April 1, 2025
ಮುಂಬಯಿ

ಬಿಲ್ಲವರ ಎಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭ

ಸ್ವಾರ್ಥ ರಹಿತವಾಗಿ ಸಮಾಜ ಸೇವೆ ಮಾಡಿದಾಗ ಸಮಾಜ ಉದ್ದಾರವಾಗುತ್ತದೆ- ಹರೀಶ್ ಅಮೀನ್

ಚಿತ್ರ : ಧನಂಜಯ ಪೂಜಾರಿ, ವರದಿ : ರವಿ ಬಿ. ಅಂಚನ್ ಪಡುಬಿದ್ರಿ


ಡೊಂಬಿವಲಿ ಅ. 4:  ಡೊಂಬಿವಲಿ ಸ್ಥಳೀಯ ಕಚೇರಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ಕಾರ್ಯದೊಂದಿಗೆ ಎಸೋಸಿಯೇಷನ್ ನ ಸರ್ವ ಕೆಲಸ ಕಾರ್ಯಗಳನ್ನು ನಿಷ್ಟೆ ಯಿಂದ ಮಾಡುತ್ತಿರುವ ಸ್ಥಳೀಯ ಕಚೇರಿ ದಿ. ಸಂಜೀವ ಪಾಲನ್, ದಿ. ಯಶವಂತ ಸುವರ್ಣ, ವಸಂತ ಸುವರ್ಣ ಹಾಗೂ ಇತರ ನಿಷ್ಠಾವಂತ ಸಮಾಜ ಬಾಂಧವರ ಪರಿಶ್ರಮದಿಂದ ಡೊಂಬಿವಲಿ ಸ್ಥಳೀಯ ಕಚೇರಿ ಎಲ್ಲಾ ಸ್ಥಳೀಯ ಕಚೇರಿಗಿಂತ ವಿಭಿನ್ನ ಹಾಗೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದೆ  ಕಾರ್ಯಾಧ್ಯಕ್ಷರಾದ ಚಂದ್ರಹಾಸ ಪಾಲನ್ ನವಿ ಮುಂಬಯಿ ಸಮುದಾಯ ಭವನ ಪೂರ್ಣ ಗೊಳ್ಳುವಲ್ಲಿ ಪ್ರಾಮಾಣಿಕವಾಗಿ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ ಒರ್ವ ಉದ್ಯಮಿಯಾಗಿ, ಸ್ಥಳೀಯ ಕಾರ್ಯಾಧ್ಯಕ್ಷರಾಗಿ ಸಮಾಜ ಬಾಂಧವರ ಕಷ್ಟ- ಸುಖಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ.ಇಂತಹ ಸಮಾಜ ಬಾಂಧವರು ನಮ್ಮಲ್ಲಿ ಇನ್ನಷ್ಟು ಇದ್ದರೆ ನಾವು ಬಿಲ್ಲವ ಸಮಾಜವನ್ನು ಮತ್ತಷ್ಟು ಸದೃಢ ಗೊಳಿಸ ಬಹುದು. ನಾವು ಸ್ವಾರ್ಥರಹಿತವಾಗಿ ಸಮಾಜ ಸೇವೆ ಮಾಡಿದಾಗ ಸಮಾಜ ಉದ್ದಾರವಾಗುತ್ತದೆ. ನಾನು ಸಮಾಜಕ್ಕೆ ಎನನ್ನಾದರೂ ಮಾಡಿದ್ದರೆ ಅದು ಸಂಸ್ಥೆಯ ಕಾರ್ಯಕಾರಿ ಸಮಿತಿಯ ಪ್ರೋತ್ಸಾಹ ಹಾಗೂ22 ಸ್ಥಳೀಯ ಕಚೇರಿಯ ಬೆಂಬಲದಿಂದ ಸಾಧ್ಯವಾಗಿದೆ   ಪ್ರತಿಯೊಂದು ಕ್ಷೇತ್ರ, ಪ್ರತಿಯೊಂದು ಸಂಘ- ಸಂಸ್ಥೆಗಳಲ್ಲಿ ಬಿನ್ನಭಿಪ್ರಾಯವಿದೆ ಅದನ್ನು ನಾವು ಕುಳಿತು ಅರ್ಥಪೂರ್ಣವಾಗಿ ಬಗೆಹರಿಸಿ  ನಮ್ಮ ಸಮಾಜವನ್ನು ಇನ್ನಷ್ಟು ಸದೃಢ ಸಮಾಜವನ್ನಾಗಿ ನಿರ್ಮಾಣ ಮಾಡಬಹುದು ಎಂದು ಬಿಲ್ಲವರ ಎಸೋಸಿಯೇಷನ್ ಇದರ ಅಧ್ಯಕ್ಷರಾದ ಹರೀಶ್ ಅಮೀನ್ ನುಡಿದರು.
ಅವರು ಅ.4 ರ ಭಾನುವಾರ ರಾತ್ರಿ ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ತಕ್ಷತೆ ವಹಿಸು ಮಾತನಾಡುತ್ತಿದ್ದರು.


ಮಾಜಿ ಅಧ್ಯಕ್ಷ ಎಲ್.ವಿ.ಅಮೀನ್ ಮಾತನಾಡುತ್ತಾ  ಡೊಂಬಿವಲಿ ಸ್ಥಳೀಯ ಕಚೇರಿಯ ಸದಸ್ಯರು ಸಂಘಟಿತರಾಗು ಬಿಲ್ಲವ ಸಮಾಜದ ಉದ್ದಾರಕ್ಕಾಗಿ ಪ್ರಾಮಾಣಿಕ ಕೆಲಸ ಕಾರ್ಯಗಳನ್ನು ಮಾಡುವುದನ್ನು ಕಂಡು ಅತೀವ ಸಂತೋಷವಾಗುತ್ತಿದೆ. ಎಸೋಸಿಯೇಷನ್ ನ ಅಧ್ಯಕ್ಷರಾದ ಹರೀಶ್ ಅಮೀನ್ ಸಮಾಜದ ಉದ್ಧಾರಕ್ಕಾಗಿ ಬಹಳಷ್ಟು ಶ್ರಮ ಪಡುತ್ತಿದ್ದಾರೆ. ಪಡುಬೆಳ್ಲೆ ಶಾಲೆಯ ಅವರಣದಲ್ಲಿ  ಹಾಸ್ಟೆಲ್ ನಿರ್ಮಾಣಕ್ಕಾಗಿ ಬಿ.ಕೆ ಹರಿಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿ ಅವರ ವಿಧಾನಪರಿಷತ್ ನಿಧಿಯಿಂದ ಹಣ ಬಿಡುಗಡೆ ಮಾಡಲು ಕೋರಿದ್ದಾರೆ ಇದೊಂದು ಉತ್ತಮ ಕೆಲಸ ಸಂಘಟನೆಯಲ್ಲಿ ಭಿನ್ನಬಿಪ್ರಾಯ ಸ್ವಾಭಾವಿಕ ಅದನ್ನು ಕುಳಿತು ಬಗೆ ಹರಿಸಬಹುದು ಅದನ್ನು ಬಿಟ್ಟು ಸಮಾಜದ ಕೆಲಸ ಮಾಡುವಾಗ ಕಾಳೆಲೆಯ ಬಾರದು ಎಂದರು.


ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಸಿ.ಸಿ.ಐ ಯ ಕಾರ್ಯಾಧ್ಯಕ್ಷ ಎನ್.ಟಿ. ಪೂಜಾರಿ ಮಾತನಾಡುತ್ತಾ ಡೊಂಬಿವಲಿ ಸ್ಥಳೀಯ ಕಚೇರಿಯ ಸದಸ್ಯರ ಸಮಾಜದ ಮೇಲಿರುವ ಪ್ರೀತಿ, ಕಾಳಜಿ, ಸಮಾಜ ಬಾಂಧವರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಿಕೊಡುವ  ಕಾರ್ಯವೈಖರಿ ಯನ್ನು ನೋಡಿ ಬಹಳಷ್ಟು ಸಂತೋಷವಾಗುತ್ತಿದೆ. ಜಯ ಸುವರ್ಣರ ಸಮ್ಮುಖದಲ್ಲಿ ಒಡೆದ ಸಂಸ್ಥೆ ಜಯ ಸುವರ್ಣರ ಇಂಗಿತದ ಪ್ರಕಾರ ಅವರ ಕಾಲದಲ್ಲಿಯೇ ಪುನಃ ಒಂದಾಗಿತ್ತು  ಪ್ರತಿ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿವೆ ಅದರೆ ಅವರು ಕುಳಿತು ಬಗೆ ಹರಿಸುತ್ತಿದ್ದಾರೆ ಅದರೆ ಇಲ್ಲಿ ಮಾಜಿ ಮಂತ್ರಿ ವಿನಯಕಯಮಾರ್ ಸೊರಕೆ ಉದ್ಯಮಿ ರವಿ ಶೆಟ್ಟಿಯವರು ಹಾಗೂ ನಾವೆಲ್ಲರೂ ಬಹಳಷ್ಟು ಪ್ರಯತ್ನಿಸಿದ್ದೇವೆ  ಸಮಾಜ ಮುಂದೆ ಬರಬೇಕಾದರೆ ಎಲ್ಲರೂ ಒಂದಾಗಿ ನಿಷ್ಠೆಯಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸ ಕಾರ್ಯ ಮಾಡ ಬೇಕು ಅಗ ಮಾತ್ರ ಸಮಾಜ ಮುಂದೆ ಬರಬಹುದು ಎಂದರು.
ಮಾಜಿ ಅಧ್ಯಕ್ಷ ವರದ ಉಲ್ಲಾಳ್ ಮಾತನಾಡುತ್ತ ಡೊಂಬಿವಲಿ ಸ್ಥಳೀಯ ಸಮಿತಿಯ ಒಗ್ಗಟ್ಟು  ಕಾರ್ಯಕ್ರಮಕ್ಕೆ ಮನದಾಳದ ಅಭಿನಂದನೆಗಳು ಸ್ಥಳೀಯ ಕಚೇರಿಯ ಸಂಘಟನೆಯ ಬಗ್ಗೆ ಜವಬ್ದಾರಿಯುತ ಕೆಲಸ ಮಾಡಿದ್ದರಿಂದ ಇಂದು ಸ್ಥಳೀಯ ಕಚೇರಿ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ‌. ಎಸೋಸಿಯೇಷನ್ ಈಗಿನ ಅಧ್ಯಕ್ಷರಾದ ಹರೀಶ್ ಅಮೀನ್ ಅವರಲ್ಲಿ ಇತರರಿಗೆ ದಾನ ಕೊಟ್ಟು ಮತ್ತು ಇತರರಿಂದ ದಾನ ಪಡೆಯುವ ಕೌಶಲ್ಯ ಗೊತ್ತಿದೆ ಅದುದರಿಂದ ಬಿಲ್ಲವರ ಎಸೋಸಿಯೇಷನ್ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಿದ್ದಾರೆ ಹರೀಶ್ ಅಮೀನ್ ಸಮುದಾಯ ಭವನವನ್ನು ಪುರ್ಣಗೊಳಿಸಿದ್ದಾರೆ ಇದು ಕೇವಲ ಸಮುದಾಯ ಭವನ ವಾಗಿರದೆ ಇದರಿಂದ ಉತ್ಪತ್ತಿ ಬರುವ ಸಾಧನೆ ಯನ್ನು ಮಾಡ ಬೇಕು ನಸು ಸಂಸ್ಥೆಗೆ ಜಾಗವನ್ನು ಪಡೆದು ಶಾಲೆ, ಕಾಲೇಜು ಅಥಾವ ಅಸ್ಪತ್ರೆ ನಿರ್ಮಾಣ ಮಾಡಿ ಪ್ರಾಮಾಣಿಕ ಕೆಲಸ ಮಾಡಿದಾಗ ಅಗ ನಾವು ಸಮಾಜದ ಉದ್ದಾರದ ಬಗ್ಗೆ ಇಟ್ಟ ಕನಸ್ಸು ಪೂರ್ಣಗೊಳ್ಳುತ್ತದೆ ಎಂದರು.


  ಅತಿಥಿ ಪುರುಷೋತ್ತಮ ಕೋಟ್ಯಾನ್ ಮಾತನಾಡುತ್ತಾ ಡೊಂಬಿವಲಿ ಸ್ಥಳೀಯ ಕಚೇರಿಯ ಅಭಿವೃದ್ಧಿಗಾಗಿ ವಸಂತ ಸುವರ್ಣ, ಯಶವಂತ ಸುವರ್ಣ, ಸಂಜೀವ ಪಾಲನ್ ಬಹಳಷ್ಟು ಪ್ರಯತ್ನಿಸಿದ್ದಾರೆ ಡೊಂಬಿವಲಿಯಲ್ಲಿ ಬೇರೆಯೇ ಬಿಲ್ಲವ ಸಂಘಟನೆಯನ್ನು ಮಾಡುವುದನ್ನು ಕೆ.ಭೋಜರಾಜ ಮತ್ತು ಎನ್.ಎಲ್. ಸುವರ್ಣ  ತಪ್ಪಿಸಿ ಒಗ್ಗಟ್ಟಿನಿಂದ ಬಿಲ್ಲವರ ಎಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ ಸ್ಥಾಪಿಸುವಂತೆ ಮಾಡಿರುವರು ಇಂದು ಚಂದ್ರಹಾಸ ಪಾಲನ್ ಸ್ಥಳೀಯ ಕಚೇರಿಯನ್ನು ಬಹಳ ಅಚ್ಚು ಕಟ್ಟಾಗಿ ಮುನ್ನಡೆಸುತ್ತಿದ್ದಾರೆ ಎಂದರು.
ಎಸೋಸಿಯೇಷನ್ ನ ಕಾರ್ಯದರ್ಶಿ ಹರೀಶ್ ಸಾಲ್ಯಾನ್  ಬಿಲ್ಲವರ ಎಸೋಸಿಯೇಷನ್ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು


ಇದೇ ಸಂದರ್ಭದಲ್ಲಿ ಸ್ಥಾಒಕ ಸದಸ್ಯರಾದ ಮಂಜಪ್ಪ ಪೂಜಾರಿ ವೇದಾವತಿ ಪೂಜಾರಿ ದಂಪತಿಯ ನ್ನು, ಉದ್ಯಮಿ ಲಕ್ಷ್ಮಣ್ ಪೂಜಾರಿ ಭಾರತಿ ಪೂಜಾರಿ ದಂಪತಿಯನ್ನು ಮತ್ತು ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಪಾಲನ್ ವೀಣಾ ಪಾಲನ್ ದಂಪತಿಯನ್ನು ವೇದಿಕೆಯ ಮೇಲಿದ್ದ ಗಣ್ಯರು ವಿಶೇಷವಾಗಿ ಸನ್ಮಾನಿಸಿದರು.


ಇದೇ ಸಂದರ್ಬದಲ್ಲಿ ಮಹಾರಾಷ್ಟ್ರ ಸರಕಾರದ ಪಿಡಬ್ಲೂ ಮಂತ್ರಿ  ರವೀಂದ್ರ ಚೌಹಾಣ್,  ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಕ್ರೀಡಾ ಸಮಿಯಿಯ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ, ಜಗದಂಬಾ ಮಂದಿರದ ಗೌ.ಅಧ್ಯಕ್ಷ ಹರೀಶ್ ಶೆಟ್ಟಿ, ಬಿಲ್ಲವರ ಎಸೋಸಿಯೇಷನ್ ಇತರ ಸ್ಥಳೀಯ ಕಚೇರಿಯ ಪದಾಧಿಕಾರಿಗಳನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತುಳು ಜನಪದ, ಸಾಂಸ್ಕೃತಿಕ ನೃತ್ಯ, ಯಕ್ಷಗಾನ ನೃತ್ಯ, ಬಾಲಿವುಡ್ ನೃತ್ಯ, ಗರ್ಭ ನೃತ್ಯ, ಹುಲಿ ನೃತ್ಯ, ಬಾಲಿವುಡ್ ಹಾಡುಗಳು, ಕಿರು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಘದ ಸದಸ್ಯರು,ಸದಸ್ಯೆಯರು, ಮಹಿಳಾ ವಿಭಾಗ ಯುವ ವಿಭಾಗ ಮತ್ತು ಮಕ್ಕಳಿಂದ ನಡೆಯಿತು ಹಾಗೂ ಡಾ. ಪ್ರಾಶಾಂತ್ ಸುವರ್ಣ ಮತ್ತು ಚಂದ್ರಹಾಸ ಪಾಲನ್ ಇವರಿಂದ ಗಾಯನ  ಮತ್ತು ತುಡರ್ ಕಲಾವಿದರಿಂದ ಕುಶಲ್ ದ ಗೊಂಚಿಲ್ ಹಾಸ್ಯಮಯ ನಡೆಯಿತು
ಸನ್ಮಾನಿತರ ಪರಿಚಯವನ್ನು ಜಗದೀಶ್ ಕೋಟ್ಯಾನ್ ಮತ್ತು ಕೃಷ್ಣ ಪೂಜಾರಿ ಮಾಡಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿನ್ಮಯ ಸಾಲ್ಯಾನ್ ಹಾಗೂ ಸಭಾ ಕಾರ್ಯಕ್ರಮವನ್ನು ಸಚಿನ್ ಪೂಜಾರಿ ನಿರ್ವಹಿಸಿದರು ಕೊನೆಗೆ ಆನಂದ ಪೂಜಾರಿ ದನ್ಯವಾದಗೈದರು


ದಿ. ಸಂಜೀವ ಪಾಲನ್ ನನ್ನ ಅತ್ಮೀಯರು ಅವರ ಕಾಲದಿಂದಲೂ ನಾನು ಎಸೋಸಿಯೇಷನ್ ನ ಸಂಪರ್ಕದಲ್ಲಿದ್ದೆ ನಿಮ್ಮ ಸಮಾಜ ಸೇವೆ, ಸಮಾಜದ ಒಗ್ಗಟ್ಟನ್ಬು ಕಂಡು ಅತೀವ ಆನಂದವಾಗುತ್ತಿದೆ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ನಾನು ಸದಾ ಸಹಕಾರ ನೀಡುತ್ತೇನೆ— ರವೀಂದ್ರ ಚೌಹಾನ್ ( ಮಹಾರಾಷ್ಟ್ರ ಸರಕಾರದ ಮಂತ್ರಿ )

ಸನ್ಮಾನಿತರು-:
ಈ ಸನ್ಮಾನವನ್ನು  ನಾನು ಶ್ರೀ ನಾರಾಯಣಗುರು ದೇವರ ಪ್ರಸಾದ ವೆಂದು ಸ್ವೀಕರಿಸಿದ್ದೇನೆ ಸ್ಥಳೀಯ ಕಚೇರಿಯ ಸರ್ವ ಸದಸ್ಯರಿಗೆ ನಾನು ಚಿರ ಋಣಿ — ಮಂಜಪ್ಪ ಪೂಜಾರಿ ( ಸ್ಥಾಪಕ ಸದಸ್ಯರು )

Related posts

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಂಭ್ರಮ, ಚಾಲನೆ,

Mumbai News Desk

ಜಿ ಎಸ್ ಬಿ ಸಭಾ, ಮುಲುಂಡ್, ಸಾಂಸ್ಕೃತಿಕ ಸ್ನೇಹ ಸಮ್ಮಿಲನ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ; ಆಷಾಢ ಹಬ್ಬ ಆಚರಣೆ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ. ರಿಷಿತಾ ಹರಿಶ್ಚಂದ್ರ ಕುಲಾಲ್ ಶೇಕಡಾ: 90% ಅಂಕ.

Mumbai News Desk

ಕುಲಾಲ ಸಂಘ ಮುಂಬೈ  ಕಾರ್ಯಾಲಯದಲ್ಲಿ ಮಕರ  ಸಂಕ್ರಾಂತಿ ಆಚರಣೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಿಯಾನ್ ಸತೀಶ್ ಕೋಟ್ಯಾನ್ ಗೆ ಶೇ 94.20 ಅಂಕ.

Mumbai News Desk