ಮುಂಬಯಿ : ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷರಾಗಿದ್ದ ಬಿ ಮುನಿರಾಜ್ ಜೈನ್ ಅವರು ಜುಲೈ 29 ರಂದು ತವರೂರಲ್ಲಿ ನಿಧನರಾಗಿದ್ದು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಆ. 10 ರಂದು ಸಂಜೆ 6 ಗಂಟೆಗೆ ಸಾಂತಾಕ್ರೂಜ್ ಪೂರ್ವ ಬಿಲ್ಲವ ಭವನದಲ್ಲಿ ಶ್ರದ್ಧಾಂಜಲಿ ಸಭೆ ಯನ್ನು ನಡೆಸಲಿದೆ.
ಸರಳ ಸಜ್ಜನ ವ್ಯಕ್ಟಿತ್ವದ ಬಿ ಮುನಿರಾಜ್ ಜೈನ್ ಅವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯೊಂದಿಗೆ ಪ್ರಾರಂಭದಿಂದಲೇ ಸುದೀರ್ಘ ಒಡನಾಟ ಹೊಂದಿದ್ದು ಪ್ರಸ್ತುತ ಸಮಿತಿಯ ಗೌರವ ಕಾರ್ಯಾದರ್ಶಿಯಾಗಿದ್ದರು.
ಈ ಸಭೆಯಲ್ಲಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಬೇಕಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್ ವಿನಂತಿಸಿದ್ದಾರೆ.