23.5 C
Karnataka
April 4, 2025
ಮುಂಬಯಿ

ಕಲ್ಯಾಣ್- ಉಲ್ಲಾಸನಗರ ಕನ್ನಡಿಗರಿಂದ ಮಾರಣಕಟ್ಟೆ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ಪ್ರದರ್ಶನ’



ಸಂಪಾದನೆಯ ಒಂದಂಶವನ್ನು ಕಲೆ ಹಾಗೂ ಕಲಾವಿದರನ್ನು ಗೌರವಿಸಲು ನೀಡಿದರೆ ಕಲಾವಿದರ ಶ್ರೇಯಸ್ಸು ಅಗುವುದರಲ್ಲಿ ಸಂದೇಹವಿಲ್ಲ- ಸುಬ್ಬಯ್ಯ ಶೆಟ್ಟಿ

ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ


ಕಲ್ಯಾಣ್ ಅ.5: ತಾಯ್ನಾಡಿನ ಕಲೆ ಉಳಿಯ ಬೇಕೆನ್ನುವ ದೃಷ್ಟಿಯಿಂದ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ವಿವಿಧ ಯಕ್ಷಗಾನ ಮೇಳಗಳನ್ನು ಬರಮಾಡಿಸಿ ಯಕ್ಷಗಾನ ಪ್ರದರ್ಶನ ಅಯೋಜಿಸಿ ಕಲೆ ಹಾಗೂ ಕಲಾವಿದರಿಗೆ ಸಹಾಯ ಮಾಡುತ್ತಿರುವ ಕಾರ್ಯಕ್ರಮ ಅಯೋಜಕರಾದ ನಿಮ್ಮ ಗುಣವನ್ನು ಪ್ರಶಂಸಿಸಲೇ ಬೇಕು ಕಲ್ಯಾಣ್ ನಲ್ಲಿ ಈಗಾಗಲೇ ಮೂರು ಯಕ್ಷಗಾನ ಪ್ರದರ್ಶನ, ತಾಳ ಮದ್ದಳೆ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ ಈ ಕಾರ್ಯಕ್ರಮದ ಹಿಂದೆ ನೀವು ಪಡುತ್ತಿರುವ ಶ್ರಮವನ್ನು ಕೊಂಡಾಡಲೇ ಬೇಕು. ನಾವು ನಮ್ಮೆಲ್ಲರ ಸಂಪಾದನೆಯ ಒಂದಂಶವನ್ನು ಕಲೆ ಹಾಗೂ ಕಲಾವಿದರನ್ನು ಗೌರವಿಸಲು ನೀಡಿದರೆ ಕಲಾವಿದರ ಶ್ರೇಯಸ್ಸು ಅಗುವುದರಲ್ಲಿ ಸಂದೇಹವಿಲ್ಲ ಎಂದು ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಸುಬ್ಬಯ್ಯ ಶೆಟ್ಟಿ ನುಡಿದರು.
ಅವರು ಅ.5 ರಂದು ಸಂಜೆ ಶಹಾಡ್ ಸಮೀಪದ ಪಟೀದರ್ ಸಭಾಗೃಹದಲ್ಲಿ ಅನಿಲ್ ಶೆಟ್ಟಿ ವಕ್ಕೇರಿ, ಪ್ರಸನ್ನ ಶೆಟ್ಟಿ ಬೆಳ್ಳಂಪಳ್ಳಿ, ಪ್ರಶಾಂತ್ ಶೆಟ್ಟಿ ಬೆಳ್ಳಂಪಳ್ಳಿ, ಅರ್ಡಿ ಉದಯ ಶೆಟ್ಟಿ, ಸುಧೀರ್ ಶೆಟ್ಟಿ ವಂಡ್ಸೆ, ದೀಕ್ಷೀತ್ ಶೆಟ್ಟಿ ಸೂಪರ್ ಪಾಯಿಂಟ್, ರಘು ಶೆಟ್ಟಿ ಕಾನ್ಕಿ ಸುರೇಂದ್ರ ಶೆಟ್ಟಿ ಸರಗಮ್ ಇವರ ವ್ಯವಸ್ಥಾಪಕತ್ವದಲ್ಲಿ  ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತುಳಸಿ ಜಲಂಧರ ಯಕ್ಷಗಾನದ ಮಧ್ಯಂತರದಲ್ಲಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಬಂಟರ ಸಂಘ ಮುಂಬಯಿ ಇದರ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಪ್ರಮುಖ ಸಲಹೆಗಾರ ಸತೀಶ್ ಶೆಟ್ಟಿ ಮಾತನಾಡುತ್ತಾ ಪ್ರತಿವರ್ಷ ಮಾರಣಕಟ್ಟೆ ಮೇಳದ ಯಶಸ್ವಿ ಯಕ್ಷಗಾನ ಪ್ರದರ್ಶನವನ್ನು ಅಯೋಜಕರು ನೀಡುತ್ತಿದ್ದು ಅದರೊಂದಿಗೆ ತಮ್ಮ ತಾಯ್ನಾಡಿನ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವ ನಿಮ್ಮ ಕಾರ್ಯ ನಿರಂತರ ನಡೆಯುತ್ತಿರಲಿ ನಿಮ್ಮ ಇಂತಹ ಉತ್ತಮ ಕೆಲಸ ಕಾರ್ಯಗಳಿಗೆ ನನ್ನ ಸಹಕಾರ ಸದಾ ಇದೆ ಎಂದರು.
ಇದೇ ಸಂದರ್ಭದಲ್ಲಿ ಮಾರಣಕಟ್ಟೆ ಮೇಳದ ಮೂವರು ಕಲಾವಿದರಾದ ಶ್ರೀಧರ್ ಗಾಣಿಗ ಉಪ್ಪುಂದ, ಪ್ರಭಾಕರ ಶೆಟ್ಟಿ ಮಡಾಮಕ್ಕಿ ಮತ್ತು ಶೇಖರ ಶೆಟ್ಟಿ ಯಳಬೇರು ಇವರನ್ನು  ಕಾರ್ಯಕ್ರಮದ ವ್ಯವಸ್ಥಾಪಕರ ಪರವಾಗಿ ವೇದಿಕೆಯ ಮೇಲಿದ್ದ ಗಣ್ಯರು ಶಾಲು ಫಲ, ಪುಷ್ಪ, ನೆನಪಿನ ಕಾಣಿಕೆ ಹಾಗೂ ನಗದು ನೀಡಿ ಸನ್ಮಾನಿಸಿದರು ಹಾಗೂ ಇದೇ ಸಂದರ್ಭದಲ್ಲಿ ದಾನಿಗಳಾದ ಪ್ರಕಾಶ್ ಅರ್. ಶೆಟ್ಟಿ ಮತ್ತು ಪ್ರವೀಣಾ ಪಿ. ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು ಹಾಗೂ ಭಾಗವತರಾದ ಸುಧಾಕರ ಕೊಟ್ಠಾರಿ , ನಾಗೇಶ್ ಕುಲಾಲ್ ಹಾಗೂ ಮೇಳದ ಯಜಮಾನರಾದ ಸಿವಿಲ್ ರಮೇಶ್ ಶೆಟ್ಟಿಯವರನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು ಮತ್ತು ಕಾರ್ಯಕ್ರಮದ ವ್ಯವಸ್ಥಾಪಕರಾದ ಅನಿಲ್ ಶೆಟ್ಟಿ ವಕ್ಕೇರಿ, ಪ್ರಸನ್ನ ಶೆಟ್ಟಿ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಪ್ರಶಾಂತ್ ಶೆಟ್ಟಿ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ,ಆರ್ಡಿ ಉದಯ ಶೆಟ್ಟಿ, ಸುಧೀರ್ ಶೆಟ್ಟಿ ವಂಡ್ಸೆ, ದೀಕ್ಷಿತ್ ಶೆಟ್ಟಿ ಸೂಪರ್ ಪಾಯಿಂಟ್, ರಘು ಶೆಟ್ಟಿ ಕಾನ್ಕಿ, ಸುರೇಂದ್ರ ಶೆಟ್ಟಿ ಸರಗಮ್ ಇವರನ್ನು ಮೇಳದ ಪರವಾಗಿ ಸತ್ಕರಿಸಲಾಯಿತು


ಜಗದೀಶ್ ಶೆಟ್ಟಿ ಬೆಳಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೇದಿಕೆಯ ಮೇಲೆ  ಸುಬ್ಬಯ್ಯ ಶೆಟ್ಟಿ, ಸುಭೋದ್ ಭಂಡಾರಿ, ಸತೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ದಯಾನಂದ ಶೆಟ್ಟಿ, ಸದಾನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧೀರ್ ಶೆಟ್ಟಿ, ವಿಜಯ ಶೆಟ್ಟಿ, ಶೋಭಾ ಶೆಟ್ಟಿ, ಪ್ರವೀಣಾ ಶೆಟ್ಟಿ, ರಮೇಶ್ ಶೆಟ್ಟಿ ಸಿವಿಲ್, ಅನಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಉದಯ ಶೆಟ್ಟಿ, ಸುಧೀರ್ ಶೆಟ್ಟಿ , ದೀಕ್ಷಿತ್ ಶೆಟ್ಟಿ, ರಘು ಶೆಟ್ಟಿ , ಸುರೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

ಸನ್ಮಾನಿತರ ಮಾತು

ಕಲಾವಿದರಿಗೆ ತಾಯ್ನಾಡಿನಲ್ಲಿ  ಕೇವಲ 6 ತಿಂಗಳು ಉದ್ಯೋಗ  ತದನಂತರ ಮಳೆಗಾಲದಲ್ಲಿ ಮುಂಬಯಿ ಅಥಾವ ಬೆಂಗಳೂರನ್ನು ಅವಲಂಬಿಸ ಬೇಕು ಇಂದು ಮಹಾನಗರದ ಉದ್ಯಮಿಗಳು ಒತ್ತಡದ ದಿನಗಳನ್ನು ಕಳೆಯುತ್ತಿದ್ದಿರಿ ಅದರೂ ಕಲೆ ಹಾಗೂ ಕಲಾವಿದರ ಕಷ್ಟ ವನ್ನು ನೋಡಿ ಹೃದಯವಂತ ಕಲಾಪೋಷಕರಾದ ತಾವು ಮಹಾನಗರಕ್ಕೆ ಕರೆಸಿ ಪ್ರದರ್ಶನವನ್ನು ನೀಡಿ ಕಲಾವಿದರನ್ನು ಸನ್ಮಾನಿಸುತ್ತಿದ್ದಿರಿ ಈ ಕಾರ್ಯಕ್ಕೆ ಬ್ರಹ್ಮಲಿಂಗೇಶ್ವರ ಅನುಗ್ರಹ ಸದಾ ಇರಲಿ ನಾನು ಮೂವತ್ತು ವರ್ಷದಿಂದ ಮಹಾನಗರಕ್ಕೆ ಬರುತ್ತಿದ್ದೇನೆ ಮುಂಬಯಿ ಮೇಳದ ಯಜಮಾನರು ಲಾಭಕ್ಕಾಗಿ ಈ ಕಾರ್ಯವನ್ನು ಮಾಡದೆ ಪ್ರತಿವರ್ಷ ಲಕ್ಷ,ಲಕ್ಷ ರೂಪಾಯಿ ಕಳಕೊಳ್ಳುತ್ತಿದ್ದಾರೆ ಅದರೂ ದೇವರ ಸೇವೆ ಮಾಡುತ್ತಿದ್ದಾರೆ. ರಮೇಶ್ ಶೆಟ್ಟಿಯವರನ್ನು ಪ್ರೋತ್ಸಾಹಿಸುವ ಪ್ರಯೋಜಕರಿಗೆ ಅಭಿನಂದನೆಗಳು–ಪ್ರಭಾಕರ್ ಶೆಟ್ಟಿ ಮಡಾಮಕ್ಕಿ,

ನಾನು ಯಕ್ಷಗಾನಕ್ಕೆ ಆಕಸ್ಮಿಕವಾಗಿ ಬಂದು ಕಲಾವಿದನಾದವ ಯಕ್ಷಗಾನ ಕಲಾವಿದರು ನನ್ನನ್ನು ಎತ್ತಿ ಹಿಡಿದು ಬೆಳೆಸಿದ್ದಾರೆ ನಿಮ್ಮಂತಹ ಕಲಾ ಪೋಷಕರು ನನ್ನಂತಹ ಕಲಾವಿದನನ್ನು ಬ್ರಹ್ಮಲಿಂಗೇಶ್ವರ ದೇವರು ಹಾಗೂ ನಿಮ್ಮಂತಹ ಕಲಾ ಪೋಷಕರು ಕೈಬಿಡಲಿಲ್ಲ  ನನ್ನನ್ನು ಸನ್ಮಾನಿಸಿದ ನಿಮಗೆ ವಂದನೆಗಳು — ಶೇಖರ ಶೆಟ್ಟಿ ಯಳಬೇರು


ಕಳೆದ ಮೂವತ್ತು ವರ್ಷಗಳಿಂದ ಯಕ್ಷಗಾನ ಸೇವೆ ಮಾಡುತ್ತಿದ್ದೇನೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದೇನೆ. ಮಹಾನಗರದಲ್ಲಿ ನನ್ನ ಪ್ರಥಮ ಸನ್ಮಾನ  ನನ್ನನು ಸನ್ಮಾನಿಸಿದ ನಿಮಗೆ ಬ್ರಹ್ಮಲಿಂಗೇಶ್ವರ ದೇವರು ಒಳ್ಳೆಯದನ್ನು ಮಾಡಲಿ

Related posts

12ನೇ ತರಗತಿಯ ಫಲಿತಾಂಶ : ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ 

Mumbai News Desk

ಚಿಣ್ಣರಬಿಂಬದ ಇಪ್ಪತ್ತೊಂದನೆಯ ವರ್ಷದ ಮಕ್ಕಳ ಉತ್ಸವದ ಸಮಾರೋಪ .

Mumbai News Desk

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024ದಿವ್ಯಾ ವಿಶ್ವನಾಥ್ ಪೂಜಾರಿ ಉತ್ತೀರ್ಣ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯವತಿಯಿಂದಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk