಗ್ಯದಿಂದಾಗಿ ಇಂದು ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಸೊಸೆ, ಮೊಮ್ಮಗ ಹಾಗೂ ಅಪಾರ ಬಂಧು – ಬಳಗ, ಸಮಾಜ ಬಾಂದವರನ್ನು ಅಗಲಿರುವರು.
ಸಿ. ಟಿ. ಸಾಲ್ಯಾನ್ ಅವರ ನಿಧನಕ್ಕೆ ಬಿಲ್ಲವರ ಎಸೋಸಿಯೇಷನ್ ನ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಶ್ರೀ ಜಯ ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರ ಹಿತಚಿಂತಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಯಾತ್ರೆ ಮೂಲ್ಕಿ ಅಚ್ಚುನಂದನ್ ನಲ್ಲಿರುವ ಅವರ ಸ್ವಗೃಹದಿಂದ ಹೊರಟು ಮೂಲ್ಕಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.