30.9 C
Mumbai
June 8, 2026
Mumbai News Kannada
ಮುಂಬಯಿ

ಶಹಾಡ್‌ ಶ್ರೀ ಮೂಕಾಂಬಿಕಾ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನ





ಶಹಾಡ್: ಶಕ್ತಿ ದೇವತೆ ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ, ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾ ಗೇಟ್, ಶಹಾಡ್ ಇಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವವು ದಿನಾಂಕ 22/09/2025 ರಿಂದ ದಿನಾಂಕ 02/10/2025 ರವರೆಗೆ ಅತಿ ವಿಜೃಂಭಣೆಯಿಂದ ಜರುಗಿತು. ಈ ಹನ್ನೊಂದು ದಿನಗಳ ದಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಸ್ರಾರು ಭಕ್ತರ ಗಮನ ಸೆಳೆದವು.

​ಈ ಸಂದರ್ಭದಲ್ಲಿ ವಿವಿಧ ದುರ್ಗಾ ಪೂಜೆಗಳು, ದೇವಿಯ ಅನುಗ್ರಹಕ್ಕಾಗಿ ದುರ್ಗಾ ಹೋಮ, ವಿಶೇಷ ರಂಗಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಭಕ್ತರು ಆಯೋಜಿಸಿದ ಭಜನೆ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಉತ್ಸಾಹಭರಿತ ದಾಂಡಿಯಾ ನೃತ್ಯೋತ್ಸವವು ದೇವಸ್ಥಾನದ ವಾತಾವರಣವನ್ನು ಭಕ್ತಿ ಮತ್ತು ಸಂಭ್ರಮದಿಂದ ತುಂಬಿದವು. ಪ್ರತಿದಿನವೂ ನಡೆದ ಅನ್ನಸಂತರ್ಪಣೆ ಸೇವೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತೃಪ್ತಿ ಪಟ್ಟರು.

​ಮಹೋತ್ಸವದ ಯಶಸ್ಸಿನ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ, ಈ ಮಹತ್ಕಾರ್ಯಕ್ಕೆ ಕಾರಣರಾದ ಎಲ್ಲ ಗಣ್ಯರು ಮತ್ತು ಕಾರ್ಯಕರ್ತರನ್ನು ಗೌರವಿಸಲಾಯಿತು. ಸಕಾಲದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ತಂತ್ರಿಗಳು, ಅರ್ಚಕ ವೃಂದ, ಹಗಲಿರುಳು ದುಡಿದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸಿಬ್ಬಂದಿ ವರ್ಗದವರನ್ನು ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

​ಅಲ್ಲದೆ, ಈ ಸಂದರ್ಭದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಜೇಶ್ ಜೆ ಶೆಟ್ಟಿ ಅವರು ಪ್ರಾಯೋಜಿಸಿದರು.

​ಈ ಬೃಹತ್ ಕಾರ್ಯಕ್ರಮದ ನಿರ್ವಹಣೆ ಮತ್ತು ಯಶಸ್ಸಿಗೆ, ಕಾರ್ಯಧ್ಯಕ್ಷರಾದ ಶ್ರೀ ಚಂದ್ರಕಾಂತ ಶೆಟ್ಟಿ, ಅಧ್ಯಕ್ಷರಾದ ಶ್ರೀ ರಾಜೇಶ್ ಜೆ ಶೆಟ್ಟಿ, ಸಂಯೋಜಕರಾದ ಶ್ರೀ ಕರುಣಾಕರ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಯುವರಾಜ್ ಪೂಜಾರಿ, ಗೌರವ ಕಾರ್ಯದರ್ಶಿ ಶ್ರೀ ಜಗದೀಶ ಶೆಟ್ಟಿ ಬೇಳಂಜೆ, ಕೋಶಾಧಿಕಾರಿ ಶ್ರೀ ಸಂತೋಷ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರೇಮ್ ಕುಮಾರ್ ರೈ ಮತ್ತು ಶ್ರೀ ಗಣೇಶ್ ಶೆಟ್ಟಿ ನಂದ್ರೋಳಿ, ಜೊತೆ ಕೋಶಾಧಿಕಾರಿ ಶ್ರೀ ಸದಾನಂದ ಸಾಲ್ಯಾನ್ ಮತ್ತು ಶ್ರೀ ವಸಂತ್ ಶೆಟ್ಟಿ ಅವರು ನೇತೃತ್ವ ವಹಿಸಿದ್ದರು.

​ಇವರಿಗೆ ಮಹಿಳಾ ವಿಭಾಗದ ಕಾರ್ಯದಕ್ಷೆ ಶ್ರೀಮತಿ ಜ್ಯೋತಿ ಸುದಾನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ದೀಪಕ್ ಬಂಗೇರಾ, ಟ್ರಸ್ಟಿಗಳು, ಸಲಹೆಗಾರರು, ಮುಖ್ಯ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಮತ್ತು ಅಸಂಖ್ಯಾತ ಭಕ್ತಾದಿಗಳು ತುಂಬು ಹೃದಯದ ಸಹಕಾರ ನೀಡಿದರು.

​ದೇವಸ್ಥಾನದ ಆಡಳಿತ ಮಂಡಳಿಯು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತಮ್ಮ ತನು-ಮನ-ಧನದಿಂದ ಸಹಕರಿಸಿದ ಎಲ್ಲ ಸಜ್ಜನರಿಗೂ ಕ್ಷೇತ್ರದ ಆರಾಧ್ಯ ದೇವಿಯಾದ ಅಮ್ಮ ಮೂಕಾಂಬಿಕೆ, ಮಹಾಗಣಪತಿ ದೇವರು ಮತ್ತು ಶ್ರೀ ನಿತ್ಯಾನಂದ ಸ್ವಾಮಿಗಳು ಆಯುಸ್ಸು, ಆರೋಗ್ಯ, ಸಕಲ ಸಂಪತ್ತನ್ನು ನೀಡಿ ಅನುಗ್ರಹಿಸಲೆಂದು ಪ್ರಾರ್ಥಿಸಿದರು.



Related posts

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ಸೀರೆಗಳು, ಫ್ಯಾಷನ್ ಜುವೆಲರಿ, ಡ್ರೆಸ್‌ ಮೆಟೀರಿಯಲ್ ಪ್ರದರ್ಶನ – ಮಾರಾಟ.

Mumbai News Desk

ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ದಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ, ಶತಮಾನೋತ್ಸವಾಚರಣೆಗೆ ಪಾದಯಾತ್ರೆಯ ಮೂಲಕ ಚಾಲನೆ. 

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ – ಆಷಾಢ ಹಬ್ಬ ಆಚರಣೆ,

Mumbai News Desk

ಸಾನ್ವಿ ಸುಧೀರ್ ಆಚಾರ್ಯಗೆ ಶೇ. 82 ಅಂಕ

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk