ಬೊರಿವಿಲಿ ,ಆ;7: ಜಯರಾಜ್ ನಗರದ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆ 9ರಂದು ಬೆಳಿಗ್ಗೆ 7.30 ಪ್ರಾರಂಭಗೊಂಡು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರುವುದು. ಪಂಚಾಮೃತ ಸೇವೆ ಕ್ಷೀರ ಶಿಯಾಳ ಅಭಿಷೇಕ ಪಂಚಾಮೃತ ಅಭಿಷೇಕ ಪೂರ್ಣ ಅಲಂಕಾರ ಸೇವೆ ಮಹಾ ಪೂಜೆ ಜರುಗಿದ ನಂತರ ಮಹಾಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾಭಿಮಾನಿಗಳೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹ ಪರಿವಾರ ಸಹಿತ ಶ್ರೀ ಮಹಿಷಮರ್ಧಿನಿ ಹಾಗೂ ನಾಗದೇವರ ಕೃಪೆಗೆ ಪಾತ್ರರಾಗಬೇಕೆಂದು ವಂಶಸ್ಥ ಸ್ಥಾಪಕ ಮೊಕ್ತೇಸರರಾದ ಕಲ್ಲಮುಂಡ್ಕೂರು ಹರಿಯಾಳ ಗುತ್ತು ಶ್ರೀಮತಿ ಶ್ರೀ ಜಯರಾಜ್ ಶ್ರೀಧರ್ ಶೆಟ್ಟಿ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ ಮೊಕ್ತೇಸರರಾದ ಜಯಪಾಲಿ ಅಶೋಕ್ ಶೆಟ್ಟಿ, ಅರ್ಚಕವೃಂದ ದೇವಸ್ಥಾನದ ಆಡಳಿತ ಮಂಡಳಿ ಮಹಿಷಮರ್ಧಿನಿ ಭಜನ ಮಂಡಳಿ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

previous post