September 6, 2026
Mumbai News Kannada
ಪ್ರಕಟಣೆ

ಫೆ.15 ರಂದು ಶಹಾಡ್‌ನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ





ಕಲ್ಯಾಣ್: ಇಲ್ಲಿನ ಬಿರ್ಲಾ ಗೇಟ್ ಶಹಾಡ್‌ನಲ್ಲಿರುವ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ (ರಿ.) ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 15ರ ಭಾನುವಾರದಿಂದ ಏಕಾಹ ಭಜನೆ ಹಾಗೂ ಅಖಂಡ 24 ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

​ಕಾರ್ಯಕ್ರಮದ ವಿವರ:

​ಫೆಬ್ರವರಿ 15ರ ಭಾನುವಾರ ಬೆಳಿಗ್ಗೆ 7.45ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆಗೊಳ್ಳಲಿದ್ದು, ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಸೇವೆ ನಡೆಯಲಿದೆ.

ಭಜನಾ ತಂಡಗಳ ವೇಳಾಪಟ್ಟಿ:

  • ಬೆಳಿಗ್ಗೆ 8.00 – 9.00: ಸರಸ್ವತಿ ಭಜನಾ ಮಂಡಳಿ, ಶಹಾಡ್ (ಮಕ್ಕಳ ಗುಂಪು)
  • 9.00 – 10.00: ಯಶಸ್ವಿ ಭಜನಾ ಮಂಡಳಿ, ಡೊಂಬಿವಲಿ
  • 10.00 – 11.00: ಶ್ರೀ ಭ್ರಮರಾಂಭಿಕೆ ಭಜನಾ ಮಂಡಳಿ, ಡೊಂಬಿವಲಿ
  • 11.00 – ಮಧ್ಯಾಹ್ನ 12.00: ದಾಸ ಸಾಹಿತ್ಯ ಭಜನಾ ಮಂಡಳಿ, ಸಿಬಿಡಿ ಬೆಲಾಪುರ
  • ಮಧ್ಯಾಹ್ನ 12.00 – 1.00: ಸಿರಿನಾಡ ಭಜನಾ ಮಂಡಳಿ, ಡೊಂಬಿವಲಿ
  • 1.00 – 2.00: ಕರ್ನಾಟಕ ಸಂಘ ಡೊಂಬಿವಲಿ (ಮಹಿಳಾ ವಿಭಾಗ)
  • 2.00 – 3.00: ಅಯ್ಯಪ್ಪ ಸೇವಾ ಸಮಿತಿ, ಐರೋಲಿ
  • 3.00 – 4.00: ಜಗದಂಬಾ ಮಂದಿರ, ಡೊಂಬಿವಲಿ
  • 4.00 – 5.00: ಜೈ ಭವಾನಿ ಶನೀಶ್ವರ ಮಂದಿರ ಅಜೆಂಗಾವ್, ಡೊಂಬಿವಲಿ
  • 5.00 – ಸಂಜೆ 6.00: ಭ್ರಾಮರಿ ಭಜನಾ ಮಂಡಳಿ, ಡೊಂಬಿವಲಿ
  • ಸಂಜೆ 6.00 – 7.00: ಮೊಗವೀರ ವ್ಯವಸ್ಥಾಪಕ ಮಂಡಳಿ, ಡೊಂಬಿವಲಿ
  • 7.00 – 8.00: ವೆಂಕಟ ರಮಣ ಭಜನಾ ಮಂಡಳಿ, ಡೊಂಬಿವಲಿ
  • ರಾತ್ರಿ 8.00 – 9.00: ವರದಾ ಸಿದ್ಧಿವಿನಾಯಕ ಸೇವಾ ಮಂಡಳಿ, ಡೊಂಬಿವಲಿ
  • 9.00 – 10.00: ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ (ಭಿವಂಡಿ ಟು ಬದ್ಲಾಪುರ್)
  • 10.00 – 11.00: ಗುರು ನಾರಾಯಣ ಭಜನಾ ಮಂಡಳಿ ಬಿಲ್ಲವ ಅಸೋಸಿಯೇಶನ್, ಕಲ್ಯಾಣ್
  • ರಾತ್ರಿ 11.00 – 12.00: ಸಾಯಿ ನಿತ್ಯಾನಂದ ಭಜನಾ ಮಂಡಳಿ, ಭಿವಂಡಿ

ಫೆಬ್ರವರಿ 16ರ ಮುಂಜಾನೆ

ಮಧ್ಯರಾತ್ರಿ 12.00 ರಿಂದ ಮುಂಜಾನೆ 6.00ರ ವರೆಗೆ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ (ಬಿರ್ಲಾ ಗೇಟ್), ಗುರುವಂದನಾ ಭಜನಾ ಮಂಡಳಿ (ಕುಲಾಲ ಸಂಘ ಮುಂಬಯಿ) ಹಾಗೂ ನಿತ್ಯಾನಂದ ಭಜನಾ ಮಂಡಳಿ (ಬದ್ಲಾಪುರ) ಇವರಿಂದ ಭಜನೆ ನಡೆಯಲಿದೆ. ಮುಂಜಾನೆ 6.00 ರಿಂದ 8.00 ರವರೆಗೆ ಸ್ವರ ಕಲಾ ವೇದಿಕೆ ಕರ್ನಾಟಕ ಸಂಘ ಕಲ್ಯಾಣ್ ಇವರಿಂದ ಕಾರ್ಯಕ್ರಮ ನೆರವೇರಲಿದೆ.

​ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ, ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಸಂಯೋಜಕರಾದ ಕರುಣಾಕರ ಶೆಟ್ಟಿ, ಉಪಾಧ್ಯಕ್ಷರಾದ ಯುವರಾಜ್ ಪೂಜಾರಿ, ಗೌರವ ಕಾರ್ಯದರ್ಶಿ ಜಗದೀಶ ಶೆಟ್ಟಿ ಬೇಳಂಜೆ, ಕೋಶಾಧಿಕಾರಿ ಸಂತೋಷ ಶೆಟ್ಟಿ. ಜೊತೆ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್ ರೈ, ಗಣೇಶ್ ಶೆಟ್ಟಿ ನಂದ್ರೋಳಿ, ಜೊತೆ ಕೋಶಾಧಿಕಾರಿ ಸದಾನಂದ ಸಾಲ್ಯಾನ್, ವಸಂತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಸುದಾನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಬಂಗೇರಾ ಹಾಗೂ ಟ್ರಸ್ಟಿಗಳು, ಸಲಹೆಗಾರರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಡೊಂಬಿವಲಿಯಲ್ಲಿ ಜುಲೈ 19ರಂದು ‘ಚಕ್ರವ್ಯೂಹ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

Mumbai News Desk

ಜೀವ ರಕ್ಷಕ, ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ 10ನೇ ಮೂಲತ್ವ ವಿಶ್ವ ಪ್ರಶಸ್ತಿ 2024

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ ಭಾಂಡುಪ್ : ಜ. 30ರಿಂದ, ಫೆ. 1ರ ತನಕ 41ನೇ ವಾರ್ಷಿಕ ಮಹಾಪೂಜೆ.

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಬೊಂಬೇ ಬಂಟ್ಸ್ ಅಸೋಷಿಯೇಶನ್ ಮಹಿಳಾ ವಿಭಾಗ, ಜೂ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk